Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- News
ಅಮೆಜೊನಿಯಾ -1 ಹಾಗೂ 18 ಉಪಗ್ರಹಗಳು ಯಶಸ್ವಿ ಉಡಾವಣೆ
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುದ್ದಿನ ಪಾಂಡಾದೊಂದಿಗೆ ಕೆಲಸದ ಕೊನೆಯ ದಿನವನ್ನು ಸ್ಮರಣೀಯವಾಗಿಸಿಕೊಂಡ ಡೆಲಿವರಿ ಬಾಯ್
ಬಹುತೇಕ ಜನರು ಪಾಂಡಾ ಕರಡಿಗಳನ್ನು ಇಷ್ಟಪಡುತ್ತಾರೆ. ಮುದ್ದು ಮುದ್ದಾಗಿ ಕಾಣುವ ಪಾಂಡಾ ಕರಡಿಗಳ ಜೊತೆ ಕಾಲ ಕಳೆಯುವುದರಲ್ಲಿರುವ ಖುಷಿಯೇ ಬೇರೆ. ಈ ಪಾಂಡಾಗಳನ್ನು ಚೀನಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ಈ ಸಸ್ತನಿ ಸೋಮಾರಿತನಕ್ಕೆ ಹೆಸರುವಾಸಿಯಾಗಿದೆ. ಆದರೂ ಪಾಂಡಾ ಉಳಿದ ಪ್ರಾಣಿಗಳಿಗಿಂತ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಯುವಕನೊಬ್ಬ ತನ್ನ ಉದ್ಯೋಗದ ಕೊನೆಯ ದಿನ ಪಾಂಡಾವನ್ನು ಜೊತೆಗಿಟ್ಟುಕೊಂಡು ಕಾರ್ಯನಿರ್ವಹಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.

ಉಸೇರ್ ಎಂಬಾತ ಫುಡ್ ಪಾಂಡಾವೊಂದರಲ್ಲಿ ವಿತರಣಾ ಪಾಲುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮಲೇಷ್ಯಾ ಮೂಲದ ಆತ ತನ್ನ ಮುದ್ದಿನ ಪಾಂಡಾವನ್ನು ಬೆನ್ನಿಗೆ ಕಟ್ಟಿಕೊಂಡು ಕಾರ್ಯ ನಿರ್ವಹಿಸಿದ್ದಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫುಡ್ ಪಾಂಡಾದಲ್ಲಿನ ತನ್ನ ಕೊನೆಯ ದಿನ ಆತ ಹೀಗೆ ಕಾರ್ಯ ನಿರ್ವಹಿಸಿದ್ದಾನೆ. ಈ ತಿಂಗಳ 11 ಆತನ ಕೆಲಸದ ಕೊನೆಯ ದಿನವಾಗಿತ್ತು. ತನ್ನ ಕೊನೆಯ ದಿನವನ್ನು ಸ್ಮರಣೀಯವಾಗಿಸಲು ಆತ ತನ್ನ ಪಾಂಡಾದೊಂದಿಗೆ ಕಾರ್ಯನಿರ್ವಹಿಸಿದ್ದಾನೆ.

ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಆತ, ಫುಡ್ ಪಾಂಡಾದಲ್ಲಿನ ನನ್ನ ಕೊನೆಯ ದಿನದಂದು ನಾನು ಹೊರಡುವ ಮುನ್ನ ಈ ಸೋಮಾರಿಯನ್ನು ಎತ್ತಿಕೊಂಡೆ ಎಂದು ಪೋಸ್ಟ್ ಮಾಡಿದ್ದಾನೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಪೋಸ್ಟ್ ಹಾಗೂ ಫೋಟೋಗಳನ್ನು ನೋಡಿದವರು ಇದನ್ನು ನಿಜವಾದ ಪಾಂಡಾವೆಂದು ಭಾವಿಸಿದ್ದಾರೆ. ಆದರೆ ಫೋಟೋದಲ್ಲಿರುವುದು ನಿಜವಾದ ಪಾಂಡಾ ಅಲ್ಲ. ಬದಲಿಗೆ ಉಸೇರ್ ತನ್ನ ಫೋಟೋಶಾಪ್ ಕೌಶಲ್ಯದ ಮೂಲಕ ನಿಜವಾದ ಪಾಂಡಾ ತನ್ನೊಂದಿಗೆ ಇರುವಂತೆ ವಿನ್ಯಾಸಗೊಳಿಸಿದ್ದಾನೆ.

ಪಾಂಡಾವನ್ನು ಹೊರತುಪಡಿಸಿ ಉಳಿದೆಲ್ಲವೂ ನಿಜ. ಅಂದರೆ ಉಸೇರ್, ಫುಡ್ ಪಾಂಡಾದ ವಿತರಣಾ ಪಾಲುದಾರನಾಗಿ ಕೊನೆಯ ಬಾರಿಗೆ ಕಾರ್ಯನಿರ್ವಹಿಸಿದ್ದು ನಿಜ. ತನ್ನ ಕೊನೆಯ ಕೆಲಸದ ದಿನವನ್ನು ಸ್ಮರಣೀಯವಾಗಿಸಲು ಫೋಟೋಶಾಪ್ ಮೂಲಕ ಈ ಕಾರ್ಯಕ್ಕೆ ಮುಂದಾಗಿದ್ದಾನೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಫೋಟೋಶಾಪ್ ಚಿತ್ರಗಳು ಉಸೇರ್'ನ ಚಿತ್ರಗಳನ್ನು ನಿಜವೆಂದು ಬಿಂಬಿಸಿದ್ದವು. ಆದರೆ ಉಸೇರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. ಟ್ವಿಟರ್'ನಲ್ಲಿ ಪೋಸ್ಟ್ ಮಾಡಲಾದ ಈ ಫೋಟೋ ಸದ್ಯಕ್ಕೆ 46,000ಕ್ಕೂ ಹೆಚ್ಚು ಲೈಕ್ ಹಾಗೂ 15,900ಕ್ಕೂ ರಿಟ್ವೀಟ್‌ಗಳನ್ನು ಪಡೆದಿದೆ.

ವಾಸ್ತವವಾಗಿ ಈ ರೀತಿಯ ಅಪರೂಪದ ಪ್ರಾಣಿಗಳನ್ನು ಜೊತೆಯಲ್ಲಿ ಕರೆದೊಯ್ಯುವುದು ಅಪರಾಧವಾಗಿದೆ. ವಾಹನಗಳಲ್ಲಿ ಸಾಗಿಸಿದರೆ ಅರಣ್ಯ ಅಧಿಕಾರಿಗಳು ಅಥವಾ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಲೂ ಬಹುದು.