ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಕಡ್ಡಾಯವೆಂದು ಘೋಷಿಸಲಾಗಿತ್ತು. 2019ರ ಏಪ್ರಿಲ್ ನಂತರ ರಿಜಿಸ್ಟರ್ ಆದ ಎಲ್ಲಾ ವಾಹನಗಳಿಗೆ ಈ ನಿಯಮ ಕಡ್ಡಾಯವೆಂದು ಹೇಳಲಾಗಿತ್ತು.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಈಗ 2019ಕ್ಕಿಂತ ಮೊದಲು ರಿಜಿಸ್ಟರ್ ಆದ ವಾಹನಗಳೂ ಈ ನಿಯಮವನ್ನು ಪಾಲಿಸಬೇಕು ಎಂದು ದೆಹಲಿ ಸರ್ಕಾರ ಆದೇಶಿಸಿತ್ತು. ಈ ಕಾರಣಕ್ಕೆ ದೆಹಲಿಯ ಎಲ್ಲ ವಾಹನ ಮಾಲೀಕರು ತಮ್ಮ ವಾಹನಗಳಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ಮುಗಿಬಿದ್ದಿದ್ದರು. ಒಂದೇ ಬಾರಿಗೆ ಸಾವಿರಾರು ಜನರು ಹೆಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ಮುಂದಾಗಿರುವ ಕಾರಣಕ್ಕೆ ಗೊಂದಲ ಏರ್ಪಟ್ಟಿತ್ತು.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಈ ಕಾರಣಕ್ಕೆ ದೆಹಲಿ ಸರ್ಕಾರ ಹಾಗೂ ಹೆಚ್‌ಎಸ್‌ಆರ್‌ಪಿಗಳನ್ನು ಮಾರಾಟ ಮಾಡುತ್ತಿರುವ ರೋಸ್‌ಮೆರ್ಟಾ ಸೇಫ್ಟಿ ಸಿಸ್ಟಂ ಕಂಪನಿ ವಾಹನ ಮಾಲೀಕರ ಅನುಕೂಲಕ್ಕಾಗಿ ಆನ್‌ಲೈನ್ ಬುಕಿಂಗ್ ಸೌಲಭ್ಯವನ್ನು ಕಲ್ಪಿಸಿದ್ದವು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಒಂದೇ ಸಮಯದಲ್ಲಿ ಸಾವಿರಾರು ಜನರು ಲಾಗಿನ್ ಆಗಿದ್ದರಿಂದ ಇಂಟರ್ ನೆಟ್ ಕೂಡ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೆಚ್‌ಎಸ್‌ಆರ್‌ಪಿ ಬುಕ್ಕಿಂಗ್ ಅನ್ನು ಕಳೆದ ತಿಂಗಳು ನಿಲ್ಲಿಸಲಾಗಿತ್ತು. ಈಗ ಮತ್ತೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಆರಂಭಿಸಲಾಗಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಬುಕ್ಕಿಂಗ್ ಆರಂಭವಾದ ಎರಡೇ ದಿನಗಳಲ್ಲಿ 10,000ಕ್ಕೂ ಹೆಚ್ಚು ಜನರು ಬುಕ್ಕಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಮಾರಾಟ ಮಾಡುವ ರೋಸ್‌ಮಾರ್ಟಾ ಸೇಫ್ಟಿ ಸಿಸ್ಟಂ ಹಾಗೂ ದೆಹಲಿ ಸರ್ಕಾರಗಳು ಒತ್ತಡದಲ್ಲಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ರೋಸ್‌ಮಾರ್ಟಾ ಸೇಫ್ಟಿ ಸಿಸ್ಟಂ ವಿತರಕರ ಮೂಲಕ ಮಾತ್ರವಲ್ಲದೆ ಕೆಲವು ವ್ಯಕ್ತಿಗಳ ಮೂಲಕವೂ ಬುಕ್ಕಿಂಗ್ ಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ 10 ಸಾವಿರಕ್ಕೂ ಹೆಚ್ಚು ಹೆಚ್‌ಎಸ್‌ಆರ್‌ಪಿ ಹಾಗೂ ಒಂದು ಸಾವಿರ ಹೊಸ ಬಣ್ಣದ ಸ್ಟಿಕ್ಕರ್‌ಗಳಿಗೆ ಬುಕ್ಕಿಂಗ್ ಗಳನ್ನು ಸ್ವೀಕರಿಸಲಾಗಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಒಂದೇ ಬಾರಿಗೆ ಈ ಪ್ರಮಾಣದಲ್ಲಿ ಬುಕ್ಕಿಂಗ್ ಗಳನ್ನು ಸ್ವೀಕರಿಸಿರುವ ಕಾರಣ ಅವುಗಳನ್ನು ಪೂರೈಸಲು ಸಮಸ್ಯೆಯಾಗಲಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಬುಕ್ ಮಾಡುವವರಿಗೆ ಎಸ್ಎಂಎಸ್ ಅಥವಾ ಸೆಲ್ ಫೋನ್ ಮೂಲಕ ಮಾಹಿತಿ ನೀಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ವಿಳಂಬದ ಬಗ್ಗೆ ಹಾಗೂ ಹೊಸ ನಂಬರ್ ಪ್ಲೇಟ್ ಅನ್ನು ಯಾವಾಗ ನೀಡಲಾಗುವುದು ಎಂಬ ಬಗ್ಗೆ ಈ ಮೂಲಕ ಮಾಹಿತಿ ನೀಡಲಾಗುತ್ತದೆ. ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಹಾಗೂ ಹೊಸ ಕಲರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಇದರಿಂದ ವಾಹನಗಳನ್ನು ಮಾತ್ರವಲ್ಲದೆ ವಾಹನ ಆಧಾರಿತ ಅಪರಾಧದ ಹಿಂದಿನ ಮಾಹಿತಿಯನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಈ ಕಾರಣಕ್ಕೆ ದೇಶದೆಲ್ಲೆಡೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಜಾರಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆಯು ದೇಶದ ಎಲ್ಲಾ ರಾಜ್ಯಗಳು ಹಾಗೂ ಆರ್‌ಟಿಒಗಳಿಗೆ ಸೂಚನೆ ನೀಡುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಹೆಚ್‌ಎಸ್‌ಆರ್‌ಪಿ ಬಗೆಗಿನ ಮಾಹಿತಿ

ಹೆಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂ ಫಾಯಿಲ್ ನಿಂದ ತಯಾರಾದ ಎಲೆಕ್ಟ್ರಾನಿಕ್ ನಂಬರ್ ಪ್ಲೇಟ್ ಆಗಿದೆ. ಇದು ಕ್ರೋಮಿಯಂ ಹೊಲೊಗ್ರಾಮ್ ನಿಂದ ತಯಾರಾದ ಅಶೋಕ ಚಕ್ರವನ್ನು ಪ್ರತಿಬಿಂಬಿಸುವ ಸ್ಟಿಕ್ಕರ್ ಅನ್ನು ಹೊಂದಿರುತ್ತದೆ. ಇದನ್ನು ಸುಲಭವಾಗಿ ಹರಿದು ಹಾಕಲು ಸಾಧ್ಯವಿಲ್ಲ. ಇದರ ಕೆಳಗೆ ಭಾರತವನ್ನು ಸೂಚಿಸಲು 'ಐಎನ್‌ಡಿ' ಎಂಬ ಇಂಗ್ಲಿಷ್ ಪದವನ್ನು ನೀಲಿ ಬಣ್ಣದಲ್ಲಿ ಅಂಟಿಸಲಾಗಿರುತ್ತದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಈ ನಂಬರ್ ಪ್ಲೇಟ್ ನಲ್ಲಿ ವಾಹನದ ವಿಶಿಷ್ಟ ದಾಖಲೆಗಳನ್ನು ಮುದ್ರಿಸಲಾಗುತ್ತದೆ. ಇದರಿಂದ ಈ ನಂಬರ್ ಪ್ಲೇಟ್ ಸುರಕ್ಷಿತವೆಂದು ಸರ್ಕಾರ ಹೇಳುತ್ತಿದೆ. ಈ ನಂಬರ್ ಪ್ಲೇಟ್ ಅನ್ನು ಸಾಮಾನ್ಯ ಸ್ಕ್ರೂ ವಿಧಾನದ ಬದಲಿಗೆ ಜಿಪ್ಪರ್ ವಿಧಾನದ ಮೂಲಕ ಅಳವಡಿಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಇದರಿಂದ ವಾಹನದಲ್ಲಿ ಜೋಡಿಸಲಾಗಿರುವ ನಂಬರ್ ಪ್ಲೇಟ್ ಅನ್ನು ತೆಗೆದುಹಾಕಲಾಗುವುದಿಲ್ಲ ಹಾಗೂ ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗುವುದಿಲ್ಲ. ಈ ಮೂಲಕ ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸಿ ಮಾಡುವ ಅಪರಾಧಗಳನ್ನು ತಪ್ಪಿಸಬಹುದು.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು

ಈ ಹೊಸ ವ್ಯವಸ್ಥೆಯಿಂದ ಸಂಚಾರ ಅಪರಾಧಗಳು ಸಹ ಗಮನಾರ್ಹವಾಗಿ ಕಡಿಮೆಯಾಗಲಿವೆ. ನಿಯಮಗಳನ್ನು ಉಲ್ಲಂಘಿಸುವ ವಾಹನದ ಬಗೆಗಿನ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ವೆಹಿಕಲ್ ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.

ಗಮನಿಸಿ: ಈ ಫೋಟೋಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi vehicle owners gives overwhelming order for HSRP. Read in Kannada.
Story first published: Wednesday, November 4, 2020, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X