ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಕಾರಿನಲ್ಲಿ ಬಹಳ ದೂರ ಪ್ರಯಾಣಿಸುವಾಗ ಆರಾಮದಾಯಕ ಸವಾರಿಯನ್ನು ನೀಡುವಲ್ಲಿ ಕಾರುಗಳಲ್ಲಿರುವ ಸೀಟುಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಕಾರು ಖರೀದಿಸುವವರಿಗೆ ಲೆದರ್ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕೋ ಅಥವಾ ಫ್ಯಾಬ್ರಿಕ್ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಗೊಂದಲ ಮೂಡುವುದು ಸಹಜ.

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಲೆದರ್ ಸೀಟುಗಳಿರಲಿ ಅಥವಾ ಫ್ಯಾಬ್ರಿಕ್ ಸೀಟುಗಳಿರಲಿ ಎರಡರಲ್ಲೂ ಕೆಲವು ಅನುಕೂಲಗಳು, ಹಾಗೆಯೇ ಕೆಲವು ಅನಾನುಕೂಲಗಳು ಇವೆ. ಅವು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದರಿಂದಾಗಿ ಕಾರು ಖರೀದಿ ವೇಳೆ ಈ ಮಾಹಿತಿಯು ನಿಮಗೆ ನೆರವು ನೀಡಬಹುದು.

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಲೆದರ್ ಸೀಟುಗಳು:

ಲೆದರ್ ಸೀಟುಗಳನ್ನು ಐಷಾರಾಮಿ ಫೀಚರ್ ಆಗಿ ನೋಡಲಾಗುತ್ತದೆ. ಲೆದರ್ ಸೀಟುಗಳನ್ನು ಸಾಮಾನ್ಯವಾಗಿ ದುಬಾರಿ ಕಾರುಗಳಲ್ಲಿ ನೀಡಲಾಗುತ್ತದೆ. ಆದರೆ ಲೆದರ್ ಸೀಟುಗಳಿಗೆ ಖರ್ಚು ಮಾಡುವ ಹಣ ವ್ಯರ್ಥ ಎಂಬುದು ಇದರ ಅರ್ಥವಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ವಾಸ್ತವವಾಗಿ ಲೆದರ್ ಸೀಟುಗಳು ಫ್ಯಾಬ್ರಿಕ್ ಸೀಟುಗಳಿಗಿಂತ ಹಲವು ವಿಧಗಳಲ್ಲಿ ಉತ್ತಮವಾಗಿವೆ. ಆಕರ್ಷಕ ನೋಟದ ಕಾರಣಕ್ಕೆ ಅನೇಕ ಜನರು ಲೆದರ್ ಸೀಟುಗಳಿಗೆ ಆದ್ಯತೆ ನೀಡುತ್ತಾರೆ. ಲೆದರ್ ಸೀಟುಗಳು ಆರಾಮದಾಯಕವಾಗಿರುವ ಕಾರಣ ದೂರದ ಪ್ರಯಾಣ ಮಾಡುವವರು ಲೆದರ್ ಸೀಟುಗಳಿಂದ ಹೆಚ್ಚು ಪ್ರಯೋಜನ ಪಡೆಯಬಹುದು.

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಲೆದರ್ ಸೀಟುಗಳನ್ನು ಸುಲಭವಾಗಿ ಸ್ವಚ್ವಗೊಳಿಸಬಹುದು. ಲೆದರ್ ಸೀಟುಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ. ಜೊತೆಗೆ ಕಾರಿನ ಇಂಟಿರಿಯರ್ ಸೌಂದರ್ಯವನ್ನು ಹೆಚ್ಚಿಸುತ್ತವೆ. ಲೆದರ್ ಸೀಟುಗಳಿಂದ ಕಾರಿನ ಕ್ಯಾಬಿನ್ ಮನಮೋಹಕವಾಗಿ ಕಾಣುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಲೆದರ್ ಸೀಟುಗಳು ಕಾರಿನ ರಿಸೇಲ್ ಬೆಲೆಯನ್ನು ಹೆಚ್ಚಿಸುತ್ತದೆ. ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯಲ್ಲಿ ಕಾರನ್ನು ಮಾರಾಟ ಮಾಡಿದರೆ, ಹೆಚ್ಚಿನ ರಿಸೇಲ್ ಬೆಲೆಯನ್ನು ಪಡೆಯಬಹುದು. ಲೆದರ್ ಸೀಟುಗಳು ಕೆಲವು ನ್ಯೂನತೆಗಳನ್ನು ಹೊಂದಿವೆ.

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಫ್ಯಾಬ್ರಿಕ್ ಸೀಟುಗಳಿಗೆ ಹೋಲಿಸಿದರೆ ಲೆದರ್ ಸೀಟುಗಳು ಹೆಚ್ಚು ದುಬಾರಿಯಾಗಿದೆ ಎಂಬುದು ಪ್ರಮುಖ ನ್ಯೂನತೆಯಾಗಿದೆ. ಲೆದರ್ ಸೀಟುಗಳ ರಿಪೇರಿಗಾಗಿ ಹೆಚ್ಚು ಹಣ ತೆರಬೇಕಾಗುತ್ತದೆ. ಲೆದರ್ ಸೀಟುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾದರೂ ಅವುಗಳ ನಿರ್ವಹಣೆ ಕಷ್ಟ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಫ್ಯಾಬ್ರಿಕ್ ಸೀಟುಗಳು:

ಫ್ಯಾಬ್ರಿಕ್ ಸೀಟುಗಳ ತಯಾರಿ ತುಂಬಾ ಸರಳ. ಲೆದರ್ ಸೀಟುಗಳಿಗೆ ಹೋಲಿಸಿದರೆ, ಫ್ಯಾಬ್ರಿಕ್ ಸೀಟುಗಳ ಬೆಲೆ ಕಡಿಮೆ. ಈ ಕಾರಣಕ್ಕೆ ಬಜೆಟ್ ಕಾರುಗಳಲ್ಲಿ ಫ್ಯಾಬ್ರಿಕ್ ಸೀಟುಗಳನ್ನು ನೀಡಲಾಗುತ್ತದೆ. ಲೆದರ್ ಸೀಟುಗಳಿಗೆ ಹೋಲಿಸಿದರೆ ಫ್ಯಾಬ್ರಿಕ್ ಸೀಟುಗಳ ನಿರ್ವಹಣೆ ಸುಲಭ.

ಲೆದರ್ ಸೀಟ್ ಹಾಗೂ ಫ್ಯಾಬ್ರಿಕ್ ಸೀಟುಗಳಲ್ಲಿ ಯಾವುದು ಬೆಸ್ಟ್?

ಫ್ಯಾಬ್ರಿಕ್ ಸೀಟುಗಳು ಬೇಗನೆ ಕೊಳಕಾಗುತ್ತವೆ ಎಂಬುದು ಫ್ಯಾಬ್ರಿಕ್ ಸೀಟುಗಳ ಪ್ರಮುಖ ಅನಾನುಕೂಲಗಳಲ್ಲಿ ಒಂದಾಗಿದೆ. ಕಾರು ಖರೀದಿದಾರರು ಲೆದರ್ ಸೀಟುಗಳಿಗೆ ಹೆಚ್ಚು ಆದ್ಯತೆ ನೀಡುವ ಕಾರಣ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯಲ್ಲಿ ಫ್ಯಾಬ್ರಿಕ್ ಸೀಟುಗಳನ್ನು ಹೊಂದಿರುವ ಕಾರುಗಳ ರಿಸೇಲ್ ಬೆಲೆ ಕಡಿಮೆ ಇರುತ್ತದೆ.

Most Read Articles

Kannada
English summary
Difference between fabric seats and leather seats. Read in Kannada.
Story first published: Monday, November 2, 2020, 9:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X