ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ದೆಹಲಿಯಲ್ಲಿ ವಾಹನ ಸಾಲ ಪಡೆಯುವವರು ನವೆಂಬರ್ ನಿಂದ ಬ್ಯಾಂಕ್ ಶಾಖೆಗಳಿಗೆ ಅಥವಾ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ವಾಹನ್ ಪೋರ್ಟಲ್‌ನೊಂದಿಗೆ ವಾಹನ ಸಾಲದ ಡೇಟಾವನ್ನು ಸಂಯೋಜಿಸಲು ದೆಹಲಿ ಸರ್ಕಾರವು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಎನ್‌ಬಿ‌ಎಫ್‌ಸಿಗಳಿಗೆ ಸೂಚನೆ ನೀಡಿದೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ನವೆಂಬರ್ ನಿಂದ ದೆಹಲಿಯ ಯಾವುದೇ ಹಣಕಾಸು ಸಂಸ್ಥೆಯಿಂದ ವಾಹನ ಸಾಲ ಪಡೆಯುವ ಯಾವುದೇ ಅರ್ಜಿದಾರರು ಬ್ಯಾಂಕಿಗೆ ಭೇಟಿ ನೀಡುವ ಅಥವಾ ಭೌತಿಕವಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲವೆಂದು ದೆಹಲಿ ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ರವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ಈ ಕುರಿತು ಮಾತನಾಡಿದ ಅವರು, ಕಳೆದ ತಿಂಗಳು ನಾವು ಎಲ್ಲಾ ಬ್ಯಾಂಕುಗಳು ತಮ್ಮ ವಾಹನ ಸಾಲದ ಡೇಟಾವನ್ನು ವಾಹನ ಪೋರ್ಟಲ್'ನೊಂದಿಗೆ ಸಂಯೋಜಿಸಲು ಕಟ್ಟು ನಿಟ್ಟಾದ ಗಡುವು ನೀಡಿದ್ದೆವು. ಈಗ ಬಹುತೇಕ ಕಾರ್ಯವು ಮುಗಿದಿದೆ ಎಂದು ಹೇಳಿದರು. ಅಕ್ಟೋಬರ್ 31 ರ ನಂತರ ದೆಹಲಿಯಲ್ಲಿ ವಾಹನಗಳ ಹೈಪೋಥೆಕೇಶನ್‌ಗೆ ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ಈ ಆದೇಶದ ನಂತರ, ವಾಹನ ಸಾಲ ನೀಡುವ ಕಂಪನಿಗಳು ಅಥವಾ ಹಣಕಾಸು ಸಂಸ್ಥೆಗಳು ಹೈಪೋಥಿಕೇಶನ್ ಟರ್ಮಿನೇಶನ್ ಹಾಗೂ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಓ‌ಸಿ) ಗಾಗಿ ಆನ್‌ಲೈನ್ ಅರ್ಜಿಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ವರದಿಗಳ ಪ್ರಕಾರ, ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ನಂತಹ ಖಾಸಗಿ ಬ್ಯಾಂಕುಗಳು ದೆಹಲಿಯ ಎಲ್ಲಾ ವಾಹನ ಸಾಲಗಳಲ್ಲಿ 70 - 80% ನಷ್ಟು ಪ್ರತಿಶತವನ್ನು ಹೊಂದಿವೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ಈ ಬ್ಯಾಂಕುಗಳು ಈಗಾಗಲೇ ತಮ್ಮ ಸಾಲದ ಡೇಟಾವನ್ನು ವಾಹನ್ ಪೋರ್ಟಲ್‌ನೊಂದಿಗೆ ಸಂಯೋಜಿಸಿವೆ. ಏತನ್ಮಧ್ಯೆ, ದೆಹಲಿ ಸಾರಿಗೆ ಇಲಾಖೆಯು ವಾಹನದ ಫಿಟ್ ನೆಸ್, ಪರವಾನಗಿ, ಚಾಲನಾ ಪರವಾನಗಿ, ನೋಂದಣಿ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ನವೆಂಬರ್ 30 ರವರೆಗೆ ವಿಸ್ತರಿಸಿದೆ. 2020ರ ಫೆಬ್ರವರಿ ಹಾಗೂ 2021ರ ಸೆಪ್ಟೆಂಬರ್ 30ರವರೆಗೆ ನಡುವೆ ಅವಧಿ ಮುಗಿದಿರುವ ದಾಖಲೆಗಳನ್ನು ಈಗ ನವೆಂಬರ್ 30 ರವರೆಗೆ ನವೀಕರಿಸಬಹುದು.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ತಾಂತ್ರಿಕ ಸಮಸ್ಯೆಗಳು, ಬಾಕಿ ಹಾಗೂ ದೂರುಗಳ ಪರಿಹಾರದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ದೆಹಲಿ ಸರ್ಕಾರದ ಪ್ರಕಟಣೆ ತಿಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಹಂತದ ಆನ್ ಲೈನ್ ಸೇವೆ ಆರಂಭದ ನಂತರ 2,16,835 ವಾಹನ ಸಂಬಂಧಿತ ಅರ್ಜಿಗಳು ಹಾಗೂ ಚಾಲನಾ ಪರವಾನಗಿ ಸಂಬಂಧಿತ ಸೇವೆಗಳಿಗಾಗಿ 2,08,224 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿ ಕೊಂಡಿದೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ಈ ಅರ್ಜಿಗಳಲ್ಲಿ 92% ರಷ್ಟು ಚಾಲನಾ ಪರವಾನಗಿ ಹಾಗೂ 79.9% ರಷ್ಟು ಇತರ ವಾಹನ ಸಂಬಂಧಿತ ಅರ್ಜಿಗಳಿಗೆ ಸೆಪ್ಟೆಂಬರ್ 27 ರವರೆಗೆ ಅನುಮೋದನೆ ನೀಡಲಾಗಿದೆ. ಆಗಸ್ಟ್ 7 ರಿಂದ ದೆಹಲಿಯಲ್ಲಿ ಆನ್‌ಲೈನ್ ಚಾಲನಾ ಕಲಿಕಾ ಪರವಾನಗಿ ಅರ್ಜಿ ಆರಂಭವಾದ ನಂತರ, ಸೆಪ್ಟೆಂಬರ್ 28 ರವರೆಗೆ ಒಟ್ಟು 57,755 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಮೂಲಕ 78% ಕ್ಕಿಂತ ಹೆಚ್ಚು ಅರ್ಜಿದಾರರಿಗೆ ಇ ಲರ್ನರ್ ಪರವಾನಗಿ ನೀಡಲಾಗಿದೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ದೆಹಲಿಯಲ್ಲಿ ಪಿಯುಸಿ ಪ್ರಮಾಣ ಪತ್ರ ಕಡ್ಡಾಯ

ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದ ಮೊದಲು ವಾಯು ಮಾಲಿನ್ಯವನ್ನು ಎದುರಿಸಲು, ದೆಹಲಿ ಸರ್ಕಾರವು ರಾಜ್ಯದಲ್ಲಿ ಮಾಲಿನ್ಯದ ಅಡಿಯಲ್ಲಿ ಎಲ್ಲಾ ವಾಹನಗಳು ನಿಯಂತ್ರಣ ಪ್ರಮಾಣ ಪತ್ರ (ಪಿಯುಸಿ) ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಇನ್ನು ಮುಂದೆ ಪಿಯುಸಿ ಪ್ರಮಾಣ ಪತ್ರ ಇಲ್ಲದೆ ವಾಹನ ಚಾಲನೆ ಮಾಡುವಾಗ ಸಿಕ್ಕಿ ಬೀಳುವವರು ರೂ. 10,000 ದಂಡ ತೆರ ಬೇಕಾಗುತ್ತದೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ಇದು ಮಾತ್ರವಲ್ಲದೇ ವಾಹನವು ಮಾನ್ಯ ಪಿಯುಸಿ ಪ್ರಮಾಣ ಪತ್ರ ಪಡೆಯದಿದ್ದರೆ, 6 ತಿಂಗಳ ಜೈಲು ಶಿಕ್ಷೆ ಅಥವಾ 3 ತಿಂಗಳ ಕಾಲ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದು. ದೆಹಲಿಯಲ್ಲಿ ಸಾರಿಗೆ ಇಲಾಖೆಯಿಂದ ಅನುಮೋದಿಸಲ್ಪಟ್ಟ 900 ಕ್ಕೂ ಹೆಚ್ಚು ಮಾಲಿನ್ಯ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳು ದೆಹಲಿ ನಗರದಾದ್ಯಂತ ಹರಡಿದ್ದು ಪೆಟ್ರೋಲ್ ಬಂಕ್ ಹಾಗೂ ವರ್ಕ್ ಶಾಪ್ ಗಳಲ್ಲಿ ಕಾರ್ಯ ನಿರ್ವಹಿಸುತ್ತವೆ.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ದೆಹಲಿ ಸಾರಿಗೆ ಇಲಾಖೆಯು ಡ್ರೈವಿಂಗ್ ಟೆಸ್ಟ್ ನಲ್ಲಿ ಫೇಲ್ ಆಗುವವರ ತಪ್ಪುಗಳನ್ನು ಸರಿ ಪಡಿಸಲು ನೆರವಾಗಲಿದೆ. ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅನುತ್ತೀರ್ಣರಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸಾರಿಗೆ ಇಲಾಖೆಯು (ಡಿಟಿಸಿ) ವೀಡಿಯೋ ರೆಕಾರ್ಡಿಂಗ್‌ಗಳನ್ನು ಶೇರ್ ಮಾಡಲು ನಿರ್ಧರಿಸಿದೆ. ಅರ್ಜಿದಾರರು ಈ ವೀಡಿಯೊ ರೆಕಾರ್ಡಿಂಗ್‌ಗಳಲ್ಲಿ ತಾವು ಚಾಲನಾ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ವೀಕ್ಷಿಸುವ ಮೂಲಕ ಮುಂದಿನ ಬಾರಿ ಡ್ರೈವಿಂಗ್ ಟೆಸ್ಟ್ ನಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಬಹುದು.

ನವೆಂಬರ್'ನಿಂದ ಸರಳವಾಗಲಿದೆ ವಾಹನ ಸಾಲ ಪಡೆಯುವ ಪ್ರಕ್ರಿಯೆ

ಮೂಲಗಳ ಪ್ರಕಾರ ಆಟೊಮೇಟೆಡ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವ ಅರ್ಜಿದಾರರಿಗೆ ಅಕ್ಟೋಬರ್ ತಿಂಗಳಿನಿಂದ ಈ ಸೌಲಭ್ಯವನ್ನು ಆರಂಭಿಸಲಾಗುವುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಅವರು ಮಾಡಿದ ತಪ್ಪಿನ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ಜೊತೆಗೆ ವಿವರವಾದ ಪರೀಕ್ಷಾ ವರದಿಯನ್ನು ನೀಡಲಾಗುತ್ತದೆ. ವರದಿಗಳ ಪ್ರಕಾರ, ಈ ವೀಡಿಯೊ ಕ್ಲಿಪ್ ಅನ್ನು ವಾಟ್ಸಾಪ್ ಸಂದೇಶದ ಮೂಲಕ ಅರ್ಜಿದಾರರಿಗೆ ಕಳುಹಿಸಲಾಗುತ್ತದೆ. ಚಾಲನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರಿಗೆ ತಮ್ಮಿಂದ ಆಗುವ ತಪ್ಪುಗಳ ಬಗ್ಗೆ ತಿಳಿದಿರುವುದಿಲ್ಲ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi banks to integrate vehicle loan information to vahan portal details
Story first published: Tuesday, October 5, 2021, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X