ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ದೇಶದಲ್ಲಿ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಕರೋನಾ ಸಾಂಕ್ರಾಮಿಕ ರೋಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಫೇಸ್‌ಮಾಸ್ಕ್ ಧರಿಸುವಂತೆ ಜನರಿಗೆ ಸೂಚನೆ ನೀಡಿವೆ.

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಒಬ್ಬರೇ ಕಾರು ಚಾಲನೆ ಮಾಡುವಾಗಲೂ ಫೇಸ್‌ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಆದರೆ ಕೆಲವರು ಸರ್ಕಾರದ ನಿಯಮಗಳಿಗೆ ಕ್ಯಾರೇ ಎನ್ನದೇ ಫೇಸ್‌ಮಾಸ್ಕ್ ಧರಿಸದೇ ಮನೆಯಿಂದ ಹೊರ ಬರುತ್ತಿದ್ದಾರೆ. ಈ ಜನರು ಪೊಲೀಸರು ತಡೆದಾಗ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಇತ್ತೀಚೆಗೆ ಇದೇ ರೀತಿಯ ಮತ್ತೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಫೇಸ್‌ಮಾಸ್ಕ್ ಧರಿಸದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಪೊಲೀಸರು ತಡೆಯುತ್ತಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಕಾರಿನಲ್ಲಿ ಪ್ರಯಾಣಿಸುವಾಗಲೂ ಫೇಸ್‌ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಫೇಸ್‌ಮಾಸ್ಕ್ ಧರಿಸದೇ ಸಂಚರಿಸುವವರಿಗೆ ದಂಡ ವಿಧಿಸಬಹುದು. ಜೊತೆಗೆ ಪ್ರಕರಣವನ್ನು ದಾಖಲಿಸಬಹುದು.

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ದೆಹಲಿಯಲ್ಲಿ ನಡೆದ ಘಟನೆಯಲ್ಲಿ ಕಾರಿನೊಳಗೆ ಕುಳಿತಿದ್ದ ದಂಪತಿಗಳು ಫೇಸ್‌ಮಾಸ್ಕ್ ಧರಿಸಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ. ಪೊಲೀಸರು ದಂಡ ವಿಧಿಸುತ್ತಿದ್ದಂತೆ ಕಾರಿನೊಳಗೆ ಕುಳಿತಿದ್ದ ಮಹಿಳೆ ಕೋಪಗೊಂಡು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಆ ಮಹಿಳೆ ತನ್ನ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿದ್ದಾರೆ. ನಾನು ಯಾವುದೇ ಕಾರಣಕ್ಕೂ ದಂಡ ಪಾವತಿಸುವುದಿಲ್ಲ. ನೀವು ಏನು ಬೇಕೋ ಮಾಡಿಕೊಳ್ಳಿ ಎಂದು ಕೂಗಾಡಿದ್ದಾಳೆ.

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಈ ದಂಪತಿಗಳು ಫೇಸ್‌ಮಾಸ್ಕ್ ಧರಿಸಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಕರೋನಾ ವೈರಸ್ ಇಲ್ಲವೇ ಇಲ್ಲ. ಜನರಿಗೆ ಕಿರುಕುಳ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಆ ಮಹಿಳೆ ಹೇಳಿದ್ದಾಳೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ದೆಹಲಿ ಪೊಲೀಸರು ಮಹಿಳಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ದರ್ಯಗಂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ದಂಪತಿಗಳ ವಿರುದ್ಧ ಐ‌ಪಿ‌ಸಿ ಸೆಕ್ಷನ್ 188 ಹಾಗೂ 51 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಜೊತೆಗೆ ದಂಡ ಕೂಡ ವಿಧಿಸಲಾಗಿದೆ. ಈ ದಂಪತಿಗಳನ್ನು ಪಂಕಜ್ ದತ್ತಾ ಹಾಗೂ ಅಭಾ ಯಾದವ್ ಎಂದು ಗುರುತಿಸಲಾಗಿದೆ. ಏಪ್ರಿಲ್ 7ರಂದು ದೆಹಲಿ ಹೈಕೋರ್ಟ್ ಕಾರನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಿ ಒಬ್ಬರೇ ವ್ಯಕ್ತಿ ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಹೋಗುತ್ತಿದ್ದರೂ ಸಹ ಫೇಸ್‌ಮಾಸ್ಕ್ ಧರಿಸುವುದು ಕಡ್ಡಾಯವೆಂದು ಹೇಳಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಕರೋನಾ ವೈರಸ್ ದೆಹಲಿಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ ಒಟ್ಟು 25,462 ಹೊಸ ಪ್ರಕರಣಗಳು ವರದಿಯಾಗಿದ್ದು, 161 ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ.

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ ಇದುವರೆಗೂ 8,53,460 ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದು, 12121 ಜನರು ಪ್ರಾಣ ಕಳೆದುಕೊಂಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫೇಸ್‌ಮಾಸ್ಕ್ ಧರಿಸದೇ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ದಂಪತಿ

ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 20,159 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಕರೋನಾ ವೈರಸ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 74,941ಕ್ಕೆ ಏರಿಕೆಯಾಗಿದೆ.

Most Read Articles

Kannada
English summary
Delhi couple misbehaves with cops when stopped for not wearing mask. Read in Kannada.
Story first published: Monday, April 19, 2021, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X