ಕರೋನಾ ವೈರಸ್: ಸೈರನ್ ಮೊಳಗಿಸಿ ಧನ್ಯವಾದ ಸಲ್ಲಿಸಿದ ಪೊಲೀಸರು
ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ನೂರಾರು ಕಾರುಗಳು ಮಹಿಳೆಯೊಬ್ಬರಿಗೆ ಗೌರವ ಸಲ್ಲಿಸಿದ್ದವು. ಗೌರವ ಸ್ವೀಕರಿಸಲು ಆ ಮಹಿಳೆ ತಮ್ಮ ಮನೆಯ ಹೊರಗೆ ನಿಂತಿದ್ದರು.

ಹೀಗೆ ಮನೆಯಿಂದ ಹೊರಬಂದು ನೂರಾರು ಕಾರುಗಳಿಂದ ಸಲ್ಯೂಟ್ ಹೊಡೆಸಿಕೊಂಡ ಮಹಿಳೆ ಭಾರತೀಯ ಮೂಲದವರು, ಅದರಲ್ಲೂ ಹೆಮ್ಮೆಯ ಕನ್ನಡತಿ ಎಂಬುದು ವಿಶೇಷ. ಈ ಕನ್ನಡತಿ ಅಮೆರಿಕಾದಲ್ಲಿರುವ ವಿಂಡ್ಸರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದು, ಅಮೆರಿಕಾದಲ್ಲಿರುವ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕರೋನಾ ವೈರಸ್ ಇಡೀ ಜಗತ್ತನ್ನು ತತ್ತರಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೆಮ್ಮೆಯ ಕನ್ನಡತಿ ಹಗಲು ಇರುಳೆನ್ನದೇ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ನೂರಾರು ಅಮೆರಿಕನ್ನರು ಒಟ್ಟುಗೂಡಿ ಅವರಿಗೆ ಧನ್ಯವಾದ ಸಲ್ಲಿಸಿದರು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅಮೇರಿಕಾದಲ್ಲಿ ಭಾರತೀಯ ಮಹಿಳೆಗೆ ನೀಡಿದ ಈ ಗೌರವವು ಭಾರತದಲ್ಲಿಯೂ ಸಂಚಲನವನ್ನುಂಟು ಮಾಡಿದೆ. ಈಗ ಇದೇ ರೀತಿಯ ಘಟನೆಯೊಂದು ಭಾರತದಲ್ಲಿಯೂ ನಡೆದಿದೆ. ಆದರೆ ಈ ಘಟನೆಯಲ್ಲಿ ದೆಹಲಿ ಪೊಲೀಸರು ಧನ್ಯವಾದ ಸಲ್ಲಿಸಿರುವುದು ವಿಶೇಷ.

ಅಂದ ಹಾಗೆ ದೆಹಲಿ ಪೊಲೀಸರು ಸೈರನ್ ಮೊಳಗಿಸಿ, ಸಿಖ್ ಗುರುದ್ವಾರ ಸಿಸ್ಟಂಗೆ ಧನ್ಯವಾದ ಸಲ್ಲಿಸಿದ್ದಾರೆ. ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ಜನರಿಗೆ ಸಿಖ್ ಗುರುದ್ವಾರ ಸಂಸ್ಥೆ ವಿವಿಧ ರೀತಿಯಲ್ಲಿ ನೆರವಾಗುತ್ತಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಸಂಸ್ಥೆಯು ದೆಹಲಿಯಲ್ಲಿರುವ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಗುರುದ್ವಾರ ಸಂಸ್ಥೆ ಬಡವರ ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿದೆ.

ಈ ಗುರುದ್ವಾರದಲ್ಲಿ ಪ್ರತಿ ದಿನ ಜಾತಿ, ಮತ, ಧರ್ಮಗಳನ್ನು ನೋಡದೇ ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷ ಸೇವೆಯನ್ನು ನೀಡುತ್ತಿರುವ ಸಿಖ್ ಗುರುದ್ವಾರ ಸಂಸ್ಥೆಗೆ ಗೌರವ ಸಲ್ಲಿಸಲು ದೆಹಲಿ ಪೊಲೀಸರು ನೂರಾರು ಸಂಖ್ಯೆಯಲ್ಲಿ ಗುರುದ್ವಾರದ ಸುತ್ತ ಜಮಾಯಿಸಿ ಮೆರವಣಿಗೆ ನಡೆಸುತ್ತಾ ಸೈರನ್ ಮೊಳಗಿಸಿದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಮೆರವಣಿಗೆಯಲ್ಲಿ ಉನ್ನತ ಅಧಿಕಾರಿಗಳು ಹಾಗೂ ಕೆಳ ಹಂತದ ಸಿಬ್ಬಂದಿ ಭಾಗವಹಿಸಿದ್ದರು. ಇದ್ದಕ್ಕಿದ್ದಂತೆ ಪೊಲೀಸ್ ಸೈರನ್ ಸದ್ದು ಮೊಳಗಿದ ಕಾರಣ ಏನು ನಡೆಯುತ್ತಿದೆ ಎಂದು ಅರಿಯದ ಸ್ಥಳೀಯರು ದಿಗ್ಭ್ರಮೆಗೊಳಗಾಗಿದ್ದರು.

ಕೆಲವರು ಪೊಲೀಸರ ಈ ಕೃತ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಕರೋನಾ ವೈರಸ್ ಹಿನ್ನೆಲೆಯಲ್ಲಿ ದೇಶವು ಸಮಸ್ಯೆ ಎದುರಿಸುತ್ತಿದ್ದು, ಪೆಟ್ರೋಲ್ ವ್ಯರ್ಥ ಮಾಡಿದ್ದು ಸರಿಯಲ್ಲವೆಂದು ಟೀಕಿಸಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ದೇಶದಾದ್ಯಂತ ಅನೇಕ ಸಂಸ್ಥೆಗಳು, ಕಂಪನಿಗಳು ಕಾರ್ಮಿಕರಿಗೆ, ಬಡವರಿಗೆ ನೆರವಾಗುತ್ತಿವೆ. ಇದರಲ್ಲಿ ಆಟೋಮೊಬೈಲ್ ಕಂಪನಿಗಳ ಪಾತ್ರವು ಪ್ರಮುಖವಾಗಿದೆ. ಟಾಟಾ ಗ್ರೂಪ್ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ರೂ.1,500 ಕೋಟಿ ದೇಣಿಗೆ ನೀಡಿದೆ. ಉಳಿದ ಆರ್ಥಿಕ ನೆರವು ಹಾಗೂ ವೈದ್ಯಕೀಯ ನೆರವನ್ನು ನೀಡುತ್ತಿವೆ.


Click it and Unblock the Notifications