ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಭಾರತದಲ್ಲಿ ವಾಹನದ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ವಾಹನಗಳ್ಳರು ಹೊಸ ಟೆಕ್ನಾಲಜಿಗಳನ್ನು ಬಳಸುತ್ತಿರುವುದರಿಂದ ವಾಹನ ಮಾಲೀಕರಿಗೆ ಭೀತಿ ಎದುರಾಗಿದೆ. ಅದರಲ್ಲೂ ದುಬಾರಿ ಬೆಲೆಯ ವಾಹನಗಳನ್ನು ಹೊಂದಿರುವವರು ಹೆಚ್ಚು ಭಯವನ್ನು ಹೊಂದಿರುತ್ತಾರೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ದಿನದಿನ ವಾಹನಗಳ್ಳತನಗಳ ಪ್ರಕರಣವು ಹೆಚ್ಚುತ್ತಲೇ ಇದೆ. ವಾಹನಗಳನ್ನು ಕಳ್ಳತನ ಮಾಡುವ ಖದೀಮರು ಅವುಗಳನ್ನು ಚೋರ್ ಬಜಾರ್‍‍ಗಳಲ್ಲಿ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುತ್ತಾರೆ. ಆಟೋ ಕಳ್ಳತನಕ್ಕೆ ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಗಳಿಲ್ಲ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಆದರೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಒಂದು ಪ್ರಕರಣವು ಆಶ್ಚರ್ಯ ತರಿಸುತ್ತದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ವಾಹನಗಳನ್ನು ಏಕೆ ಕದಿಯುತ್ತಾರೆ ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಎಂತಹವರಿಗಾದರೂ ನಗು ತರಿಸದೇ ಇರಲಾರದು.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳನ್ನು ನಿರಂತರವಾಗಿ ಕಳವು ಮಾಡಲಾಗುತ್ತಿತ್ತು. ನಿರ್ದಿಷ್ಟವಾಗಿ ದ್ವಿಚಕ್ರ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನ ಮಾಡಲಾಗುತ್ತಿತ್ತು. ಸರಣಿ ದೂರುಗಳು ಬಂದ ಕಾರಣ, ಪೊಲೀಸ್ ಅಧಿಕಾರಿಗಳು ಕಳ್ಳರನ್ನು ಪತ್ತೆ ಹಚ್ಚಲು ಘಟನಾ ಸ್ಥಳಕ್ಕೆ ಬಂದರು.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ದ್ವಿಚಕ್ರ ವಾಹನಗಳನ್ನು ಮಾತ್ರ ಏಕೆ ಕಳ್ಳತನ ಮಾಡಲಾಗುತ್ತಿದೆ ಎಂಬ ಪ್ರಶ್ನೆಗಳ ನಡುವೆ, ಈ ಖದೀಮರನ್ನು ಸೆರೆಹಿಡಿಯಲು ವಿಶೇಷ ಪಡೆಗಳನ್ನು ಸ್ಥಾಪಿಸಲಾಯಿತು. ಕೆಲವು ದಿನಗಳ ಹಿಂದೆ ದ್ವಾರಕಾದಲ್ಲಿ ಈ ವಾಹನಗಳ್ಳರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆಯಿತು.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಪೊಲೀಸರು ಅಲ್ಲಿಗೆ ಧಾವಿಸಿದಾಗ ರೂ.1.80 ಲಕ್ಷ ಬೆಲೆಯ ಬೈಕಿನಲ್ಲಿ ಬರುತ್ತಿದ್ದ ಇಬ್ಬರು ಎದುರಾದರು. ಆದರೆ ಆ ಬೈಕಿನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಅನುಮಾನ ಪಟ್ಟ ಪೊಲೀಸರು ಅವರನ್ನು ತಡೆದು ವಿಚಾರಣೆ ನಡೆಸಿದಾಗ ಈ ಇಬ್ಬರೇ ಬೈಕ್ ಕಳ್ಳರು ಎಂದು ತಿಳಿದುಬಂದಿದೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಲಲಿತ್ ಹಾಗೂ ಸಾಹೀದ್ ಎಂಬ ಹೆಸರಿನ ಈ ಇಬ್ಬರು ಆಪ್ತ ಮಿತ್ರರು. ಇದರಲ್ಲಿ ಲಲಿತನ್ ಡೋವೀಲರ್ ಕಳ್ಳತನದ ಹಿಂದಿನ ರೂವಾರಿ. ಬಿಹಾರ ಮೂಲದ ಅವನು 9ನೇ ತರಗತಿಯವರೆಗೆ ಓದಿದ್ದು, ವಾಟರ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೊಬ್ಬಳು ಗರ್ಲ್‍‍ಫ್ರೆಂಡ್ ಇದ್ದಾಳೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಅವಳೊಂದಿಗೆ ಪಾರ್ಟಿಗಳಿಗೆ ಹೋಗುವುದು ಲಲಿತನ ಕೆಲಸವಾಗಿತ್ತು. ಫೆಬ್ರವರಿ 14ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಯಿತು. ಆ ದಿನ ಲಲಿತ್‌ ವಾಹನಗಳ್ಳನಾಗಿ ಬದಲಾದ. ಅಂದು ಲಲಿತ್‌ನ ಬಳಿ ಬೈಕ್ ಇಲ್ಲ ಎಂದು ಅವನ ಗರ್ಲ್‍‍ಫ್ರೆಂಡ್ ಅವನನ್ನು ರೇಗಿಸಿದ್ದಾಳೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಇದರಿಂದ ಲಲಿತ್‌ನ ಮನಸ್ಸು ಮುರಿದುಹೋಗಿದೆ. ಗೆಳತಿಯು ರೇಗಿಸಿದ್ದರಿಂದ ಹೆಚ್ಚಿನ ಸಂಖ್ಯೆಯ ಬೈಕ್‍‍ಗಳನ್ನು ಹೊಂದಲು ತೀರ್ಮಾನಿಸಿದನು. ಈ ರೀತಿ ತೀರ್ಮಾನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಬೈಕ್‍‍ಗಳನ್ನು ಹೊಂದಲು ಅವನು ಆಯ್ಕೆ ಮಾಡಿದ ವಿಧಾನ ಅವನಿಗೆ ಸಂಕಷ್ಟವನ್ನು ತಂದಿದೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಲಲಿತ್ ತನ್ನ ಗರ್ಲ್‍‍ಫ್ರೆಂಡ್ ತನ್ನನ್ನು ಗೇಲಿ ಮಾಡಿರುವ ವಿಷಯವನ್ನು ತನ್ನ ಸ್ನೇಹಿತ ಸಾಹಿದ್ ಬಳಿ ಹೇಳಿದ್ದಾನೆ. ಇಬ್ಬರೂ ಸೇರಿ ಒಟ್ಟಿಗೆ ದ್ವಿಚಕ್ರ ವಾಹನಗಳನ್ನು ಕದಿಯಲು ಮುಂದಾಗಿದ್ದಾರೆ. ಇದರಿಂದ ಇಬ್ಬರೂ ಬೈಕ್ ಕಳ್ಳರಾದೆವು ಸಾಹಿದ್ ಹೇಳಿದ್ದಾನೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಇಬ್ಬರೂ ತಮ್ಮ ಕೃತ್ಯದ ಬಗ್ಗೆ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಹೋಂಡಾ ಆಕ್ಟಿವಾ ಸೇರಿದಂತೆ ಏಳು ದ್ವಿಚಕ್ರ ವಾಹನಗಳನ್ನು ಕದಿಯಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರಿಗೆ ಸಿಕ್ಕಿ ಬಿದ್ದಾಗ ಓಡಿಸುತ್ತಿದ್ದ ಬೈಕ್ ಸೇರಿ ಒಟ್ಟು ಎಂಟು ದ್ವಿಚಕ್ರ ವಾಹನಗಳನ್ನು ಕದ್ದಿದ್ದಾರೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಸ್ನೇಹಿತನೊಂದಿಗೆ ಸೇರಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಮುಂದಾದ ಈ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಲಲಿತ್ ಹಾಗೂ ಸಾಹಿದ್ ಅವರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ನಿಮ್ಮ ವಾಹನಗಳೂ ಸಹ ವಾಹನಗಳ್ಳರ ಪಾಲಾಗಬಹುದು. ಈ ಕಾರಣಕ್ಕೆ ಹೆಚ್ಚಿನ ಜಾಗರೂಕತೆಯನ್ನು ವಹಿಸಿ. ಕಾರು ನಿಲ್ಲಿಸಿ ಹೋಗುವಾಗ, ಡೋರ್‍‍ಗಳನ್ನು ಲಾಕ್ ಮಾಡಲು ಮರೆಯಬೇಡಿ. ಡೋರ್‍‍ಗಳು ಲಾಕ್ ಆಗಿವೆಯೇ ಎಂಬುದನ್ನು ಎರಡು ಬಾರಿ ಪರಿಶೀಲಿಸಿ.

ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಲಾಕ್ ಆದ ಶೋಕಿಲಾಲ

ಕೆಲವರು ಕೀಯನ್ನು ವಾಹನದಲ್ಲಿಯೇ ಬಿಟ್ಟು ಹೋಗುತ್ತಾರೆ. ಇದು ಖದೀಮರ ಕೆಲಸವನ್ನು ಮತ್ತಷ್ಟು ಸುಲಭವಾಗಿಸುತ್ತದೆ. ಆದ್ದರಿಂದ ವಾಹನದಿಂದ ಹೊರಬರುತ್ತಲೇ ಕೀಗಳನ್ನು ತೆಗೆದುಕೊಳ್ಳಿ. ಕಾರಿನ ವಿಂಡೊಗಳನ್ನು ಎಂದಿಗೂ ತೆರೆಯಬೇಡಿ. ಇದು ಕಾರಿನೊಳಗಿರುವ ದುಬಾರಿ ವಸ್ತುಗಳನ್ನು ದೋಚುವುದಕ್ಕೆ ಸಹಾಯ ಮಾಡುತ್ತದೆ. ವಾಹನಗಳನ್ನು ಸುರಕ್ಷಿತವಾಗಿರುವ ಪ್ರದೇಶಗಳಲ್ಲಿ ಮಾತ್ರ ನಿಲ್ಲಿಸಿ.

ಚಿತ್ರ ಕೃಪೆ: Tanseem Haider/India Today

Most Read Articles

Kannada
English summary
Delhi youth steals two wheelers to impress girlfriend. Read in Kannada.
Story first published: Wednesday, March 11, 2020, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X