ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ರಸ್ತೆ ಸುರಕ್ಷತೆಯ ವಿಷಯದಲ್ಲಿ ಭಾರತವು ಸಾಕಷ್ಟು ಹಿಂದೆ ಉಳಿದಿದೆ. ಪ್ರತಿ ವರ್ಷ 1.50 ಲಕ್ಷ ಜನರು ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಅದು ನಿಜವೂ ಹೌದು.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ಹೆಚ್ಚಿನ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ. ಸೆಲ್ ಫೋನ್‌ನಲ್ಲಿ ಮಾತನಾಡುವುದು, ಸಿಗ್ನಲ್ ಜಂಪ್ ಮಾಡುವುದು, ಕುಡಿದು ವಾಹನ ಚಾಲನೆ ಮಾಡುವುದು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವುದು, ಸೀಟ್ ಬೆಲ್ಟ್ ಇಲ್ಲದೆ ಪ್ರಯಾಣಿಸುವುದು ಸೇರಿದಂತೆ ಹಲವಾರು ರೀತಿಯ ಉಲ್ಲಂಘನೆಗಳನ್ನು ಮಾಡುತ್ತಲೇ ಇರುತ್ತಾರೆ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಕೆಲವು ತಿಂಗಳ ಹಿಂದೆ ಸಂಚಾರ ಉಲ್ಲಂಘನೆಗಾಗಿ ಇರುವ ದಂಡದ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತು. ಆದರೂ ಸಂಚಾರಿ ನಿಯಮಗಳ ಉಲ್ಲಂಘನೆಯ ಪ್ರಮಾಣ ಕಡಿಮೆಯಾಗಿಲ್ಲ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ವಾಹನ ಸವಾರರನ್ನು ಮಾತ್ರ ದೂಷಿಸಿದರೆ ಸಾಲದು. ಇಲ್ಲಿರುವ ಕೆಟ್ಟ ರಸ್ತೆಗಳು ಸಹ ಅಪಘಾತಗಳಿಗೆ ಕಾರಣವಾಗಿವೆ. 2018ರ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿನ ರಸ್ತೆ ಅಪಘಾತಗಳಿಂದಾಗಿ ಪ್ರತಿದಿನ ಸರಾಸರಿ 6 ಜನರು ಸಾವನ್ನಪ್ಪುತ್ತಿದ್ದಾರೆ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

2019ರ ಅಂಕಿ ಅಂಶಗಳು ಇನ್ನೂ ಬಿಡುಗಡೆಯಾಗಿಲ್ಲ. ಭಾರತದಲ್ಲಿರುವ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರದಿಂದಾಗಿ ರಸ್ತೆಗಳು ಹದಗೆಡುತ್ತಿವೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ಇದರಿಂದಾಗಿ ಕಳಪೆ ರಸ್ತೆಗಳು ಹೆಚ್ಚಾಗುತ್ತಿವೆ. ಕೆಲವು ರಸ್ತೆಗಳು ನಿರ್ಮಿಸಿದ ತಕ್ಷಣವೇ ಹಾಳಾಗುತ್ತಿವೆ. ಇನ್ನೂ ಕೆಲವು ರಸ್ತೆಗಳು ಮಳೆಗಾಲಕ್ಕೂ ಮುನ್ನವೇ ಹಾಳಾಗುತ್ತಿವೆ. ಈ ಕಾರಣಕ್ಕೆ ಹದಗೆಟ್ಟ ರಸ್ತೆಗಳು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ಈ ಹಿನ್ನೆಲೆಯಲ್ಲಿ, ಕಳಪೆ ರಸ್ತೆಗಳ ಬಗ್ಗೆ ಸಾರ್ವಜನಿಕರಿಗೆ ದೂರು ನೀಡಲು ಅನುಕೂಲವಾಗುವಂತೆ ಮೊಬೈಲ್ ಅಪ್ಲಿಕೇಶನ್ ಅಥವಾ ಪೋರ್ಟಲ್ ಅಭಿವೃದ್ಧಿಪಡಿಸಲು ಸಂಸದೀಯ ಸಮಿತಿಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ಹದಗೆಟ್ಟ ರಸ್ತೆಗಳನ್ನು ಸರಿಯಾದ ಸಮಯಕ್ಕೆ ಸರಿಪಡಿಸುವ ಕಾರ್ಯವಿಧಾನಗಳನ್ನು ಜಾರಿಗೆ ತರಲು ಸಹ ಶಿಫಾರಸು ಮಾಡಲಾಗಿದೆ. ಈ ಹಿಂದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸ್ಥಾಯಿ ಸಮಿತಿಯು ಕೆಟ್ಟ ರಸ್ತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ಸ್ಥಾಯಿ ಸಮಿತಿಯು ದೇಶದ ವಿವಿಧ ಭಾಗಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಕಳಪೆ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸ್ಥಾಯಿ ಸಮಿತಿಯು ದೇಶದ ರಸ್ತೆ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಲು ಶಿಫಾರಸು ಮಾಡಿದೆ.

ಕಳಪೆ ರಸ್ತೆಗಳ ಬಗ್ಗೆ ದೂರು ನೀಡಲು ಬರಲಿದೆ ಮೊಬೈಲ್ ಆಪ್

ನಿರ್ಮಾಣ ಹಂತದಲ್ಲಿರುವ ರಸ್ತೆಗಳನ್ನು ಹಾಗೂ ನಿರ್ವಹಣೆಯಲ್ಲಿರುವ ರಸ್ತೆಗಳನ್ನು ಪರಿಶೀಲಿಸಲು, ಗುಣಮಟ್ಟದ ತಪಾಸಣೆ ನಡೆಸಲು ಹಾಗೂ ರಸ್ತೆ ನಿರ್ಮಾಣವು ಪೂರ್ಣಗೊಂಡ ನಂತರದ ಗುಣಮಟ್ಟದ ತಪಾಸಣೆ ನಡೆಸಲು ಸಾಕಷ್ಟು ಹಣವನ್ನು ವಿನಿಯೋಗಿಸುವಂತೆ ಶಿಫಾರಸು ಮಾಡಲಾಗಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Mobile app to complain about potholes. Read in Kannada.
Story first published: Thursday, March 19, 2020, 13:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more