Delhi-Mumbai Expressway: 1,350 ಕಿ.ಮೀ ಕೇವಲ 12 ಗಂಟೆಗಳ ಪ್ರಯಾಣ, 2024 ಫೆಬ್ರವರಿಗೆ ಸಿದ್ಧ

2024 ರ ಫೆಬ್ರವರಿ ವೇಳೆಗೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಿದ್ಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಎರಡು ಮೆಟ್ರೋ ನಗರಗಳ ನಡುವಿನ ಪ್ರಯಾಣದ ಸಮಯ ಕೇವಲ 12 ಗಂಟೆಗಳವರೆಗೆ ಕುಗ್ಗಲಿದೆ ಎಂದು ಅವರು ತಿಳಿಸದ್ದಾರೆ.

ದೆಹಲಿಯಲ್ಲಿ ಆಜ್ ತಕ್ ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿ ಮತ್ತು ಮುಂಬೈ (Delhi-Mumbai Expressway) ನಡುವೆ ನಿರ್ಮಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ವೇ ಮುಂಬರುವ ತಿಂಗಳುಗಳಲ್ಲಿ ಸಿದ್ಧವಾಗಲಿದೆ. ಇದು ಕೇವಲ 12 ಗಂಟೆಗಳಲ್ಲಿ 1,350 ಕಿ.ಮೀ ದೂರವನ್ನು ಕ್ರಮಿಸುವ ಅಂತರಾಷ್ಟ್ರೀಯ ಮಟ್ಟದ ಹೆದ್ದಾರಿಯಾಗಿದ್ದು, ಫೆಬ್ರವರಿ 2024ರ ವೇಳೆಗೆ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯನ್ನು ಆರಂಭಿಸಲಾಗುವುದು ಎಂದರು.

delhi-mumbai-expressway-1350-km-12-hours-journey

ನಿತಿನ್ ಗಡ್ಕರಿ ಅವರು ಈ ಹಿಂದೆ ಹೇಳಿದಂತೆ, ಎರಡು ಮಹಾನಗರಗಳ ಸುಧೀರ್ಘ ಪ್ರಯಾಣ ಸಮಯವನ್ನು ಕುಗ್ಗಿಸಲು ಈ ಎಕ್ಸ್‌ಪ್ರೆಸ್‌ವೇ ಪ್ರಮುಖ ಪಾತ್ರ ವಹಿಸಲಿದೆ. ಎರಡು ನಗರಗಳ ನಡುವೆ ಪ್ರಸ್ತುತ 1,408 ಕಿ.ಮೀ ಅಂತರವಿದ್ದು, ಈಗ ಪ್ರಯಾಣ ಸಮಯವು ಸುಮಾರು 25 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹೊಸ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಬರೋಬ್ಬರಿ 12 ಗಂಟೆಗಳ ಪ್ರಯಾಣ ಸಮಯವನ್ನು ಇಳಿಸುತ್ತದೆ.

ಈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವನ್ನು ಫೆಬ್ರವರಿ 12, 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಈ ಎಕ್ಸ್‌ಪ್ರೆಸ್‌ವೇಯ ಮೊದಲ ಮಾರ್ಗವು 229 ಕಿ.ಮೀ ಉದ್ದವಿದ್ದು, ಇದು ದೆಹಲಿಯಿಂದ ಜೈಪುರಕ್ಕೆ ಸಂಪರ್ಕಿಸುತ್ತದೆ. ಈ ಮಾರ್ಗದ ಮೂಲಕ ಕೇವಲ 3.5 ಗಂಟೆಗಳಲ್ಲಿ ಗಮ್ಯ ಸ್ಥಳಗಳನ್ನು ಕ್ರಮಿಸಬಹುದು.

delhi-mumbai-expressway-1350-km-12-hours-journey

ಈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಇದು ಕೋಟಾ, ಇಂದೋರ್, ಭೋಪಾಲ್, ಜೈಪುರ, ವಡೋದರಾ ಮತ್ತು ಸೂರತ್‌ನಂತಹ ನಗರಗಳನ್ನು ಸಂಪರ್ಕಿಸುತ್ತದೆ. ಹಾಗೆಯೇ ಈ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 40 ಇಂಟರ್ ಚೇಂಜ್‌ಗಳನ್ನು ಹೊಂದುವ ನಿರೀಕ್ಷೆಯಿದೆ.

ಈ ಮೂಲಕ ಜೈಪುರ, ಅಜ್ಮೀರ್, ಕಿಶನ್‌ಗಢ, ಕೋಟಾ, ಚಿತ್ತೋರ್‌ಗಢ, ಉದಯಪುರ, ಭೋಪಾಲ್, ಇಂದೋರ್, ಉಜ್ಜೈನ್, ಅಹಮದಾಬಾದ್, ಸೂರತ್ ಮತ್ತು ವಡೋದರಾಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಈಗಾಗಲೇ ಪಿಥೋರಗಢದಿಂದ ಮಾನಸ ಸರೋವರದವರೆಗೆ ಶೇ.90ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಪಂಜಾಬ್‌ನ ಅಮೃತಸರದಿಂದ ಗುಜರಾತ್‌ನ ಭಾವನಗರದವರೆಗಿನ ಯೋಜನೆಯು ತುಂಬಾ ದೊಡ್ಡದಾಗಿದೆ. ಈ ರಸ್ತೆಯು ಮನಾಲಿಯಿಂದ ಪ್ರಾರಂಭವಾಗಲಿದ್ದು, ಐದು ಸುರಂಗಗಳನ್ನು ಹೊಂದಿರುತ್ತದೆ.

delhi-mumbai-expressway-1350-km-12-hours-journey

ನೆರೆಯ ದೇಶಗಳಿಗೆ ರಸ್ತೆಗಳು: 'ಸೂರತ್‌ನಿಂದ ನಾಸಿಕ್‌ಗೆ, ನಾಸಿಕ್‌ನಿಂದ ಅಹಮದ್‌ನಗರಕ್ಕೆ ಮತ್ತು ಅಲ್ಲಿಂದ ಸೊಲ್ಲಾಪುರಕ್ಕೆ ಹೊಸ ಹಸಿರು ಹೆದ್ದಾರಿ ನಿರ್ಮಿಸುತ್ತಿರುವುದಾಗಿ ಹೇಳಿದ ಕೇಂದ್ರ ಸಚಿವರು, ನಮ್ಮ ದೇಶದಲ್ಲಿ 65 ಲಕ್ಷ ಕಿ.ಮೀ ರಸ್ತೆ ಜಾಲವಿದೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಸ್ತೆ ನಿರ್ಮಿಸುತ್ತಿದ್ದೇವೆ. ಪ್ರತಿ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ನಾವು ಹಣವನ್ನು ಉಳಿಸಿದ್ದೇವೆ. ಮ್ಯಾನ್ಮಾರ್, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳಕ್ಕೆ ರಸ್ತೆಗಳನ್ನು ಭಾರತದಿಂದ ನಿರ್ಮಿಸಲಾಗುತ್ತಿದೆ ಎಂದು ಗಡ್ಕರಿ ಬಹಿರಂಗಪಡಿಸಿದರು.

ಎಲೆಕ್ಟ್ರಿಕ್ ವಾಹನಗಳನ್ನು ಉಲ್ಲೇಖಿಸಿದ ಅವರು, 'ನೀವು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ತಿಂಗಳಿಗೆ 30,000 ರೂ. ಖರ್ಚು ಮಾಡಿದರೆ, ಎಲೆಕ್ಟ್ರಿಕ್ ವಾಹನಕ್ಕೆ ಕೇವಲ 2,000 ರೂ. ಖರ್ಚು ಮಾಡಬಹುದು. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಲಿದೆ ಎಂದು ಭರವಸೆ ನೀಡಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Saturday, August 19, 2023, 15:57 [IST]
English summary
Delhi mumbai expressway 1350 km 12 hours journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+