ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ರಾಷ್ಟ್ರ ರಾಜಧಾನಿ ದೆಹಲಿಯ ನಿವಾಸಿಯೊಬ್ಬರು ತಮ್ಮ ಕಾರು ಕಳುವಾದ 20 ದಿನಗಳ ನಂತರ ಪೂರ್ವ ದೆಹಲಿಯ ವಿವೇಕ್ ವಿಹಾರ್ ಪೊಲೀಸರಿಂದ ದಂಡದ ಚಲನ್ ಪಡೆದಿದ್ದಾರೆ. ಕಾರ್ ಅನ್ನು ಅತಿ ವೇಗದಲ್ಲಿ ಚಾಲನೆ ಮಾಡಿದ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ.

ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ಜೂನ್ 6ರಂದು ಪಶ್ಚಿಮ ದೆಹಲಿಯ ಹರಿ ನಗರ ನಿವಾಸಿ ಯೋಗೇಶ್ ಪೋದ್ದಾರ್ ರವರ ಕಾರ್ ಅನ್ನು ವಿವೇಕ್ ವಿಹಾರ್ ಕಾಲೋನಿಯಲ್ಲಿ ನಿಲ್ಲಿಸಿದ್ದಾಗ ಕಳುವು ಮಾಡಲಾಗಿತ್ತು. ಈ ಕುರಿತು ಅವರು ದೂರು ದಾಖಲಿಸಿದ್ದರು. ಆದರೂ ಜೂನ್ 26 ರಂದು ಅವರಿಗೆ ಇ-ಚಲನ್ ನೀಡಲಾಗಿದೆ. ಈ ಚಲನ್ ನಲ್ಲಿ ಮಿಲೇನಿಯಮ್ ಡಿಪೋ ಬಳಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಚಾಲನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ಚಲನ್ ನಲ್ಲಿ ಕಾರಿನ ಸಂಖ್ಯೆ ಹಾಗೂ ಫೋಟೋವನ್ನು ಸಹ ಲಗತ್ತಿಸಲಾಗಿದೆ. ಯೋಗೇಶ್ ರವರು ಕಾರನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಯಾವುದೇ ಸಿಸಿಟಿವಿಯನ್ನು ಅಳವಡಿಸಿರಲಿಲ್ಲವೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸ್ಥಳದಲ್ಲಿ ಅಳವಡಿಸಿದ್ದ ಇತರ ಸಿಸಿಟಿವಿಗಳಲ್ಲಿಯೂ ಯಾವುದೇ ಸುಳಿವು ದೊರೆತಿಲ್ಲ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ಒಂದು ವಾರದ ತನಿಖೆಯ ನಂತರ, ಪೊಲೀಸರು ನ್ಯಾಯಾಲಯದಲ್ಲಿ ವಾಹನವು ಪತ್ತೆಯಾಗಿಲ್ಲವೆಂದು ವರದಿ ಸಲ್ಲಿಸಿದ್ದಾರೆ. ಇದಾದ ನಂತರ ಯೋಗೇಶ್ ರವರಿಗೆ ಇ-ಚಲನ್ ನೀಡಲಾಗಿದೆ. ಚಲನ್ ನಲ್ಲಿದ್ದ ಫೋಟೋ ಗಮನಿಸಿದ ಯೋಗೇಶ್ ರವರು ಕಾರಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವೆಂದು ಹೇಳಿದ್ದಾರೆ.

ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ಕಾರಿನೊಳಗಿದ್ದ ಪ್ರತಿಮೆ ಹಾಗೂ ಕೆಲವು ಸ್ಟಿಕ್ಕರ್‌ಗಳನ್ನು ತೆಗೆದುಹಾಕಲಾಗಿದೆ. ಕಾರುಗಳ್ಳರು ಕಾರಿನ ಭಾಗಗಳನ್ನು ತೆಗೆದು ಮಾರಾಟ ಮಾಡಿರಬಹುದುದೆಂದು ಅವರು ಭಾವಿಸಿದ್ದರು. ಆದರೆ ಕಾರು ಇನ್ನೂ ಸುರಕ್ಷಿತವಾಗಿರುವುದು ಯೋಗೇಶ್ ರವರಿಗೆ ಆಶ್ಚರ್ಯವನ್ನುಂಟು ಮಾಡಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ಯೋಗೇಶ್ ಈ ಬಗ್ಗೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿದರೆ ಹಾಗೂ ಕಾರು ದೆಹಲಿಯಲ್ಲಿಯೇ ಇದ್ದರೆ, ಶೀಘ್ರದಲ್ಲೇ ತಮ್ಮ ಕಾರು ತಮಗೆ ದೊರೆಯಲಿದೆ ಎಂಬ ಆಶಾ ಭಾವನೆಯನ್ನು ಹೊಂದಿದ್ದಾರೆ.

ಕಳುವಾದ ಕಾರಿಗೆ ದಂಡದ ಚಲನ್ ಪಡೆದ ಕಾರು ಮಾಲೀಕ

ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿತ್ತು. ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಪತಿಯ ಕಾರನ್ನು ಕಳವು ಮಾಡಲಾಗಿತ್ತು. ಈ ಕಾರಿಗೂ ಸಹ ವೇಗವಾಗಿ ಕಾರು ಚಾಲನೆ ಮಾಡಲಾಗಿದೆ ಎಂಬ ಕಾರಣಕ್ಕೆ ದಂಡ ವಿಧಿಸಿ ಇ-ಚಲನ್ ನೀಡಲಾಗಿತ್ತು.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi man gets challan for stolen car. Read in Kannada.
Story first published: Monday, July 13, 2020, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X