ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ಡೆಲ್ಟಾ ಏರ್‌ಲೈನ್ಸ್ ಫ್ಲೈಟ್ 386 ಅಮೆರಿಕಾದ ಲಾಸ್ ಏಂಜಲೀಸ್‌ನಿಂದ ನ್ಯಾಶ್‌ವಿಲ್ಲೆಗೆ ಹಾರಾಟ ನಡೆಸುತ್ತಿತ್ತು. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ತನ್ನ ಸೀಟಿನಿಂದ ಇದ್ದಕ್ಕಿದ್ದಂತೆ ಎದ್ದು ಬಂದಿದ್ದಾನೆ.

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ಇತರ ಸಹ ಪ್ರಯಾಣಿಕರು ಆತ ಬಾತ್‌ರೂಮ್‌ಗೆ ಹೋಗುತ್ತಿದ್ದಾನೆಂದು ಭಾವಿಸಿದ್ದರಿಂದ ಯಾರೂ ಅವನನ್ನು ಪ್ರಶ್ನಿಸಲಿಲ್ಲ. ಆದರೆ ಆತ ಆತುರದಿಂದ ಕಾಕ್‌ಪಿಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆಘಾತಕ್ಕೊಳಗಾದ ಇತರ ಪ್ರಯಾಣಿಕರು ಹಾಗೂ ಫ್ಲೈಟ್ ಅಟೆಂಡೆಂಟ್‌ಗಳು ತಕ್ಷಣವೇ ಆತನನ್ನು ತಡೆದಿದ್ದಾರೆ.

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ಆತ ಏರ್ ಚೇಂಬರ್'ಗೆ ಪ್ರವೇಶಿಸಲು ಯತ್ನಿಸಿದಾಗ ಸಹ ಪ್ರಯಾಣಿಕರು ಹಾಗೂ ಫ್ಲೈಟ್ ಅಟೆಂಡೆಂಟ್‌ಗಳು ಆತನನ್ನು ಕೆಳಕ್ಕೆ ತಳ್ಳಿ ಅವನ ಕೈ ಹಾಗೂ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದ್ದಾರೆ. ಆತ ಕಾಕ್‌ಪಿಟ್‌ ಪ್ರವೇಶಿಸಿ ವಿಮಾನ ಅಪಹರಿಸುವ ಸಾಧ್ಯತೆಗಳಿದ್ದವು ಎಂದು ಶಂಕಿಸಲಾಗಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ತಕ್ಷಣವೇ ವಿಮಾನವನ್ನು ಅಲ್ಬುಕರ್ಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ವಿಮಾನ ಇಳಿದ ನಂತರ ವಿಮಾನದಲ್ಲಿ ಕಟ್ಟಿಹಾಕಿದ್ದ ಪ್ರಯಾಣಿಕನನ್ನು ಪೊಲೀಸರು ಹಾಗೂ ಎಫ್‌ಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಶದಲ್ಲಿರುವ ಶಂಕಿತನ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ಈ ಘಟನೆ ನಡೆದಾಗ ವಿಮಾನದಲ್ಲಿ ಒಟ್ಟು 162 ಪ್ರಯಾಣಿಕರು ಇದ್ದರು. ಅವರಲ್ಲಿ ಕೆಲವರು ಈ ಘಟನೆಯನ್ನು ರೆಕಾರ್ಡ್ ಮಾಡಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಲವಾರು ಜನರು ಈ ವೀಡಿಯೊಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ಈ ಘಟನೆ ಜೂನ್ 4 ರಂದು ಮಧ್ಯಾಹ್ನ 2:18ಕ್ಕೆ ನಡೆದಿದೆ. ವಿಮಾನ ಅಲ್ಬುಕರ್ಕ್‌ನಲ್ಲಿ ಲ್ಯಾಂಡಿಂಗ್ ಆಗಿ ಸುಮಾರು 5 ಗಂಟೆ ತಡವಾಗಿ ನ್ಯಾಶ್‌ವಿಲ್ಲೆ ತಲುಪಿದೆ. ಡೆಲ್ಟಾ ಏರ್‌ಲೈನ್ಸ್ ಈ ಘಟನೆಯ ಬಗ್ಗೆ, ವಿಮಾನದಲ್ಲಿರುವ ಪ್ರಯಾಣಿಕರ ಬಗ್ಗೆ ಅಥವಾ ಶಂಕಿತನು ವಿಮಾನವನ್ನು ಅಪಹರಿಸಲು ಯತ್ನಿಸಿರುವುದರ ಬಗ್ಗೆ ಸದ್ಯಕ್ಕೆ ಯಾವುದೇ ಹೇಳಿಕೆ ನೀಡಿಲ್ಲ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸಿದವನನ್ನು ಕಟ್ಟಿ ಹಾಕಿದ ಸಹ ಪ್ರಯಾಣಿಕರು

ಯಾವ ಕಾರಣಕ್ಕೆ ಆ ಶಂಕಿತ ಪ್ರಯಾಣಿಕ ವಿಮಾನದ ಕಾಕ್‌ಪಿಟ್‌'ನೊಳಗೆ ಪ್ರವೇಶಿಸಲು ಪ್ರಯತ್ನಿಸಿದ, ಆತನ ಉದ್ದೇಶವೇನಾಗಿತ್ತು ಎಂಬುದು ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ತಿಳಿಯ ಬೇಕಾಗಿದೆ.

ಮೂಲ: ಯುಎಸ್ಎಟುಡೆ

Most Read Articles

Kannada
English summary
Delta airlines attendants and co passengers tie the passenger know why. Read in Kannada.
Story first published: Monday, June 7, 2021, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X