ಎಕ್ಸ್‌ಪ್ರೆಸ್‌ವೇಯಲ್ಲಿ ಟಾಟಾ ಆಲ್ಟ್ರೋಜ್ ಕಾರು 120 km ವೇಗದಲ್ಲಿ ಜಿಂಕೆಗೆ ಡಿಕ್ಕಿ: ಅಲ್ಲಿ ಏನಾಯಿತು ಗೊತ್ತಾ?

ದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು (National Highway) ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೊಮ್ಮೆ ಜಾನುವಾರುಗಳು ಹಾಗೂ ಕಾಡು ಪ್ರಾಣಿಗಳು ಇಂತಹ ರಸ್ತೆಗೆ ನುಗ್ಗಿ ಬಿಡುತ್ತವೆ. ಮೊದಲೇ ವೇಗದಲ್ಲಿರುವ ವಾಹನಗಳು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ತುತ್ತಾಗುತ್ತವೆ.

ಸದ್ಯ, ಅಂತಹದ್ದೇ ಘಟನೆಯೊಂದು ಹೊಸದಾಗಿ ನಿರ್ಮಾಣಗೊಂಡಿರುವ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ (Delhi - Mumbai Expressway) ವರದಿಯಾಗಿದೆ. ಈ ವಿಡಿಯೋ ಟಾಟಾ ಆಲ್ಟ್ರೋಜ್ (Tata Altroz) ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಕಾರು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿರುವಂತೆ ಕಾಣುತ್ತಿದೆ (ಆ ಎಕ್ಸ್‌ಪ್ರೆಸ್‌ವೇಯಲ್ಲಿ ಇದು ನಿಗದಿತ ವೇಗಮಿತಿಯಾಗಿದೆ).

ಎಕ್ಸ್‌ಪ್ರೆಸ್‌ವೇಯಲ್ಲಿ ಟಾಟಾ ಆಲ್ಟ್ರೋಜ್ ಕಾರು 120 km ವೇಗದಲ್ಲಿ ಜಿಂಕೆಗೆ ಡಿಕ್ಕಿ: ಏನಾಯಿತು ಗೊತ್ತಾ.. ವಿಡಿಯೋ

ಇದ್ದಕ್ಕಿದ್ದಂತೆ ರಸ್ತೆಯ ಬಲಭಾಗದಿಂದ ಜಿಂಕೆ (Nilgai) ಟಾಟಾ ಆಲ್ಟ್ರೋಜ್ ಎದುರಿಗೆ ಬರುತ್ತದೆ. ಜಿಂಕೆಗೆ ಡಿಕ್ಕಿಯಾಗಿ ಕಾರು ಸ್ಕಿಡ್ ಆಗಿದೆ. ಪರಿಣಾಮ, ಅದರ ಒಂದು ಭಾಗಕ್ಕೆ ಹಾನಿಯಾಗಿದೆ. ಆದರೆ, ಚಾಲಕ ಮತ್ತೆ ಕಾರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಯಾಣವನ್ನು ಮುಂದುವರಿಸಿದ್ದು, ಕೆಲ ಸಮಯದ ಬಳಿಕ, ಹೆದ್ದಾರಿ ಗಸ್ತು ಸಿಬ್ಬಂದಿ ಸಹಾಯವನ್ನು ಪಡೆದು, ಕಾರನ್ನು ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಿದ್ದಾರೆ.

ಘಟನೆ ವೇಳೆಯಲ್ಲಿ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದ ಕಾರಣ, ಆತನಿಗೆ ಯಾವುದೇ ಗಾಯಗಳಾಗಿಲ್ಲ. ಅಲ್ಲದೆ, ಜಿಂಕೆ ರಸ್ತೆಯಲ್ಲಿ ಹೇಗೆ ಬಂತು ಎಂಬುದರ ಬಗ್ಗೆಯೂ ತಿಳಿದಿಲ್ಲ. ಜೊತೆಗೆ ಆ ಮೂಕ ಜೀವಿಗೆ ಏನಾಗಿದೆ ಎಂಬುದರ ಕುರಿತು ವಿವರಗಳಿಲ್ಲ. ಪ್ರಮುಖ ಹೆದ್ದಾರಿಗಳನ್ನು ನಾನಾ ಕಾರಣಗಳಿಗೆ ಇದ್ದಕ್ಕಿದಂತೆ ಪ್ರಾಣಿಗಳು ಪ್ರವೇಶಿಸುತ್ತವೆ. ವೇಗದಲ್ಲಿರುವ ವಾಹನಗಳು ಅವುಗಳನ್ನು ತಪ್ಪಿಸಲು ಹೋಗಿ, ಅಪಾಘಾತಕ್ಕೆ ಒಳಗಾಗುತ್ತವೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಟಾಟಾ ಆಲ್ಟ್ರೋಜ್ ಕಾರು 120 km ವೇಗದಲ್ಲಿ ಜಿಂಕೆಗೆ ಡಿಕ್ಕಿ: ಏನಾಯಿತು ಗೊತ್ತಾ.. ವಿಡಿಯೋ

ಸಂಬಂಧಪಟ್ಟ ಅಧಿಕಾರಿಗಳು, ಇತ್ತ ಕಡೆ ಗಮನಹರಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಜಾನುವಾರುಗಳ ಸಾವನ್ನು ತಡೆಯಲು ಕೇಂದ್ರ ಸರ್ಕಾರವೂ ಮಹತ್ವದ ಹೆಜ್ಜೆ ಇಟ್ಟಿದೆ. ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಬಿದಿರಿನಿಂದ (bamboo) ಮಾಡಲಾಗಿರುವ ಬಾಹುಬಲಿ ಬೇಲಿಯನ್ನು (Bahu Balli fences) ನಿರ್ಮಾಣ ಮಾಡಲು ತೀರ್ಮಾನಿಸಿದೆ.

ಈ ಹಿಂದೆ, ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಛತ್ತೀಸ್‌ಗಢದಲ್ಲಿ ಪ್ರಾಯೋಗಿಕ ಯೋಜನೆಯ ಕಾಮಗಾರಿ ಶುರು ಮಾಡಲಾಗುವುದು. ಇದು ಉಕ್ಕಿನ ಪರ್ಯಾಯವಾಗಿದ್ದು, ಪರಿಸರ ಸ್ನೇಹಿ ಆಗಿರಲಿದೆ ಎಂದು ಹೇಳಿದ್ದರು. ಛತ್ತೀಸ್‌ಗಢದಲ್ಲಿ ಯೋಜನೆ ಯಶಸ್ವಿಯಾದರೆ, ದೇಶಾದ್ಯಂತ ವಿಸ್ತರಣೆ ಮಾಡಲಾಗಿವುದು. ಇದರ ಉದ್ದೇಶ ಜಾನುವಾರುಗಳ ಪ್ರಾಣ ಉಳಿಸುವುದು ಎಂದು ತಿಳಿಸಿದ್ದರು.

ಬಾಹುಬಲಿ ಬೇಲಿ ನಿರ್ಮಾಣಕ್ಕೆ ಬಳಕೆ ಮಾಡುವ ಬಿದಿರನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಿ, ಕೆಲವು ರಾಸಾಯನಿಕಗಳನ್ನು ಲೇಪಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಅವು ತುಂಬಾ ಗಟ್ಟಿಯಾಗುತ್ತವೆ. ಇದನ್ನು ಜಾನುವಾರುಗಳು ದಾಟಿವುದು, ಇಲ್ಲದೆ ಮುರಿಯುವುದು ತುಂಬಾ ಕಷ್ಟ. ಉಕ್ಕಿನ ಬೇಲಿಯೊಳಗೆ ಗಾಯಗೊಂಡಂತೆ ಇಲ್ಲಿ ಜಾನುವಾರುಗಳು ತೀವ್ರತರವಾಗಿ ಗಾಯಗೊಳ್ಳುವುದಿಲ್ಲ.

ಇನ್ನು, ಟಾಟಾ ಆಲ್ಟ್ರೋಜ್ ಕಾರಿನ ಬಗ್ಗೆ ಮಾತನಾನಾಡುವುದಾದರೆ, ಇದು, ಗ್ಲೋಬಲ್ ಎನ್‌ಸಿಎಪಿ ಸೇಫ್ಟಿ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ISOFIX ಚೈಲ್ಡ್ - ಸೀಟ್ ಆಂಕರರ್ಸ್, ಆಟೋ ಪಾರ್ಕ್ ಲಾಕ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 19, 2023, 10:40 [IST]
English summary
Delhi mumbai expressway tata altroz crashes into nilgai what happened
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+