ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ವಾಹನಗಳ ಬಗ್ಗೆ ಆಸಕ್ತಿ ಹೊಂದಿರುವವರು ಸಿಕೆಡಿ ಹಾಗೂ ಸಿಬಿಯುಗಳ ಬಗ್ಗೆ ಕೇಳಿಯೇ ಇರುತ್ತಾರೆ. ಭಾರತದಲ್ಲಿರುವ ಅನೇಕ ಕಾರು ಹಾಗೂ ಬೈಕ್‌ಗಳನ್ನು ಸಿಕೆಡಿ ಹಾಗೂ ಸಿಬಿಯು ಯೂನಿಟ್'ಗಳಾಗಿ ಮಾರಾಟ ಮಾಡಲಾಗುತ್ತದೆ.

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಸಿಕೆಡಿ ಯೂನಿಟ್ ಎಂದರೆ ಏನು, ಸಿಬಿಯು ಯೂನಿಟ್ ಎಂದರೆ ಏನು. ಸಿಕೆಡಿ ಹಾಗೂ ಸಿಬಿಯು ಯೂನಿಟ್'ಗಳ ನಡುವಿನ ವ್ಯತ್ಯಾಸಗಳೇನು ಎಂಬುದರ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಸಂಪೂರ್ಣ ನಿರ್ಮಿತ ಘಟಕ ಅಥವಾ ಕಂಪ್ಲೀಟ್ ಬಿಲ್ಟ್ ಯೂನಿಟ್ (ಸಿಬಿಯು) ಎಂದರೇನು?

ಒಂದು ಕಾರನ್ನೋ ಅಥವಾ ಬೈಕನ್ನೋ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯೇ ಸಿಬಿಯು. ಈ ವಾಹನಗಳನ್ನು ಪೂರ್ತಿಯಾಗಿ ಆಮದು ಮಾಡಿಕೊಳ್ಳಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಈ ವಾಹನಗಳನ್ನು ಯಾವ ದೇಶವು ಆಮದು ಮಾಡಿಕೊಳ್ಳುತ್ತದೆಯೋ ಆ ದೇಶವು ವಾಹನಗಳನ್ನು ಮಾರಾಟ ಮಾಡುವ ಮೊದಲು ಆಮದು ಮಾಡಿಕೊಂಡ ವಾಹನಗಳನ್ನು ಜೋಡಿಸುವ ಅಗತ್ಯವಿಲ್ಲ.

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಭಾರತದಲ್ಲಿ ಅನೇಕ ಐಷಾರಾಮಿ ಕಾರುಗಳನ್ನು ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ಸಿಬಿಯು ರೂಪದಲ್ಲಿ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತದೆ.ಹೀಗೆ ಆಮದು ಮಾಡಿಕೊಂಡ ವಾಹನಗಳನ್ನು ಖರೀದಿಸಲು ಅಬಕಾರಿ ತೆರಿಗೆ ಸೇರಿದಂತೆ ಹಲವಾರು ರೀತಿಯ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಮೆಕ್ಲಾರೆನ್, ಫೆರಾರಿ ಸೇರಿದಂತೆ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಭಾರತದಲ್ಲಿ ಸಿಬಿಯು ರೂಪದಲ್ಲಿ ಮಾರಾಟ ಮಾಡುತ್ತಿವೆ.

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ಎಂದರೇನು?

ಸಿಕೆಡಿ ಯೂನಿಟ್ ಎಂದರೆ ಕಾರು ಅಥವಾ ಬೈಕುಗಳ ವಿವಿಧ ಬಿಡಿಭಾಗಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ರಫ್ತು ಮಾಡಲಾಗುತ್ತದೆ. ಅಂತಹ ವಾಹನಗಳನ್ನು ಮಾರಾಟಕ್ಕೆ ಮೊದಲು ಆಮದು ಮಾಡಿಕೊಂಡ ದೇಶದಲ್ಲಿರುವ ಉತ್ಪಾದನಾ ಘಟಕಕ್ಕೆ ಕಳುಹಿಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಈ ಘಟಕಗಳಲ್ಲಿ ವಾಹನಗಳ ಎಲ್ಲಾ ಭಾಗಗಳನ್ನು ಒಟ್ಟುಗೂಡಿಸಿ ವಾಹನವನ್ನು ಸಂಪೂರ್ಣವಾಗಿ ಜೋಡಿಸಲಾಗುತ್ತದೆ. ಅಂತಹ ವಾಹನಗಳು ಆಮದು ಮಾಡಿಕೊಂಡ ದೇಶದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತವೆ. ಜೊತೆಗೆ ಅವುಗಳನ್ನು ಜೋಡಿಸಲು ಯಂತ್ರೋಪಕರಣ ಹಾಗೂ ಮಾನವಶಕ್ತಿಯ ಅಗತ್ಯವಿರುತ್ತದೆ.

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಭಾರತದಲ್ಲಿ ರೆನಾಲ್ಟ್ ಫ್ಲೂಯೆನ್ಸ್, ಜಾಗ್ವಾರ್ ಎಕ್ಸ್‌ಇ, ಎಕ್ಸ್‌ಎಫ್, ಎಕ್ಸ್‌ಜೆ, ಲ್ಯಾಂಡ್ ರೋವರ್ ಇವೊಕ್, ಡಿಸ್ಕವರಿ ಸ್ಪೋರ್ಟ್ ಹಾಗೂ ಇತರ ಕೆಲವು ಕಾರುಗಳನ್ನು ಸಿಕೆಡಿ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಸಿಕೆಡಿ ಕಾರುಗಳು ಸಿಬಿಯು ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಸಿಬಿಯು - ಸಿಕೆಡಿ ನಡುವಿನ ವ್ಯತ್ಯಾಸವೇನು?

ಸಿಬಿಯು - ಸಿಕೆಡಿಗಳ ನಡುವಿನ ವ್ಯತ್ಯಾಸವು ಸರಳವಾಗಿದೆ. ಸಿಬಿಯು ಕಾರು ಅಥವಾ ಬೈಕುಗಳನ್ನು ಒಂದೇ ಕಡೆ ಉತ್ಪಾದಿಸಿ ನಂತರ ಅವುಗಳನ್ನು ಬೇರೆ ದೇಶಕ್ಕೆ ರಫ್ತು ಮಾಡಲಾಗುತ್ತದೆ.

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಸಿಕೆಡಿ ಕಾರು ಅಥವಾ ಬೈಕುಗಳ ಬಿಡಿಭಾಗಗಳನ್ನು ಬೇರೆ ದೇಶಕ್ಕೆ ಆಮದು ಮಾಡಲಾಗುತ್ತದೆ. ನಂತರ ಆ ದೇಶದಲ್ಲಿರುವ ಉತ್ಪಾದನಾ ಘಟಕದಲ್ಲಿ ವಾಹನಗಳ ಎಲ್ಲಾ ಭಾಗಗಳನ್ನು ಒಟ್ಟುಗೂಡಿಸಿ ನಂತರ ಮಾರಾಟ ಮಾಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಿಬಿಯು ಹಾಗೂ ಸಿಕೆಡಿ ವಾಹನಗಳ ನಡುವಿನ ವ್ಯತ್ಯಾಸಗಳಿವು

ಭಾರತದಲ್ಲಿ ಸಿಬಿಯು ಹಾಗೂ ಸಿಕೆಡಿ ವಾಹನಗಳು

ಭಾರತದಲ್ಲಿ ಸದ್ಯಕ್ಕೆ ವಿದೇಶದಿಂದ ಬರುವ ಸಿಬಿಯು ವಾಹನಗಳ ಮೇಲಿನ ಆಮದು ಸುಂಕ 110%ನಷ್ಟಿದ್ದರೆ, ಸಿಕೆಡಿ ವಾಹನಗಳ ಮೇಲಿನ ಆಮದು ಸುಂಕವು 60%ವರೆಗೆ ಇದೆ. ಒಂದೇ ವ್ಯತ್ಯಾಸವೆಂದರೆ ಸಿಬಿಯು ವಾಹನಗಳು ಸಿಕೆಡಿ ವಾಹನಗಳಂತೆ ಉದ್ಯೋಗವನ್ನು ಸೃಷ್ಟಿಸುವುದಿಲ್ಲ.

Most Read Articles

Kannada
English summary
Difference between completely built unit and completely knocked down unit. Read in Kannada.
Story first published: Thursday, December 24, 2020, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X