ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ವಿಷಯಕ್ಕೆ ಬಂದಾಗ ಡೆನ್ಮಾರ್ಕ್ ಹಾಗೂ ನಾರ್ವೆ ದೇಶಗಳ ಹೆಸರು ಮೊದಲು ಕೇಳಿ ಬರುತ್ತದೆ. ಈ ದೇಶಗಳು ಶುದ್ಧ ಇಂಧನ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಸಂಶೋಧನೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಇದರ ಜೊತೆಗೆ ಪರಿಸರ ಸ್ನೇಹಿ ವಾಹನಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ಈಗ ಡೆನ್ಮಾರ್ಕ್ ಹಾಗೂ ನಾರ್ವೆ ದೇಶಗಳು ಹೈಡ್ರೋಜನ್ ಚಾಲಿತ ಫೆರ್ರಿ ಹಡಗನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ವರದಿಯಾಗಿದೆ.

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಈ ಫೆರ್ರಿ ಹಡಗು ಡೆನ್ಮಾರ್ಕ್‌ನ ರಾಜಧಾನಿ ಕೋಪನ್ ಹೇಗನ್‌ನಿಂದ ನಾರ್ವೆಯ ರಾಜಧಾನಿ ಓಸ್ಲೋವರೆಗೆ ಫೆರ್ರಿಯಂತೆ ಚಲಿಸುತ್ತದೆ. ಈ ಫೆರ್ರಿ ಹಡಗು ಟೈಟಾನಿಕ್‌ ಹಡಗಿನಷ್ಟು ದೊಡ್ಡದಾಗಿರಲಿದ್ದು, ಏಕಕಾಲದಲ್ಲಿ 1,800 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಈ ಯೋಜನೆಯನ್ನು ಪೂರ್ಣಗೊಳಿಸಲು ಎರಡೂ ದೇಶಗಳು ಯುರೋಪಿಯನ್ ಯೂನಿಯನ್'ನಿಂದ ಆರ್ಥಿಕ ನೆರವು ಕೋರಿವೆ. ಈ ಯೋಜನೆಯು ಕಡಲ ಸಾರಿಗೆಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹವಾಮಾನ ಬದಲಾವಣೆಯನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಎರಡೂ ದೇಶಗಳು ಹೇಳಿಕೊಂಡಿವೆ.

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಈ ದೈತ್ಯ ಫೆರ್ರಿ ಹಡಗಿಗೆ ಯುರೋಪಾ ಸಿವೇಜ್ ಎಂದು ಹೆಸರಿಡಲಾಗಿದೆ. ಇದೊಂದು ಅತ್ಯಂತ ಶಕ್ತಿಶಾಲಿ ಹಡಗು ಆಗಿರಲಿದೆ ಎಂದು ಹೇಳಲಾಗಿದೆ. ಈ ಫೆರ್ರಿ ಹಡಗು 1,800 ಪ್ರಯಾಣಿಕರ ಜೊತೆಗೆ 380 ಕಾರು ಹಾಗೂ 120 ಟ್ರಕ್‌ಗಳನ್ನು ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

23 ಮೆಗಾವ್ಯಾಟ್'ನ ಹೈಡ್ರೋಜನ್ ಸೆಲ್ ಈ ಫೆರ್ರಿ ಹಡಗಿನ ಎಂಜಿನ್‌ಗೆ ಶಕ್ತಿಯನ್ನು ಒದಗಿಸಲಿದೆ. ಈ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಂಪನಿಯು ಪ್ರತಿ ವರ್ಷ ಕೋಪನ್ ಹೇಗನ್ ಹಾಗೂ ಓಸ್ಲೋ ನಡುವೆ ಚಲಿಸುವ 13,000 ಕಾರುಗಳಲ್ಲಿ ಬಳಕೆಯಾಗುವ ಇಂಧನವನ್ನು ಉಳಿಸುತ್ತದೆ ಎಂದು ಹೇಳಲಾಗಿದೆ.

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಈ ಫೆರ್ರಿ ಹಡಗಿನ ಮೂಲಕ ಪ್ರತಿವರ್ಷ 64,000 ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಎಲೆಕ್ಟ್ರಿಕ್ ಕಾರುಗಳನ್ನು ಬಳಸಿದ ಮೊದಲ ದೇಶಗಳಲ್ಲಿ ನಾರ್ವೆ ಹಾಗೂ ಡೆನ್ಮಾರ್ಕ್ ದೇಶಗಳು ಸಹ ಸೇರಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಹಲವು ಯುರೋಪಿಯನ್ ರಾಷ್ಟ್ರಗಳು 2030ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಖರೀದಿಸುವ ಹಾಗೂ ಮಾರಾಟ ಮಾಡುವ ಕಾನೂನನ್ನು ರೂಪಿಸಿವೆ.ಭಾರತದಲ್ಲಿಯೂ ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭವಾಗಿದೆ.

ಸಾವಿರಾರು ಪ್ರಯಾಣಿಕರ ಜೊತೆಗೆ ನೂರಾರು ಕಾರು ಹಾಗೂ ಟ್ರಕ್‌ಗಳನ್ನು ಕೊಂಡೊಯ್ಯಬಲ್ಲದು ಈ ಫೆರ್ರಿ

ಇತ್ತೀಚೆಗಷ್ಟೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಪುಣೆಯಲ್ಲಿ ಹೈಡ್ರೋಜನ್ ಫ್ಯೂಯಲ್ ಸೆಲ್ ಬಳಸಿ ಕಾರನ್ನು ಯಶಸ್ವಿಯಾಗಿ ಚಾಲನೆ ಮಾಡಿದೆ. ಈ ಕಾರು ಹೈಡ್ರೋಜನ್ ಹಾಗೂ ಆಮ್ಲಜನಕದ ಸಹಾಯದಿಂದ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ.

Most Read Articles

Kannada
English summary
Denmark and Norway countries to develop giant ferry ship powered by hydrogen fuel cell. Read in Kannada.
Story first published: Thursday, December 10, 2020, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X