ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ದೆಹಲಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ದೆಹಲಿ ಸಂಚಾರ ಪೊಲೀಸರು ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವ 100 ಕೆಟ್ಟ ಚಾಲಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ದೆಹಲಿಯ ವಿಶೇಷ ಸಂಚಾರ ಆಯುಕ್ತ ಮುಕ್ತೇಶ್ ಚಂದ್ರರವರ ಪ್ರಕಾರ ಸಾರ್ವಜನಿಕ ರಸ್ತೆಯಲ್ಲಿ ತಪ್ಪು ಚಾಲನೆ ಮಾಡುವ 100 ಜನರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಪೊಲೀಸರು ಈ ರೀತಿಯ ಪಟ್ಟಿ ಸಿದ್ಧಪಡಿಸುತ್ತಿರುವುದು ಇದೇ ಮೊದಲು.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಈ ಉಲ್ಲಂಘನೆಗಾಗಿ ಪಟ್ಟಿಯಲ್ಲಿ ಸೇರಿಸಲಾಗುವುದು

ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡುವುದು, ಅಪಾಯಕಾರಿ ಚಾಲನೆ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು. ವಾಹನ ಸವಾರರಿಗೆ ಅವರ ಚಾಲನಾ ಕೌಶಲ್ಯವು ತುಂಬಾ ಕಳಪೆಯಾಗಿದ್ದು, ಸುಧಾರಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸುವುದು ಈ ಪಟ್ಟಿಯನ್ನು ತಯಾರಿಸುವುದರ ಹಿಂದಿನ ಉದ್ದೇಶವಾಗಿದೆ.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಈ ಬಗ್ಗೆ ಮಾತನಾಡಿರುವ ಮುಕ್ತೇಶ್ ಚಂದ್ರರವರು, ಕೆಟ್ಟ ಚಾಲನೆಯನ್ನು ವಾಹನ ಸವಾರರಿಗೆ ತೋರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ವಾಹನ ಸವಾರರು ಪದೇ ಪದೇ ನಿಯಮಗಳನ್ನು ಉಲ್ಲಂಘಿಸುವುದರಿಂದ ತಮ್ಮನ್ನು, ತಮ್ಮ ಕುಟುಂಬದವರನ್ನು ಅಪಾಯಕ್ಕೆ ಸಂಕಷ್ಟಕ್ಕೆ ದೂಡುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಇತರರಿಗೂ ಅಪಾಯಕಾರಿಯಾಗುತ್ತಾರೆ ಎಂದು ಹೇಳಿದರು.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಸಂಚಾರ ನಿಯಮಗಳ ಬಗ್ಗೆ ಪೊಲೀಸರಿಂದ ತರಬೇತಿ

ದೆಹಲಿ ಪೊಲೀಸರು ಈ ಪಟ್ಟಿಯನ್ನು ತಯಾರಿಸಿದ ನಂತರ, ಪಟ್ಟಿಯಲ್ಲಿರುವ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ತರಬೇತಿ ನೀಡುತ್ತಾರೆ ಎಂದು ಮುಕ್ತೇಶ್ ಚಂದ್ರ ಹೇಳಿದರು. ಇದಕ್ಕಾಗಿ ಪೊಲೀಸರು ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸುತ್ತಾರೆ. ಪದೇ ಪದೇ ಕರೆ ಮಾಡಿದರೂ ತರಗತಿಗಳಿಗೆ ಹಾಜರಾಗದಿದ್ದರೆ, ಅಂತಹವರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಮೋಟಾರು ವಾಹನ ಕಾಯ್ದೆ ಸೆಕ್ಷನ್ 19 ರ ಅಡಿಯಲ್ಲಿ ಅಂತಹ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಅವರು ಭವಿಷ್ಯದಲ್ಲಿ ಮತ್ತೆ ಎಂದಿಗೂ ಪರವಾನಗಿ ಪಡೆಯಲು ಸಾಧ್ಯವಿಲ್ಲವೆಂದು ಮುಕ್ತೇಶ್ ಚಂದ್ರ ತಿಳಿಸಿದರು.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಮಾಹಿತಿ ಸಂಗ್ರಹ ಆರಂಭ

ದೆಹಲಿಯಲ್ಲಿ 100 ಕೆಟ್ಟ ಚಾಲಕರನ್ನು ಗುರುತಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈಗ ಡೇಟಾಬೇಸ್ ಅನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಪಟ್ಟಿ ಸಿದ್ಧವಾಗಲಿದೆ. ಪಟ್ಟಿ ಸಿದ್ಧವಾದ ನಂತರ ನಿಯಮಗಳನ್ನು ಉಲ್ಲಂಘಿಸಿರುವವರ ಮನೆ ಬಾಗಿಲಿಗೇ ನೋಟಿಸ್ ಕಳುಹಿಸಲಾಗುತ್ತದೆ.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಈ ನೋಟಿನ್ ನಲ್ಲಿ ರಸ್ತೆ ಸುರಕ್ಷತೆ ಹಾಗೂ ಸಮಾಲೋಚನೆ ತರಗತಿಗಳಿಗೆ ಹಾಜರಾಗುವಂತೆ ಹೇಳಲಾಗುತ್ತದೆ. ನಂತರ ಈ ಪಟ್ಟಿಯಲ್ಲಿರುವ ವಾಹನ ಸವಾರರ ಚಾಲನಾ ನಡವಳಿಕೆಯನ್ನು ವಿಶೇಷವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಮುಕ್ತೇಶ್ ಚಂದ್ರ ಹೇಳಿದರು.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ದೆಹಲಿಯಲ್ಲಿ ಇನ್ನು ಮುಂದೆ ಪಿಯುಸಿ ಕಡ್ಡಾಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲಕ್ಕೂ ಮುನ್ನ ವಾಯು ಮಾಲಿನ್ಯವನ್ನು ಎದುರಿಸಲು, ದೆಹಲಿ ಸರ್ಕಾರವು, ವಾಹನಗಳು ಮಾಲಿನ್ಯ ಪ್ರಮಾಣ ಪತ್ರ (ಪಿಯುಸಿ) ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಇದರ ಅನ್ವಯ ಇನ್ನು ಮುಂದೆ ಪಿಯುಸಿ ಪ್ರಮಾಣ ಪತ್ರ ಇಲ್ಲದೆ ವಾಹನ ಚಾಲನೆ ಮಾಡುವಾಗ ಸಿಕ್ಕಿ ಬೀಳುವವರಿಗೆ ರೂ. 10,000 ದಂಡ ವಿಧಿಸಲಾಗುತ್ತದೆ.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಇದರ ಜೊತೆಗೆ ಮಾತ್ರವಲ್ಲ ವಾಹನವು ಮಾನ್ಯವಾದ ಪಿಯುಸಿ ಪ್ರಮಾಣ ಪಡೆಯದಿದ್ದರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಅಥವಾ 3 ತಿಂಗಳ ಕಾಲ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ. ದೆಹಲಿ ಸಾರಿಗೆ ಇಲಾಖೆಯು (ಡಿಟಿಸಿ) ಭಾನುವಾರ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ಚಾಲಕರು ತಮ್ಮ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ಬೇಗನೆ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಪಿಯುಸಿ ಪ್ರಮಾಣ ಪತ್ರವಿಲ್ಲದೇ ಸಿಕ್ಕಿ ಬಿದ್ದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ದೆಹಲಿಯಲ್ಲಿ ಅಲ್ಲಿನ ಸಾರಿಗೆ ಇಲಾಖೆಯಿಂದ ಅನುಮೋದಿಸಲ್ಪಟ್ಟ 900 ಕ್ಕೂ ಹೆಚ್ಚು ಮಾಲಿನ್ಯ ಪರೀಕ್ಷಾ ಕೇಂದ್ರಗಳಿವೆ. ಇವುಗಳನ್ನು ದೆಹಲಿಯಾದಾದ್ಯಂತವಿರುವ ಪೆಟ್ರೋಲ್ ಬಂಕ್ ಹಾಗೂ ವರ್ಕ್ ಶಾಪ್ ಗಳಲ್ಲಿ ಸ್ಥಾಪಿಸಲಾಗಿದೆ.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಈ ಪರೀಕ್ಷಾ ಕೇಂದ್ರಗಳಲ್ಲಿ ವಾಹನಗಳಿಂದ ಹೊರ ಬರುವ ಕಾರ್ಬನ್ ಮಾನಾಕ್ಸೈಡ್ ಹಾಗೂ ಕಾರ್ಬನ್ ಡೈಆಕ್ಸೈಡ್ ನಂತಹ ವಿವಿಧ ಮಾಲಿನ್ಯಕಾರಕ ಅಂಶಗಳ ಪ್ರಮಾಣವನ್ನು ಪರೀಕ್ಷಿಸಲಾಗುತ್ತದೆ. ನಂತರ ಆ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಕೆಟ್ಟ ಚಾಲಕರ ಪಟ್ಟಿಗೆ ಸೇರಲಿದ್ದಾರೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರು

ಕೇಂದ್ರ ಮೋಟಾರು ವಾಹನಗಳ ಕಾಯಿದೆ, 1989 ರ ಅಡಿಯಲ್ಲಿ ಪಿಯುಸಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ವಾಹನಗಳನ್ನು ಪರೀಕ್ಷಿಸಲು ಪೆಟ್ರೋಲ್ ಬಂಕ್ ಗಳಲ್ಲಿ ಸ್ವಯಂಚಾಲಿತ ಪಿಯುಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರಿಶೀಲಿಸಿದ ನಂತರ ತಕ್ಷಣವೇ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಹೊರಸೂಸುವಿಕೆ ಮಿತಿಯನ್ನು ಮೀರಿದರೆ ಅಂತಹ ವಾಹನಗಳಿಗೆ ಪಿಯುಸಿ ಪ್ರಮಾಣ ಪತ್ರವನ್ನು ನೀಡುವುದಿಲ್ಲ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi traffic cops to prepare list of bad drivers who violates traffic norms often details
Story first published: Friday, September 24, 2021, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X