ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಇತ್ತೀಚೆಗೆ ವಧು ಒಬ್ಬಳು ವಿವಾಹ ಸಮಾರಂಭಕ್ಕೆ ಕಾರಿನ ಬಾನೆಟ್‌ ಮೇಲೆ ಕುಳಿತು ತೆರಳುತ್ತಿದ್ದ ಕಾರಣ ಆಕೆಯ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆಕೆಯೊಂದಿಗೆ ಫೋಟೋಗ್ರಾಫರ್ ಹಾಗೂ ಆಕೆಯ ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತಿದ್ದ ಇಬ್ಬರು ಯುವಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಈ ಘಟನೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರುಗಳು ಬಳಕೆಯಾಗಿದ್ದವು. ಈ ಪೈಕಿ ಮಹೀಂದ್ರಾ ಸ್ಕಾರ್ಪಿಯೋ ಕಾರುನೋಂದಣಿ ಸಂಖ್ಯೆಯನ್ನೇ ಹೊಂದಿರಲಿಲ್ಲ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಇದು ಮಾತ್ರವಲ್ಲದೆ ಈ ಇಬ್ಬರು ಯುವಕರು ತಮ್ಮ ಜಾತಿಯನ್ನು ಸೂಚಿಸುವ ಬ್ಯಾನರ್ ಪ್ರದರ್ಶಿಸಿದ್ದರು. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಈ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಜೊತೆಗೆ ರೂ.36,000 ಗಳ ದಂಡವನ್ನೂ ವಿಧಿಸಿದ್ದಾರೆ. ಈ ಯುವಕರಿಗೆ ವಿರುದ್ಧ ವಿವಿಧ ಸೆಕ್ಷನ್'ಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಅನಿಯಮಿತ ವೇಗ, ಕೋವಿಡ್ -19 ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಇದರ ಜೊತೆಗೆ ಹೆಲ್ಮೆಟ್ ಧರಿಸದಿರುವುದು, ವಾಹನವನ್ನು ಕಾನೂನು ಬಾಹಿರವಾಗಿ ಮಾಡಿಫೈಗೊಳಿಸಿರುವುದಕ್ಕಾಗಿ ರೂ.18,000 ಗಳ ದಂಡ ವಿಧಿಸಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳಲ್ಲಿ ಸ್ಟಂಟ್ ಮಾಡದಿರಿ ಎಂದು ಪೊಲೀಸರು ಜನರಿಗೆ ಸೂಚನೆ ನೀಡುತ್ತಲೇ ಇರುತ್ತಾರೆ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಆದರೂ ಪೊಲೀಸರ ಮಾತಿಗೆ ಕ್ಯಾರೇ ಎನ್ನದ ಕೆಲವರು ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವೀಡಿಯೊಗಳ ಆಧಾರದ ಮೇಲೆ ಇಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಈ ಹಿಂದೆ ಪೊಲೀಸರು ವೈರಲ್ ಆದ ವೀಡಿಯೊಗಳ ಆಧಾರದ ಮೇಲೆ ವಾಹನ ಸವಾರರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸಿದ್ದರು. ಕೆಲವು ಸಂದರ್ಭಗಳಲ್ಲಿ ವಾಹನಗಳನ್ನು ವಶಕ್ಕೆ ಸಹ ಪಡೆಯಲಾಗಿತ್ತು.

ಆದರೂ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದರೆ ಪೊಲೀಸರು ಸ್ಟಂಟ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟಿಲ್ಲ. ದೆಹಲಿಯಲ್ಲಿ ನಡೆದ ಘಟನೆ ಈ ಮಾತಿಗೆ ಪುಷ್ಟಿ ನೀಡುತ್ತದೆ.

ಚಲಿಸುವ ಕಾರುಗಳ ರೂಫ್ ಮೇಲೆ ಕುಳಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಈ ರೀತಿಯ ಘಟನೆಗಳು ಸ್ಟಂಟ್‌ನಲ್ಲಿ ಭಾಗಿಯಾಗಿರುವವರಿಗೆ ಮಾತ್ರವಲ್ಲದೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ಸಹ ಅಪಾಯವನ್ನುಂಟುಮಾಡುತ್ತವೆ ಎಂಬುದನ್ನು ಸ್ಟಂಟ್ ಮಾಡುವ ವಾಹನ ಸವಾರರು ನೆನಪಿನಲ್ಲಿಡ ಬೇಕು.

Most Read Articles

Kannada
English summary
Delhi cops registers case against youths for sitting on moving cars. Read in Kannada.
Story first published: Saturday, July 17, 2021, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X