ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಖಾಸಗಿ ಕಂಪನಿಗಳು ಡೆಲಿವರಿ ಸೇವೆಯ ಮೂಲಕ ಅಗತ್ಯ ವಸ್ತುಗಳಾದ ಆಹಾರ, ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತವೆ. ಗ್ರಾಹಕರಿಗೆ ಸೇವೆ ನೀಡಲು ಸಾವಿರಾರು ಡೆಲಿವರಿ ಬಾಯ್'ಗಳು ಬಿಸಿಲು, ಮಳೆಯನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಾರೆ.

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಆದರೆ ಕೆಲವು ಗ್ರಾಹಕರು ಡೆಲಿವರಿ ಬಾಯ್'ಗಳು ಬರಲು ಸ್ವಲ್ಪ ವಿಳಂಬ ಮಾಡಿದರೂ ಅವರನ್ನು ನಿಂದಿಸುವ, ಹಲ್ಲೆ ನಡೆಸುವ ಹಲವಾರು ಘಟನೆಗಳು ನಡೆಯುತ್ತಿವೆ. ಯಾವ ಕಾರಣಕ್ಕೆ ತಡವಾಯಿತು ಎಂದು ವಿಚಾರಿಸಲು ಸಹ ಹೋಗುವುದಿಲ್ಲ.

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಪರಿಸ್ಥಿತಿ, ಸಂದರ್ಭ ಏನೇ ಇರಲಿ ಡೆಲಿವರಿ ಬಾಯ್'ಗಳು ತಮ್ಮ ಕೆಲಸವನ್ನು ನಿರ್ವಹಿಸಲು ಹಿಂದೇಟು ಹಾಕುವುದಿಲ್ಲ. ಹೀಗೆ ಡೆಲಿವರಿ ಬಾಯ್'ಗಳಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಬಹುತೇಕ ಜನರು ಪದವಿಧರರು ಎಂಬುದು ವಿಶೇಷ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಕುಟುಂಬದ ಹಿನ್ನೆಲೆ ಹಾಗೂ ನಿರುದ್ಯೋಗದಿಂದಾಗಿ ಅವರು ಅನಿವಾರ್ಯವಾಗಿ ಈ ಕೆಲಸ ನಿರ್ವಹಿಸುತ್ತಿದ್ದಾರೆ. ಎಸ್‌ಸಿಎಂಪಿ ಸುದ್ದಿ ಸಂಸ್ಥೆಯು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿರುವ ಡೆಲಿವರಿ ಬಾಯ್ ಬಗ್ಗೆ ವರದಿ ಪ್ರಕಟಿಸಿದೆ.

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಡೆಲಿವರಿ ಬಾಯ್'ಗಳು ಸಾಮಾನ್ಯವಾಗಿ ಆಹಾರ ಅಥವಾ ಇತರ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಾರೆ. ಆದರೆ ಈ ಡೆಲಿವರಿ ಬಾಯ್ ತನ್ನ ವಾಹನದಲ್ಲಿ ಎರಡು ವರ್ಷದ ಹುಡುಗಿಯನ್ನು ಕರೆದೊಯ್ಯುತ್ತಾನೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಆ ಹುಡುಗಿ ಆತನ ಮಗಳು ಎಂಬುದು ವಿಶೇಷ. ಆಕೆಯ ಹೆಸರು ಲಿ ಫೀ. ಆಕೆ ಆರು ತಿಂಗಳ ಮಗುವಾಗಿದ್ದಾಗಿಂದಲೂ ತನ್ನ ತಂದೆಯ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಳೆ. ಆಕೆಯ ತಾಯಿ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಾರೆ.

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಬಡತನದ ಕಾರಣಕ್ಕೆ ಮಗುವಿನ ತಾಯಿ ತಂದೆ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತಂದೆಯೇ ಮಗುವಿನ ಹಾರೈಕೆ ಮಾಡುತ್ತಾನೆ. ತಾಯಿಯು ಕೆಲಸಕ್ಕೆ ಹೋಗುತ್ತಿದ್ದ ಕಾರಣಕ್ಕೆ ತಂದೆ ಮಗುವನ್ನು ತನ್ನ ವಾಹನದ ಡೆಲಿವರಿ ಬಾಕ್ಸ್'ನಲ್ಲಿಟ್ಟು ಹಾರೈಕ್ ಮಾಡುತ್ತಿದ್ದ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಈ ಡೆಲಿವರಿ ಬಾಕ್ಸ್ ಅನ್ನು ಮೆತ್ತನೆಯ ಬಟ್ಟೆಗಳಿಂದ ತಯಾರಿಸಲಾಗಿದೆ ಎಂಬುದು ಗಮನಾರ್ಹ. ಲಿ ಫೀಗೆ ಈಗ 2 ವರ್ಷ. ಹಸಿವಾದಾಗ ಆಕೆಗೆ ಬಾಟಲಿ ಹಾಲು ನೀಡಲಾಗುತ್ತದೆ. ಕೆಲಸದ ಸಮಯದಲ್ಲಿ ಮಗುವನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಯಾವುದೇ ತೊಂದರೆ ಇಲ್ಲವೆಂದು ಮಗುವಿನ ತಂದೆ ಹೇಳಿದ್ದಾನೆ.

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಅವಳು ಆಗಾಗ್ಗೆ ಅಳುವುದಿಲ್ಲ. ಸದಾ ನಗು ಮುಖವನ್ನು ಹೊಂದಿರುತ್ತಾಳೆ ಎಂದು ಆತ ಹೇಳಿದ್ದಾನೆ. ಇದನ್ನು ದೃಢೀಕರಿಸುವಂತೆ ಡೆಲಿವರಿ ಬಾಕ್ಸ್'ನಲ್ಲಿ ಲಿ ಫೀ ನಗುತ್ತಿರುವ ದೃಶ್ಯಗಳ ವೀಡಿಯೊ ವೈರಲ್ ಆಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಲಿ ಫೀ ಐದು ತಿಂಗಳ ಮಗುವಾಗಿದ್ದಾಗ ನ್ಯುಮೋನಿಯಾಗೆ ತುತ್ತಾಗಿದ್ದಳು. ಆಗ ಆಕೆಗೆ ಚಿಕಿತ್ಸೆ ಕೊಡಿಸಲು ತಾಯಿ ತಂದೆ ಇಬ್ಬರೂ ಬಹಳ ಕಷ್ಟ ಪಟ್ಟಿದ್ದರು. ಲಿ ಫೀ ಜೊತೆಗೆ ಆಟವಾಡಲು ಆಟಿಕೆಗಳಾಗಲಿ ಅಥವಾ ಸ್ನೇಹಿತರಾಗಲಿ ಇಲ್ಲ.

ತಂದೆಯ ಜೊತೆಗೆ ಡೆಲಿವರಿ ಬಾಕ್ಸ್'ನಲ್ಲಿ ಸದಾ ಇರುತ್ತದೆ ಈ ಮುದ್ದು ಕಂದ

ಇದರಿಂದ ಆಕೆ ಸದಾ ಏಕಾಂಗಿಯಾಗಿರುತ್ತಾಳೆ. ವೀಡಿಯೊ ವೈರಲ್ ಆದ ನಂತರ ಅನೇಕ ಜನರು ಆಕೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ 2 ವರ್ಷದ ಮಗುವಿನ ಸ್ಥಿತಿಯನ್ನು ನೋಡಿ ಹಲವರು ಕಣ್ಣೀರು ಹಾಕಿದ್ದಾರೆ.

ಚಿತ್ರಕೃಪೆ: ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್

Most Read Articles

Kannada
English summary
Delivery boy carries his daughter in delivery box. Read in Kannada.
Story first published: Thursday, April 1, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X