Just In
Don't Miss!
- Movies
ತಮ್ಮ ದಿನಕರ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟ ದರ್ಶನ್
- News
ಅಮೇಥಿ ಕುರಿತ ಹೇಳಿಕೆಗೆ ರಾಹುಲ್ ವಿರುದ್ಧ ಸ್ಮೃತಿ ಇರಾನಿ ಆಕ್ರೋಶ
- Sports
ಸ್ವಿಸ್ ಓಪನ್ 2021: ಫೈನಲ್ಗೆ ಲಗ್ಗೆಯಿಟ್ಟ ಭಾರತದ ಪಿವಿ ಸಿಂಧು
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Lifestyle
ಮಹಾಶಿವರಾತ್ರಿ: ಶಿವನಿಗೆ ಪೂಜೆ ಸಲ್ಲಿಸುವಾಗ ಇವುಗಳನ್ನು ದೂರವಿಡಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತನ್ನ ತೂಕಕ್ಕಿಂತ ಹತ್ತು ಪಟ್ಟು ಹೆಚ್ಚು ತೂಕವನ್ನು ಎಳೆದ ಡಿಫೆಂಡರ್ ಎಸ್‌ಯುವಿ
ಲ್ಯಾಂಡ್‌ರೋವರ್ ದೃಢವಾದ ಹಾಗೂ ಬಾಳಿಕೆ ಬರುವ ಎಸ್‌ಯುವಿಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ಲ್ಯಾಂಡ್ ರೋವರ್ ಕಂಪನಿಯ ಡಿಫೆಂಡರ್ ಎಸ್‌ಯುವಿ ತನ್ನ ಶಕ್ತಿಯುತ ಎಂಜಿನ್‌ಗೆ ಹೆಸರುವಾಸಿಯಾಗಿದೆ. ದಾರಿ ಯಾವುದೇ ಇರಲಿ ಲ್ಯಾಂಡ್ ರೋವರ್ ಡಿಫೆಂಡರ್ ಸುಲಭವಾಗಿ ಚಲಿಸುತ್ತದೆ.

ಈ ಎಸ್‌ಯುವಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆ ನಡೆಯುತ್ತದೆ. ಈಗ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಲೈಕ್ ಗಿಟ್ಟಿಸಿದೆ. ಈ ವೀಡಿಯೊದಲ್ಲಿ ಡಿಫೆಂಡರ್ ಎಸ್‌ಯುವಿಯು ಟ್ರಕ್ ಅನ್ನು ಎಳೆಯುವುದನ್ನು ಕಾಣಬಹುದು.

ಈ ವೀಡಿಯೊವನ್ನು ಲ್ಯಾಂಡ್ ರೋವರ್ ಕಂಪನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದೆ. ಈ ವೀಡಿಯೊದಲ್ಲಿರುವ ಲ್ಯಾಂಡ್ ರೋವರ್ ಡಿಫೆಂಡರ್ ಎಳೆಯುತ್ತಿರುವುದು ಖಾಲಿಯಾಗಿರುವ ಟ್ರಕ್'ನಲ್ಲ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬದಲಿಗೆ 7 ಎಸ್‌ಯುವಿಗಳನ್ನು ಹೊಂದಿರುವ ಟ್ರಕ್ ಅನ್ನು. ಈ ಮೂಲಕ ಡಿಫೆಂಡರ್ ಎಸ್‌ಯುವಿಯು ತನ್ನ ತೂಕಕ್ಕಿಂತ 10 ಪಟ್ಟು ಹೆಚ್ಚು ತೂಕವನ್ನು ಸುಲಭವಾಗಿ ಎಳೆಯುತ್ತಿದೆ ಎಂದು ಲ್ಯಾಂಡ್ ರೋವರ್ ಕಂಪನಿ ಹೇಳಿದೆ.

ಈ ವೀಡಿಯೊವನ್ನು ಲ್ಯಾಂಡ್ ರೋವರ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಹಿಮಪಾತದಿಂದಾಗಿ ಎಸ್‌ಯುವಿಗಳನ್ನುಹೊತ್ತೊಯ್ಯುತ್ತಿದ್ದ ಭಾರೀ ಸರಕು ಸಾಗಣೆಯ ಟ್ರಕ್ ಸಿಲುಕಿಕೊಂಡಿತ್ತು ಎಂದು ಕಂಪನಿಯು ಟ್ವೀಟ್‌ನಲ್ಲಿ ತಿಳಿಸಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಡಿಫೆಂಡರ್ ಎಸ್‌ಯುವಿಯ ಎಳೆಯುವ ಸಾಮರ್ಥ್ಯವು ಅದ್ಭುತವಾಗಿರುವ ಕಾರಣಕ್ಕೆ ಈ ಎಸ್‌ಯುವಿಯು ತನ್ನ ತೂಕಕ್ಕಿಂತ 10 ಪಟ್ಟು ಹೆಚ್ಚು ತೂಕವನ್ನು ಎಳೆಯುತ್ತಿದೆ. ಅಧಿಕೃತ ಮಾಹಿತಿಗಳ ಪ್ರಕಾರ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು 900 ಕೆ.ಜಿ ತೂಕವಿದ್ದು, 900 ಎಂಎಂ ಆಳವಾದ ನೀರಿನಲ್ಲಿ ಸುಲಭವಾಗಿ ಚಲಿಸುತ್ತದೆ.

ಡಿಫೆಂಡರ್ ಎಸ್‌ಯುವಿಯನ್ನು ಹೊಸ ಡಿಎಕ್ಸ್ 7 ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿದೆ. ಲ್ಯಾಂಡ್ ರೋವರ್ ಪ್ರಕಾರ ಈ ಪ್ಲಾಟ್‌ಫಾರಂ ಕಂಪನಿಯು ನಿರ್ಮಿಸಿದ ಅತ್ಯಂತ ಕಠಿಣ ಪ್ಲಾಟ್‌ಫಾರಂ ಆಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಡಿಫೆಂಡರ್ ಎಸ್‌ಯುವಿಯ ಸಾಮರ್ಥ್ಯವನ್ನು ಪರೀಕ್ಷಿಸಲು 45,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಬ್ರಿಟನ್ ಮೂಲದ ಕಾರು ತಯಾರಕಕಂಪನಿಯಾದ ಲ್ಯಾಂಡ್ ರೋವರ್ ತಿಳಿಸಿದೆ.

ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿಯು ಇತ್ತೀಚೆಗೆ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಹೊಸ ಡಿಫೆಂಡರ್ ಎಸ್‌ಯುವಿಯನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇತ್ತೀಚಿಗೆ ಬಿಡುಗಡೆಗೊಳಿಸಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಡಿಫೆಂಡರ್ ಎಸ್‌ಯುವಿಯು ತನ್ನ ಸುರಕ್ಷತಾ ಫೀಚರ್'ಗಳ ಕಾರಣದಿಂದಾಗಿ ಸುದ್ದಿಯಲ್ಲಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು 2020ರ ಅಕ್ಟೋಬರ್ 15ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.73.93 ಲಕ್ಷಗಳಾಗಿದೆ. ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ ಎಸ್‌ಯುವಿಯ ಹೈಬ್ರಿಡ್ ಮಾದರಿಯನ್ನು ಸಹ ಬಿಡುಗಡೆಗೊಳಿಸಿದೆ. ಈ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳನ್ನು ಸೇರಿಸಲಾಗಿದೆ.