ಮೇಕಪ್‌ಗೆ ಬದಲು ಥಾರ್‌ಗೆ ಲಕ್ಷ ಲಕ್ಷ ಸುರಿದ ಸುಂದರಿ: ಎಸ್‍ಯುವಿ ಲುಕ್ ನೋಡಿ ಜನ ಶಾಕ್!

ಮಹೀಂದ್ರಾ ಥಾರ್ (Mahindra Thar) ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತದಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಲೈಫ್‌ಸ್ಟೈಲ್ ಎಸ್‌ಯುವಿ ಬಿಡುಗಡೆಗೊಂಡು ಮೂರು ವರ್ಷಗಳ ನಂತರವೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಥಾರ್ ಆಫ್-ರೋಡರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಈ ಎಸ್‍ಯುವಿಯನ್ನು ಹಲವಾರು ವಾಹನ ಪ್ರಿಯರು ಮಾಡಿಫೈ ಮಾಡುತ್ತಾರೆ. ಇತ್ತೀಚೆಗೆ ಯುವತಿಯೊಬ್ಬರು ತಮ್ಮ ಥಾರ್ ಎಸ್‍ಯುವಿಯನ್ನು ವಿಭಿನ್ನವಾಗಿ ಮಾಡಿಫೈಗೊಳಿಸಿದ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮಾಡಿಫೈ ಥಾರ್ ಎಸ್‍ಯುವಿ ವೀಡಿಯೊ ಮಿಹಿರ್ ಗಲಾಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಮಾಡಿಫೈ ಮಹೀಂದ್ರಾ ಥಾರ್‌ನ ಮಹಿಳಾ ಮಾಲೀಕರ ಪರಿಚಯದೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಥಾರ್ ಮಾಲೀಕೆಯ ಮೆಚ್ಚಿನ ಕಾರು ಮರ್ಸಿಡಿಸ್ ಬೆಂಝ್ G63 AMG ಎಂದು ಹೇಳಿಕೊಂಡಿದ್ದಾರೆ. ಅವರು ಮೊದಲು BMW ಕಾರನ್ನು ಹೊಂದಿದ್ದರು.

Customised Mahindra Thar

ಮಹೀಂದ್ರಾ ಥಾರ್ ಅನ್ನು ಏಕೆ ಖರೀದಿಸಿದಳು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಅವರು ತಮ್ಮ ಸ್ನೇಹಿತನ ಥಾರ್ ಅನ್ನು ಒಮ್ಮೆ ಅವರು ಓಡಿಸಿದರು. ಬಳಿಕ ಅವರಿಗೆ ಥಾರ್ ಮೇಲೆ ಲವ್ ಆಗಿದೆ. ಅಂದಿನಿಂದ ಅವರು ಥಾರ್ ಖರೀದಿಸಲು ನಿರ್ಧರಿಸಿದರು. ಖರೀದಿಸಿದ ಬಳಿಕ ಮಹೀಂದ್ರಾ ಥಾರ್ ಅನ್ನು ಮಾಡಿಫೈಗೊಳಿಸಿದ್ದಾರೆ.

ಮಾಡಿಫೈಗೊಂಡ ಮಹಿಂದ್ರಾ ಥಾರ್ ಮುಂಭಾಗದ ಪ್ರೊಫೈಲ್‌ನಿಂದ ಪ್ರಾರಂಭಿಸಿ, ಸಾಮಾನ್ಯ ಗ್ರಿಲ್ ಅನ್ನು ರಾಂಗ್ಲರ್ ಪ್ರೇರಿತ 7-ಸ್ಲ್ಯಾಟ್ ಗ್ರಿಲ್‌ನೊಂದಿಗೆ ನವೀಕರಿಸಲಾಗಿದೆ. ಹೆಡ್‌ಲೈಟ್‌ಗಳನ್ನು ಆಫ್ಟರ್‌ಮಾರ್ಕೆಟ್ ಪ್ರೊಜೆಕ್ಟರ್ LED ಹೆಡ್‌ಲೈಟ್‌ಗಳಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಮುಂಭಾಗದ ಬಂಪರ್ ಮತ್ತು ಫಾಗ್ ಲ್ಯಾಂಪ್‌ಗಳನ್ನು ಸ್ಟಾಕ್ ಇರಿಸಲಾಗಿದೆ. ಇನ್ನು ಫಾಗ್ ಲ್ಯಾಂಪ್‌ಗಳ ಬಲ್ಬ್‌ಗಳನ್ನು ಎಲ್‌ಇಡಿಗಳಾಗಿ ಬದಲಾಯಿಸಲಾಗಿದೆ.

Customised Mahindra Thar

ಈ ಸುಂದರವಾದ 22-ಇಂಚಿನ ಅಲಾಯ್ ವ್ಹೀಲ್ ಗಳ ಹಿಂದಿನ ಕಥೆಗಳ ಬಗ್ಗೆ ಮಾಲೀಕರು ಮಾತನಾಡುತ್ತಾರೆ. ಅವರು ಖರೀದಿಸಿದ ಮೊದಲ ದಿನದಲ್ಲಿ 20-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಕಾರನ್ನು ಲೋಡ್ ಮಾಡಿದ್ದರು ಆದರೆ ಅವರು ಈ 22-ಇಂಚಿನ ಅಲಾಯ್ ವ್ಹೀಲ್ ಗಳನ್ನು Instagram ರೀಲ್‌ನಲ್ಲಿ ನೋಡಿದರು ಮತ್ತು ಇದನ್ನು ಇಷ್ಟಪಟ್ಟರು. ಈ ಅಲಾಯ್ ವ್ಹೀಲ್ ಗಳನ್ನು ಸೋರ್ಸಿಂಗ್ ಮಾಡುವುದು ತುಂಬಾ ಕಷ್ಟಕರವಾಗಿತ್ತು ಮತ್ತು ಇವುಗಳನ್ನು ಪಂಜಾಬ್‌ನಿಂದ ರವಾನಿಸಲಾಗಿದೆ ಎಂದು ಅವರು ಹೇಳುತ್ತಾರೆ.

ವೆಚ್ಚಕ್ಕೆ ಸಂಬಂಧಿಸಿದಂತೆ, ಕೇವಲ ಅಲಾಯ್ ವ್ಹೀಲ್ ಗಳಿಗೆ ರೂ. 2.2 ಲಕ್ಷವಾಗಿದೆ. ಈ ಎಸ್‍ಯುವಿಯ ಎಲ್ಲಾ ವಿಂಡ್‌ ಶೀಲ್ಡ್‌ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿವೆ. ಈ ಎಸ್‍ಯುವಿಯ ಸೈಡ್ ಪ್ರೊಫೈಲ್‌ಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಪ್ರೊಫೈಲ್‌ನಲ್ಲಿ, ಟೈಲ್‌ಲೈಟ್‌ಗಳನ್ನು ಆಫ್ಟರ್‌ಮಾರ್ಕೆಟ್ ಲೈಟ್‌ಗಳಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಈ ಎಸ್‍ಯುವಿಯ ಕ್ಯಾಬಿನ್‌ನಲ್ಲಿನ ಬದಲಾವಣೆಗಳು ಮರ್ಸಿಡಿಸ್ ಪ್ರೇರಿತ ಎಸಿ ವೆಂಟ್‌ಗಳು ಮತ್ತು ಆಕ್ಟಿವ್ ಅಂಬೈನಸ್ ಲೈಟ್ ಅನ್ನು ಒಳಗೊಂಡಿವೆ.

ಒಟ್ಟಾರೆ ವೆಚ್ಚವನ್ನು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ ಅದು ಎಸ್‍ಯುವಿಯ ಬೆಲೆ ಸೇರಿ 22 ಲಕ್ಷ ರೂ. ಆಗಿದೆ. ಈ ಎಸ್‍ಯುವಿ ಮೈಲೇಜ್ ತುಂಬಾ ಕಡಿಮೆಯಾಗಿದೆ ಮತ್ತು ಪ್ರತಿ ಲೀಟರ್ ಇಂಧನಕ್ಕೆ ಸುಮಾರು ಏಳು ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಡ್ರೈವಿಂಗ್ ಶೈಲಿಯನ್ನು ಅವಲಂಬಿಸಿ ಮೈಲೇಜ್ ಅಂಕಿಅಂಶಗಳು ಬದಲಾಗಬಹುದು ಮತ್ತು ಇದು 22-ಇಂಚಿನ ಅಲಾಯ್ ವ್ಹೀಲ್ ಗಳು ಥಾರ್‌ನ 4×4 ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಾಗಿದೆ.

ಮಹೀಂದ್ರಾ ಥಾರ್ ದೊಡ್ಡ ಪ್ಲಸ್ ಪಾಯಿಂಟ್ ಅದರ ರಗಡ್ ವಿನ್ಯಾಸವಾಗಿದೆ. ಈ ಮಹೀಂದ್ರಾ ಥಾರ್ ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಈ ಥಾರ್ ಎಸ್‍ಯುವಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ.

More from DriveSpark

Article Published On: Monday, June 3, 2024, 13:29 [IST]
English summary
Delhi woman customised mahindra thar suv with 22 inch alloy wheels details
Read more on car modification india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+