ದೆಹಲಿಯಲ್ಲಿ ಎಲೆಕ್ಟ್ರಿಕ್ ಆಟೋ ಓಡಿಸುತ್ತಿರುವ ಡೆನ್ಮಾರ್ಕ್ ರಾಯಭಾರಿ
ಭಾರತದಲ್ಲಿನ ಡೆನ್ಮಾರ್ಕ್ ರಾಯಭಾರಿ ಸ್ವೆನ್ ಫ್ರೆಡ್ಡಿ ಅವರು ಎಲೆಕ್ಟ್ರಿಕ್ ವೆಹಿಕಲ್ ಮೊಬಿಲಿಟಿ ಅಭಿಯಾನದ ಭಾಗವಾಗಿ ದೆಹಲಿಯಲ್ಲಿ ಇ-ಆಟೋ (ಎಲೆಕ್ಟ್ರಿಕ್ ಆಟೋರಿಕ್ಷಾ) ಚಾಲನೆ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.

ಗ್ರೀನ್ ಎನರ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗಾಗಿ ಭಾರತ ಮತ್ತು ಡೆನ್ಮಾರ್ಕ್ ನಡುವಿನ ಪಾಲುದಾರಿಕೆಯನ್ನು ಉಲ್ಲೇಖಿಸಿದ ಅವರು, ಮಾಲಿನ್ಯವನ್ನು ಎದುರಿಸಲು ಮತ್ತು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಉಭಯ ದೇಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಭಾರತದ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕೂಡ ಮಾಲಿನ್ಯ ತಗ್ಗಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಮೇ 24 ರಿಂದ ದೆಹಲಿಯಲ್ಲಿ 150 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡಲಾಗುವುದು.

ಜತೆಗೆ ಈ ಎಲೆಕ್ಟ್ರಿಕ್ ಬಸ್‌ಗಳ ಉದ್ಘಾಟನೆ ಸಂದರ್ಭದಲ್ಲಿ ಮೇ 24ರಿಂದ ಮೇ 26ರವರೆಗೆ ಸಾರ್ವಜನಿಕರಿಗೆ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿತ್ತು. ಇ-ಬಸ್‌ಗಳನ್ನು ಪರಿಚಯಿಸಿದ ಮೂರು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ರಾಜಧಾನಿಯಲ್ಲಿ ಪ್ರಯಾಣಿಸಿದ್ದಾರೆ. ಇದರಲ್ಲಿ ಶೇ 40 ರಷ್ಟು ಮಹಿಳಾ ಪ್ರಯಾಣಿಕರು ಇದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

FAME-2 ಯೋಜನೆಯಡಿ ಇ-ಬಸ್‌ಗಳಿಗೆ ಸಬ್ಸಿಡಿ
ಇಂಗ್ಲಿಷ್ ಪತ್ರಿಕೆಯೊಂದರ ವರದಿಯ ಪ್ರಕಾರ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ FAME-II ಯೋಜನೆಯಡಿ (ಭಾರತದಲ್ಲಿ ವಿದ್ಯುತ್ ವಾಹನಗಳ ವೇಗವರ್ಧನೆ)ಯಲ್ಲಿ 64 ನಗರಗಳಲ್ಲಿ 5,595 ಎಲೆಕ್ಟ್ರಿಕ್ ಬಸ್‌ಗಳನ್ನು ಇಂಟ್ರಾ-ಸಿಟಿ ಮತ್ತು ಕಾರ್ಯಾಚರಣೆಗಳಿಗೆ ಅನುಮೋದಿಸಲಾಗಿದೆ.

ದೆಹಲಿಯಲ್ಲಿ, FAME-2 ಯೋಜನೆಯಡಿಯಲ್ಲಿ 300 ಇ-ಬಸ್‌ಗಳನ್ನು ನಿಗದಿಪಡಿಸಲಾಗಿದೆ, ಅದರಲ್ಲಿ 150 ಬಸ್‌ಗಳನ್ನು ಮೇ 24 ರಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಚಾಲನೆ ನೀಡಿದರು.

ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಕೇಂದ್ರದ ಕೊಡುಗೆ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್, ಮುಂದಿನ ಹತ್ತು ವರ್ಷಗಳಲ್ಲಿ ದೆಹಲಿ ಸರ್ಕಾರ ಒಟ್ಟು 1,862 ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಖರ್ಚು ಮಾಡಲು ಯೋಜಿಸುತ್ತಿದೆ, ಇದಕ್ಕಾಗಿ ಕೇಂದ್ರವು 150 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಹೇಳಿದರು.

ಇ-ಬಸ್‌ಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಜ್ರಿವಾಲ್, "ದೆಹಲಿಯ ಇತಿಹಾಸದಲ್ಲಿ ಇದು ಮಹತ್ವದ ದಿನವಾಗಿದೆ - ಡಿಟಿಸಿ (ದೆಹಲಿ ಸಾರಿಗೆ ನಿಗಮ)ದ ಫ್ಲೀಟ್‌ಗೆ 150 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸಲಾಗಿದೆ. ನಾವು ಈ ಬಸ್‌ಗಳನ್ನು ಅಧಿಕೃತವಾಗಿ ಪ್ರಾರಂಭಿಸಿದ್ದೇವೆ. ನಾನೂ ಕೂಡ ಒಂದರಲ್ಲಿ ಪ್ರಯಾಣಿಸಿದ್ದೇನೆ. ಅದ್ಬುತವಾಗಿ ಇವನ್ನು ನಿರ್ಮಿಸಲಾಗಿದೆ. ಪ್ರಯಾಣಿಸಲು ತುಂಬಾ ಆರಾಮದಾಯಕವಾಗಿದೆ ಎಂದರು."

ದೆಹಲಿಯಲ್ಲಿ ಹೊಸ ಎಲೆಕ್ಟ್ರಿಕ್ ಬಸ್‌ಗಳ ಆಗಮನದೊಂದಿಗೆ, ಸಾರ್ವಜನಿಕ ಬಸ್‌ಗಳ ಸಂಖ್ಯೆ 7,200 ಗಡಿ ದಾಟಿದೆ, ಇದು ಇದುವರೆಗಿನ ಅತಿ ಹೆಚ್ಚು. ಮುಂದಿನ ತಿಂಗಳು ಇನ್ನೂ 150 ಇ-ಬಸ್‌ಗಳನ್ನು ಸೇರಿಸಲಾಗುವುದು ಮತ್ತು 2023 ರ ವೇಳೆಗೆ ಇನ್ನೂ 2,000 ಹೊಸ ಇ-ಬಸ್‌ಗಳನ್ನು ನಗರಕ್ಕೆ ತರಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿಯಲ್ಲಿ ಇ-ಬೈಸಿಕಲ್ ಮೇಲೆ ರಿಯಾಯಿತಿ
ಈ ನಡುವೆ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಬೈಕ್‌ಗಳ ನಂತರ, ದೆಹಲಿ ಸರ್ಕಾರವು ಈಗ ಇ-ಬೈಸಿಕಲ್‌ಗಳಿಗೂ ಸಬ್ಸಿಡಿ ನೀಡಲು ಮುಂದೆ ಬಂದಿದೆ. ಇತ್ತೀಚೆಗೆ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರು ಎಲೆಕ್ಟ್ರಿಕ್ ಬೈಸಿಕಲ್‌ಗಳ ಖರೀದಿಗೆ ಶೇಕಡಾ 33 ರಷ್ಟು ಸಬ್ಸಿಡಿಯನ್ನು ಪ್ರಕಟಿಸಿದ್ದರು. ಇದು ಗರಿಷ್ಠ ರೂ. 15,000 ವರೆಗೆ ಇರಲಿದೆ.

ಹೊಸ ನೀತಿಯ ಪ್ರಕಾರ, ದೆಹಲಿಯ ಪ್ರಯಾಣಿಕರು ಎಲೆಕ್ಟ್ರಿಕ್ ಬೈಸಿಕಲ್‌ನ ಬೆಲೆಯಲ್ಲಿ ಶೇಕಡಾ 25 ಮತ್ತು ಕಾರ್ಗೋ ಎಲೆಕ್ಟ್ರಿಕ್ ಬೈಸಿಕಲ್‌ನ ಬೆಲೆಯಲ್ಲಿ ಶೇಕಡಾ 33 ರಷ್ಟು ಸಬ್ಸಿಡಿ ಪಡೆಯಬಹುದು. ಕಾರ್ಗೋ ಇ-ಬೈಸಿಕಲ್‌ಗಳ ಮೇಲೆ ಗರಿಷ್ಠ 5,500 ರೂ. ಸಬ್ಸಿಡಿ ನೀಡುತ್ತಿದೆ. ಮೊದಲ 1,000 ಖರೀದಿದಾರರಿಗೆ ಹೆಚ್ಚುವರಿ 2,000 ರೂ. ಇರಲಿದೆ.

ಥರ್ಡ್ ಪಾರ್ಟಿ ವಾಹನ ವಿಮಾ ಪ್ರೀಮಿಯಂ ಜೂನ್ 2022 ರಿಂದ ಹೆಚ್ಚಾಗಲಿದೆ
ಜೂನ್ 1, 2022 ರಿಂದ ಮೂರನೇ ವ್ಯಕ್ತಿಯ ವಾಹನ ವಿಮಾ ಪ್ರೀಮಿಯಂ ಅನ್ನು ಹೆಚ್ಚಿಸಲು ಸರ್ಕಾರ ಮತ್ತು ವಿಮಾ ಕಂಪನಿಗಳು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಹೆಚ್ಚಿದ ಪ್ರೀಮಿಯಂ ವಿವರಗಳನ್ನು ಬಹಿರಂಗಪಡಿಸಿದೆ.

ಈ ನಿರ್ಧಾರದ ನಂತರ ವಾಹನ ಸವಾರರು ಜೂನ್ 1 ರಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ವಿಮೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ದೇಶದಲ್ಲಿ ಕೋವಿಡ್-19 ನಿಂದಾಗಿ ವಿಧಿಸಲಾದ ನಿಷೇಧದ ಕಾರಣ ಕಳೆದ ಎರಡು ವರ್ಷಗಳಿಂದ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಕೊನೆಯ ಬಾರಿಗೆ ವಿಮಾ ಪ್ರೀಮಿಯಂ ಅನ್ನು 2019-2020 ರಲ್ಲಿ ಮಾತ್ರ ಪರಿಷ್ಕರಿಸಲಾಗಿದೆ. ಈ ಹಿಂದೆ, ಥರ್ಡ್ ಪಾರ್ಟಿ ಪ್ರೀಮಿಯಂ ದರಗಳನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಮಂಡಳಿ (IRDAI) ಪ್ರಕಟಿಸಿತ್ತು. ಆದರೆ, ಮೊದಲ ಬಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಐಆರ್‌ಡಿಎಐ ಜೊತೆ ಸಮಾಲೋಚನೆ ನಡೆಸಿ ಪ್ರೀಮಿಯಂ ದರಗಳನ್ನು ಪ್ರಕಟಿಸಿದೆ.


Click it and Unblock the Notifications








