ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಕಾಲಕ್ಕೆ ತಕ್ಕಂತೆ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಆಧುನಿಕ ಟೆಕ್ನಾಲಜಿಗಳೊಂದಿಗೆ ಅಪ್ ಡೇಟ್ ಮಾಡುತ್ತಿವೆ. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಕನೆಕ್ಟೆಡ್ ಕಾರು ಟೆಕ್ನಾಲಜಿಯನ್ನು ನೀಡಲಾಗುತ್ತಿದೆ.

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಕನೆಕ್ಟೆಡ್ ಕಾರುಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಕನೆಕ್ಟೆಡ್ ಕಾರುಗಳು ಎಂದರೆ ಏನು, ಅವುಗಳು ಭಾರತಕ್ಕೆ ಯಾವಾಗ ಕಾಲಿಟ್ಟವು, ಅವುಗಳು ಯಾವ ಕಾರಣಕ್ಕೆ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಕನೆಕ್ಟೆಡ್ ಕಾರಿನ ವ್ಯಾಖ್ಯಾನ

ಕನೆಕ್ಟೆಡ್ ಕಾರುಗಳೆಂದರೆ ಕಾರಿನೊಳಗೆ ಹಾಗೂ ಕಾರಿನ ಹೊರಗೆ ನೆಟ್‌ವರ್ಕ್ ಅಥವಾ ಇನ್ನಿತರ ಸೇವೆಗಳನ್ನು ಸಂಪರ್ಕಿಸಲು ಸಾಧನಗಳನ್ನು ಹೊಂದಿರುವ ಕಾರುಗಳು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಸಾಮಾನ್ಯವಾಗಿ ಈ ಕಾರುಗಳಲ್ಲಿ ಇಂಟರ್ ನೆಟ್ ಗಾಗಿ ಲೋಕಲ್ ಏರಿಯಾ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲಾಗುತ್ತದೆ. ಈ ಕಾರಣಕ್ಕೆ ಕನೆಕ್ಟೆಡ್ ಕಾರುಗಳನ್ನು ಇಂಟರ್ ನೆಟ್ ಆಫ್ ಥಿಂಗ್ಸ್ ಎಂದು ಅನೇಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಇದರಿಂದಾಗಿ ಈ ಕಾರುಗಳೊಳಗೆ ಅನೇಕ ಮಾಹಿತಿಗಳು ಕಂಡುಬರುತ್ತವೆ. ಬೇರೆ ಕಾರುಗಳಲ್ಲಿ ಈ ಮಾಹಿತಿಗಳು ಕಂಡುಬರುವುದಿಲ್ಲ. ಇವುಗಳು ಕಾರು ಚಾಲನೆ, ಫೀಚರ್ ಹಾಗೂ ಸುರಕ್ಷತೆ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಕನೆಕ್ಟೆಡ್ ಕಾರುಗಳನ್ನು ಸುರಕ್ಷತೆ, ನ್ಯಾವಿಗೇಷನ್, ಇನ್ಫೋಟೇನ್‌ಮೆಂಟ್, ಡಯಾಗ್ನಾಸ್ಟಿಕ್, ಪೇಮೆಂಟ್ ಸೇರಿದಂತೆ ಹಲವು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ಕಾರುಗಳ ಆಗಮನವು ಕಾರು ಪ್ರಪಂಚದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಿದೆ. ಈ ಫೀಚರ್ ಅನ್ನು ಈಗ ಪ್ರತಿ ಪ್ರೀಮಿಯಂ ಕಾರಿನಲ್ಲೂ ಅಗತ್ಯ ಫೀಚರ್ ಆಗಿ ನೀಡಲಾಗುತ್ತಿದೆ.

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಪ್ರಯೋಜನಗಳು

ಕನೆಕ್ಟೆಡ್ ಕಾರುಗಳಲ್ಲಿ ಹಾಡುಗಳನ್ನು ನೇರವಾಗಿ ಇಂಟರ್ ನೆಟ್ ನಿಂದ ಕೇಳಬಹುದು. ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು. ಇದರೊಂದಿಗೆ ವಾಯ್ಸ್ ಕಮ್ಯಾಂಡ್, ಹ್ಯಾಂಡ್ಸ್ ಫ್ರೀ ಕಂಟ್ರೋಲ್, ಬ್ಲೂಟೂತ್, ಹಾಟ್ ಸ್ಪಾಟ್, ಸರ್ವೀಸ್ ಹಾಗೂ ರೆಸ್ಪಾನ್ಸ್ ಗಳನ್ನು ನೇರವಾಗಿ ಕಂಪನಿಯ ಸರ್ವೀಸ್ ಸೆಂಟರ್ ಗಳಿಂದ ಪಡೆಯಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಕನೆಕ್ಟೆಡ್ ಕಾರು ಸುರಕ್ಷತೆಯನ್ನು ಸುಧಾರಿಸಲು ನೆರವಾಗುತ್ತದೆ. ಕನೆಕ್ಟೆಡ್ ಕಾರಿನ ಸಹಾಯದಿಂದ ರೋಡ್ ಸೈಡ್ ಅಸಿಸ್ಟೆನ್ಸ್ ನೀಡಲಾಗುತ್ತದೆ. ಇದು ತಕ್ಷಣವೇ ನೆರವಿಗೆ ಧಾವಿಸುತ್ತದೆ.

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಇದರ ಜೊತೆಗೆ ಟ್ರಾಫಿಕ್ ಅಪ್‌ಡೇಟ್‌, ಅಪಘಾತಗಳನ್ನು ತಡೆಗಟ್ಟಲು ಕೊಲ್ಯೂಷನ್ ವಾರ್ನಿಂಗ್ ಗಳನ್ನು ನೀಡುತ್ತದೆ. ಇದರೊಂದಿಗೆ ಕಾರಿನ ಹೆಲ್ತ್ ರಿಪೋರ್ಟ್, ಸರ್ವೀಸ್ ರಿಮ್ಯಾಂಡರ್ ಬಗ್ಗೆ ಮಾಹಿತಿ ಒದಗಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಇದಲ್ಲದೆ ಹವಾಮಾನ, ಟ್ರಾಫಿಕ್ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಫೋನ್ ಕಾಲ್ ಮಾಡುವುದನ್ನು ಹಾಗೂ ಎಸ್ಎಂಎಸ್ ಕಳುಹಿಸುವುದನ್ನು ಸುಲಭವಾಗಿಸುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಕನೆಕ್ಟೆಡ್ ಕಾರುಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಜನಪ್ರಿಯವಾಗುತ್ತಿರುವ ಕನೆಕ್ಟೆಡ್ ಕಾರುಗಳ ಬಗೆಗಿನ ರೋಚಕ ಸಂಗತಿಗಳಿವು

ಹ್ಯುಂಡೈ ಕಂಪನಿಯ ವೆನ್ಯೂ ಭಾರತದ ಮೊದಲ ಕನೆಕ್ಟೆಡ್ ಕಾರು. ಈ ಕಾರನ್ನು 2019ರಲ್ಲಿ ಬಿಡುಗಡೆಗೊಳಿಸಲಾಯಿತು. ಎಂಜಿ ಮೋಟಾರ್ಸ್ ಕಂಪನಿಯ ಹೆಕ್ಟರ್ ಭಾರತದ ಮೊದಲ ಇಂಟರ್ನೆಟ್ ಕಾರು. ಈ ಕಾರುಗಳ ನಂತರ ಹೆಚ್ಚಿನ ಕಾರುಗಳಲ್ಲಿ ಈ ಫೀಚರ್ ಗಳನ್ನು ನೀಡಲಾಗುತ್ತಿದೆ.

Most Read Articles

Kannada
English summary
Definition and specialities of connected cars. Read in Kannada.
Story first published: Wednesday, November 18, 2020, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X