ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜೊತೆಗೆ ಕಾರುಗಳ ಬಗೆಯೂ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ಹಲವಾರು ವಾಹನಗಳಿವೆ. ತಮ್ಮ ಬಳಿ ಇರುವ ವಾಹನಗಳಿಗಾಗಿಯೇ ಅವರು ತಮ್ಮ ಮನೆಯಲ್ಲಿ ದೊಡ್ಡ ಪಾರ್ಕಿಂಗ್ ಪ್ರದೇಶವನ್ನು ನಿರ್ಮಿಸಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಈ ವಾಹನಗಳಲ್ಲಿ ಹಲವು ದುಬಾರಿ ಬೆಲೆಯ ಹಾಗೂ ಅಪರೂಪದ ವಾಹನಗಳು ಸೇರಿವೆ. ಅವರು ವಿಂಟೇಜ್ ವಾಹನ ಎಂದು ಕರೆಯಲಾಗುವ ಸಾಕಷ್ಟು ಹಳೆಯ ವಾಹನಗಳನ್ನು ಹೊಂದಿದ್ದಾರೆ. ಅವರ ಬಳಿಯಿರುವ ಕಾರು ಹಾಗೂ ಬೈಕುಗಳು ಅವರ ವಾಹನ ಪ್ರೀತಿಗೆ ಸಾಕ್ಷಿಯಾಗಿವೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಮಹೇಂದ್ರ ಸಿಂಗ್ ಧೋನಿರವರು ಸಾಕ್ಷಿರವರನ್ನು ಮದುವೆಯಾಗಿ ನಿನ್ನೆಗೆ 11 ವರ್ಷವಾಗಿದೆ. ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಾಕ್ಷಿರವರು ಸುಂದರವಾದ ವಿಂಟೇಜ್ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಈ ಬಗ್ಗೆ ಸ್ವತಃ ಸಾಕ್ಷಿರವರೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಾರ್ಷಿಕೋತ್ಸವ ದಿನದ ಉಡುಗೊರೆಗೆ ಧನ್ಯವಾದಗಳು ಎಂದು ಅವರು ಇನ್ಸ್ಟಾಗ್ರಾಮ್'ನಲ್ಲಿ ಕಾರಿನ ಫೋಟೋವನ್ನು ಶೇರ್ ಮಾಡಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಆದರೆ ಈ ಸುಂದರವಾದ ಕಾರನ್ನು ಅವರಿಗೆ ಯಾರು ಉಡುಗೊರೆಯಾಗಿ ನೀಡಿದರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಧೋನಿರವರು ವಿಂಟೇಜ್ ಕಾರುಗಳ ಪ್ರೇಮಿಯಾಗಿರುವುದರಿಂದ ಅವರೇ ಈ ವಿಂಟೇಜ್ ಕಾರನ್ನು ಸಾಕ್ಷಿರವರಿಗೆ ಉಡುಗೊರೆಯಾಗಿ ನೀಡಿರುವ ಸಾಧ್ಯತೆಗಳಿವೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಸಾಕ್ಷಿರವರು ಉಡುಗೊರೆಯಾಗಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರ್ ಅನ್ನು ಪಡೆದಿದ್ದಾರೆ. ಈ ಕಾರ್ ಅನ್ನು ಭಾರತದಲ್ಲಿ ಹಲವರು ಬಳಸುತ್ತಿದ್ದಾರೆ. ವಾಹನಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಜನರು ಈ ಕಾರನ್ನು ಬಳಸುತ್ತಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಧೋನಿರವರು ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಧೋನಿರವರು ವಿಂಟೇಜ್ ಕಾರುಗಳನ್ನು ಮಾತ್ರವಲ್ಲದೇ ಹಲವು ಅಪರೂಪದ ಬೈಕ್'ಗಳನ್ನು ಸಹ ಹೊಂದಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಅವುಗಳಲ್ಲಿ ಯಮಹಾ ಆರ್‌ಡಿ 350, ಆರ್‌ಎಕ್ಸ್ 100, ನಿಂಜಾ ಹೆಚ್ 2 ನಂತಹ ಅಪರೂಪದ ಬೈಕುಗಳು ಸೇರಿವೆ. ಇವುಗಳನ್ನು ನಿಲುಗಡೆ ಮಾಡುವುದಕ್ಕಾಗಿಯೇ ಅವರು ದೊಡ್ಡ ಪಾರ್ಕಿಂಗ್ ಪ್ರದೇಶವನ್ನು ನಿರ್ಮಿಸಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕಾಗಿ ವಿಂಟೇಜ್ ಕಾರ್ ಅನ್ನು ಉಡುಗೊರೆಯಾಗಿ ಪಡೆದ ಧೋನಿ ಪತ್ನಿ

ಮಹೇಂದ್ರ ಸಿಂಗ್ ಧೋನಿ ಹಾರ್ಲೆ ಡೇವಿಡ್ಸನ್ ನಂತಹ ವಿಂಟೇಜ್ ಬೈಕ್, ಅಪರೂಪದ ನಿಸ್ಸಾನ್ 1 ಟನ್ ಟ್ರಕ್ ಹಾಗೂ ರೋಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋ ಸರಣಿಯಂತಹ ಹಲವಾರು ಸಾಂಪ್ರದಾಯಿಕ ಕಾರುಗಳನ್ನು ಸಹ ಹೊಂದಿದ್ದಾರೆ.

Most Read Articles

Kannada
English summary
Dhoni's wife gets vintage car as gift on wedding anniversary. Read in Kannada.
Story first published: Monday, July 5, 2021, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X