ರಾಬರ್ಟ್ ವಾದ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಮತ್ತೆ ಸುದ್ದಿಯಾಗಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ದೆಹಲಿ ಪೊಲೀಸರು ರಾಬರ್ಟ್ ವಾದ್ರಾ ಅವರ ಕಾರಿಗೆ ದಂಡ ವಿಧಿಸಿದ್ದಾರೆ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ದೆಹಲಿ ಪೊಲೀಸರ ಪ್ರಕಾರ, ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 184 (ಡೇಂಜರಸ್ ಡ್ರೈವಿಂಗ್) ಅಡಿಯಲ್ಲಿ ರಾಬರ್ಟ್ ವಾದ್ರಾ ಅವರ ಕಾರಿಗೆ ದಂಡ ವಿಧಿಸಲಾಗಿದೆ. ಈ ಘಟನೆ ನಡೆದಾಗ ರಾಬರ್ಟ್ ವಾದ್ರಾ ತಮ್ಮ ಕಚೇರಿಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ರಾಬರ್ಟ್ ವಾದ್ರಾ ಅವರು ಚಲಿಸುತ್ತಿದ್ದ ಕಾರು ಹಿಂದೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಬರ್ಟ್ ವಾದ್ರಾ, ಇದು ಸುಖ್ ದೇವ್ ವಿಹಾರ್ ಪ್ರದೇಶದಲ್ಲಿ ನಡೆದ ಸಾಮಾನ್ಯ ಘಟನೆ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ನನ್ನ ಕಾರನ್ನು ಬಲಕ್ಕೆ ತಿರುಗಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಡ್ರೈವರ್ ಕಾರ್ ಅನ್ನು ರಾಂಪ್‌ಗೆ ಹಿಂತಿರುಗಲು ವಿಫಲನಾದ. ಆತ ತಿರುವಿನಲ್ಲಿ ಕಾರು ತಿರುಗಿಸಲು ರಿವರ್ಸ್ ಗೇರ್ ಹಾಕಿದ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ಈ ವೇಳೆ ನಾನು ಇದ್ದ ಕಾರು ಹಿಂದೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದಾಗ ನಾನು ಕಾರನ್ನು ಚಾಲನೆ ಮಾಡುತ್ತಿರಲಿಲ್ಲ. ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾಧ್ರಾ ಅವರ ಕಾರಿಗೆ ದಂಡ ವಿಧಿಸಿದ್ದರಿಂದ ಈ ಘಟನೆ ದೊಡ್ಡ ಸುದ್ದಿಯಾಗಿದೆ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ಪೊಲೀಸರು ಗಣ್ಯ ವ್ಯಕ್ತಿಗಳಿಗೆ ದಂಡ ವಿಧಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ಹಿಂದೆ ಹಲವು ರಾಜಕಾರಣಿಗಳು, ಚಿತ್ರ ನಟ, ನಟಿಯರಿಗೆ ಹಾಗೂ ಕ್ರೀಡಾಪಟುಗಳಿಗೆ ದಂಡ ವಿಧಿಸಲಾಗಿದೆ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಎಲ್ಲಾ ಸಂಚಾರ ನಿಯಮಗಳನ್ನು ಪಾಲಿಸಬೇಕು. ರಸ್ತೆ ಅಪಘಾತಗಳು ಕಣ್ಣು ಮಿಟುಕಿಸುವುದರಲ್ಲಿ ಸಂಭವಿಸುತ್ತವೆ. ಈ ಕಾರಣಕ್ಕೆ ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸುವುದು ಮುಖ್ಯ.

ರಾಬರ್ಟ್ ವಾಧ್ರಾ ಚಲಿಸುತ್ತಿದ್ದ ಕಾರಿಗೆ ದಂಡ ವಿಧಿಸಿದ ದೆಹಲಿ ಪೊಲೀಸರು

ಇದು ವಾಹನ ಸವಾರರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ಪ್ರಯಾಣಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಸುರಕ್ಷತೆಯನ್ನು ನೀಡುತ್ತದೆ.ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಥವಾ ನಿರ್ಲಕ್ಷ್ಯದಿಂದ ವರ್ತಿಸಿದರೆ ಅಪಘಾತಗಳಾಗುವುದು ಖಚಿತ ಎಂಬುದನ್ನು ನೆನಪಿನಲ್ಲಿಡಿ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi cops fines Robert Vadra's car for dangerous driving. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X