ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ಭಾರತದಲ್ಲಿ ಕೋವಿಡ್ -19 ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ. ಈ ಮಹಾಮಾರಿ ವೈರಸ್‌ಗೆ ಯಾವುದೇ ಲಸಿಕೆ ಇಲ್ಲದ ಕಾರಣಕ್ಕೆ ಜನಜೀವನವನ್ನೇ ಬದಲಿಸಿಕೊಳ್ಳಬೇಕಿದೆ. ಇದರ ಜೊತೆಗೆ ಕೆಲಸದ ವಿಧಾನವು ಬದಲಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ಈ ಕಾರಣಕ್ಕೆ ಜನರಿಗೆ ಕೆಲಸ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗುತ್ತಿದೆ. ಈಗ ದೆಹಲಿ ಪೊಲೀಸರು ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಜನರೊಂದಿಗೆ ಕನಿಷ್ಠ ಸಂಪರ್ಕವನ್ನು ಹೊಂದಲು ಹೊಸ ವಿಧಾನವನ್ನು ಅನುಸರಿಸುತ್ತಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಪೊಲೀಸರು ಎಸ್‌ಎಂಎಸ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ಈ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಹಾಗೂ ಪೊಲೀಸರ ನಡುವೆ ಕನಿಷ್ಠ ಸಂಪರ್ಕ ಏರ್ಪಡಲಿದೆ. ಕರೋನಾ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯುಕೊಳ್ಳುವುದು ಅವಶ್ಯಕ. ಲಾಕ್‌ಡೌನ್ ಅವಧಿಯಲ್ಲಿ ಲಕ್ಷಾಂತರ ಜನರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ದೆಹಲಿ ಪೊಲೀಸರು ಇದುವರೆಗೂ 1,00,436 ಜನರಿಗೆ ಎಸ್‌ಎಂಎಸ್ ಮೂಲಕ ಹಾಗೂ 80 ಜನರಿಗೆ ಸ್ಪೀಡ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಮಾರ್ಚ್ 25ರಿಂದ ಮೇ 17ರ ನಡುವೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಈ ನೋಟಿಸ್‌ಗಳನ್ನು ಕಳುಹಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

7998 ಜನರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ. ಈ ಎಲ್ಲರಿಗೂ ನೋಟಿಸ್ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕ್ಯಾಮರಾದಲ್ಲಿ ದಾಖಲಾದ ಸಂಚಾರ ನಿಯಮ ಉಲ್ಲಂಘಿಸುವವರಿಗೆ ವರ್ಚುವಲ್ ಕೋರ್ಟ್ ರಚಿಸುವುದಾಗಿ ಹೇಳಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

32,722 ಪ್ರಕರಣಗಳನ್ನು ವರ್ಚುವಲ್ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಲಾಗಿದೆ. ಕಾಂಟ್ಯಾಕ್ಟ್‌ಲೆಸ್ ಟ್ರಾಫಿಕ್ ಕಂಟ್ರೋಲ್ ಹಾಗೂ ಕ್ಯಾಮೆರಾದ ಮೂಲಕ ನಿಯಮ ಉಲ್ಲಂಘನೆ ಪತ್ತೆಗಾಗಿ ಅಪ್ಲಿಕೇಶನ್ ಹಾಗೂ ಲೇಸರ್ ಸ್ಪೀಡ್ ಗನ್ ಬಳಕೆಯ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಚಾರ ವಿಭಾಗದ ವಿಶೇಷ ಕಮಿಷನರ್ ತಾಜ್ ಹಸನ್ ಹೇಳಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ಈಗ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ, ಜಂಕ್ಷನ್ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಲೇನ್ ಉಲ್ಲಂಘನೆ ಹಾಗೂ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸದಂತೆ ನೋಡಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ಲಾಕ್‌ಡೌನ್ 4.0ನಲ್ಲಿ ವಾಹನ ಚಲಾಯಿಸಲು ಅನೇಕ ರಿಯಾಯಿತಿಗಳನ್ನು ನೀಡಲಾಗಿದೆ, ಈ ಕಾರಣದಿಂದಾಗಿ ದೆಹಲಿ-ನೋಯ್ಡಾ ಹಾಗೂ ದೆಹಲಿ-ಗುರುಗ್ರಾಮಗಳ ಗಡಿ ಭಾಗದಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಎರಡೂ ನಗರಗಳ ನಡುವೆ ಸಂಚರಿಸಲು ಇ-ಪಾಸ್ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.

Article Published On: Thursday, May 21, 2020, 17:31 [IST]
English summary
Delhi Police adopts contactless traffic control. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+