ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಭಾರತದಲ್ಲಿ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಲ್ಲಿ ಕೆಂಪು ದೀಪ ಹಾಗೂ ಸೈರನ್‌ಗಳ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೂ ಕೆಲವರು ಇನ್ನೂ ತಮ್ಮ ಅಧಿಕೃತ ವಾಹನಗಳಲ್ಲಿ ಕೆಂಪು ದೀಪಗಳನ್ನು ಬಳಸುತ್ತಿದ್ದಾರೆ.

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಈ ಜನರಲ್ಲಿ ಕೆಲವರು ಪ್ರಭಾವಿಗಳಾದ ಕಾರಣಕ್ಕೆ ಪೊಲೀಸರು ಅವರತ್ತ ಗಮನ ಹರಿಸುವುದಿಲ್ಲ. ಇತ್ತೀಚೆಗೆ ಮಹಾರಾಷ್ಟ್ರದ ಹಿಂಗೋಲಿಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಖಾಸಗಿ ವಾಹನದ ಮೇಲೆ ಕೆಂಪು ದೀಪವನ್ನು ಹೊಂದಿದ್ದ ವ್ಯಕ್ತಿಯನ್ನು ತಡೆದರು.

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ನಂತರ ಆ ಕಾರು ಡೆಪ್ಯೂಟಿ ಕಲೆಕ್ಟರ್‌ರವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಡೆಪ್ಯೂಟಿ ಕಲೆಕ್ಟರ್‌ ತಮ್ಮ ಮಹೀಂದ್ರಾ ಎಕ್ಸ್‌ಯುವಿ 300 ಕಾರಿನಲ್ಲಿ ಸಂಚರಿಸುತ್ತಿದ್ದರು. ಸಾಯಿನಾಥ್ ಅನ್ಮೋಡ್ ಜೂನ್ 13ರಂದು ಕಾರ್ಯ ನಿರ್ವಹಿಸುತ್ತಿದ್ದಾಗ, ಕಾರಿನ ಮೇಲೆ ಕೆಂಪು ದೀಪವಿದ್ದ ಕಾರಣಕ್ಕೆ ಡೆಪ್ಯೂಟಿ ಕಲೆಕ್ಟರ್‌ ಕಾರ್ ಅನ್ನು ತಡೆದು ನಿಲ್ಲಿಸಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಇಂದಿರಾ ಚೌಕ್‌ನಲ್ಲಿ ಕಾರನ್ನು ನಿಲ್ಲಿಸಿದ ಅವರು ಕಾರಿನಲ್ಲಿದ್ದವರಿಗೆ ಖಾಸಗಿ ಕಾರಿನಲ್ಲಿ ಕೆಂಪು ದೀಪವನ್ನು ಬಳಸುವುದು ತಪ್ಪು ಎಂದು ಹೇಳಿದ್ದಾರೆ. ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ತಾನು ಡೆಪ್ಯೂಟಿ ಕಲೆಕ್ಟರ್, ತನಗೆ ಕಾನೂನು ಕಲಿಸುವ ಅವಶ್ಯಕತೆಯಿಲ್ಲವೆಂದು ಹೇಳಿದ್ದಾರೆ.

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಪೊಲೀಸರು ಕಾರನ್ನು ವಶಪಡಿಸಿಕೊಂಡು ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಆ ವ್ಯಕ್ತಿ ಹಿಂಗೋಲಿಯ ಡೆಪ್ಯೂಟಿ ಕಲೆಕ್ಟರ್ ಚಂದ್ರಕಾಂತ್ ಸೂರ್ಯವಂಶಿ ಎಂದು ತಿಳಿದು ಬಂದಿದೆ. ಪೊಲೀಸ್ ಠಾಣೆಯಲ್ಲಿಯೂ ಡೆಪ್ಯೂಟಿ ಕಲೆಕ್ಟರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರವರಿಗೆ ಅವರ ಮೇಲಾಧಿಕಾರಿಯ ಮುಂದೆಯೇ ದರ್ಪ ತೋರಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಹಿರಿಯ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿಗೆ ದಂಡ ಪಾವತಿಸುವಂತೆ ಹೇಳಿದ್ದಾರೆ. ಖಾಸಗಿ ಕಾರಿನಲ್ಲಿ ಕೆಂಪು ದೀಪದ ಬಳಕೆ ಹಾಗೂ ಮೇಲಾಧಿಕಾರಿಗಳ ಮುಂದೆ ಪೊಲೀಸ್ ಅಧಿಕಾರಿಯನ್ನು ನಿಂದಿಸಿರುವ ಡೆಪ್ಯೂಟಿ ಕಲೆಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ.

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಸಾಯಿನಾಥ್ ಅನ್ಮೋಡ್‌ರವರಿಗೆ ಮಹಾರಾಷ್ಟ್ರದಲ್ಲಿರುವ ಸುಮಾರು 2 ಲಕ್ಷಕ್ಕೂ ಹೆಚ್ಚು ಪೊಲೀಸರು ಬೆಂಬಲ ಸೂಚಿಸಿದ್ದಾರೆ. ವಿನಾ ಕಾರಣ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಡೆಪ್ಯೂಟಿ ಕಲೆಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತನ್ನ ತಪ್ಪಿಗೆ ಪೊಲೀಸರ ಮೇಲೆಯೇ ದರ್ಪ ತೋರಿದ ಡೆಪ್ಯೂಟಿ ಕಲೆಕ್ಟರ್

ಹಿಂಗೋಲಿ ಎಸ್‌ಪಿ ಯೋಗೇಶ್ ಕುಮಾರ್‌ರವರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಆರ್‌ಟಿಒ, ಡೆಪ್ಯೂಟಿ ಕಲೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆಗಳಿವೆ.

Most Read Articles

Kannada
English summary
Deputy Collector abuses police after stopped for using beacon illegally. Read in Kannada.
Story first published: Friday, June 26, 2020, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X