ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ನಮ್ಮ ದೇಶದಲ್ಲಿ ವಾಹನಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಹಲವಾರು ಜನರಿದ್ದಾರೆ. ತಮ್ಮ ವಾಹನಗಳಿಗೆ ಒಂದೇ ಪೆಟ್ರೋಲ್ ಬಂಕ್'ನಲ್ಲಿಯೇ ಪೆಟ್ರೋಲ್ ಹಾಕಿಸುವ, ಒಬ್ಬನೇ ಮೆಕಾನಿಕ್ ಬಳಿ ವಾಹನ ನೀಡುವ ಜನರಿಗೇನೂ ಕೊರತೆಯಿಲ್ಲ.

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ವಾಹನಗಳು ಚಲಿಸುವ ಅವಶ್ಯಕವಾಗಿರುವ ಏರ್ ಹಾಕಿಸುವುದರಲ್ಲಿಯೂ ಕೆಲವರು ತೀರಾ ಜಾಗೃತಿ ವಹಿಸುತ್ತಾರೆ. ಕೆಲವರು ಮಾಮೂಲಿ ಏರ್ (ಕಂಪ್ರೆಸ್ಡ್ ಏರ್) ಹಾಕಿಸಿದರೆ, ಇನ್ನೂ ಕೆಲವರು ನೈಟ್ರೋಜನ್ ಮಾತ್ರ ಹಾಕಿಸುತ್ತಾರೆ. ಕಂಪ್ರೆಸ್ಡ್ ಏರ್ ಹಾಗೋ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ವಾಹನಗಳ ಟಯರ್‌ಗಳಲ್ಲಿ ಸೂಕ್ತವಾದ ಗಾಳಿಯನ್ನು ತುಂಬಿಸುವುದರಿಂದ ಇಂಧನ ವೆಚ್ಚವನ್ನು ನಿಯಂತ್ರಿಸಬಹುದು. ಇದರ ಜೊತೆಗೆ ಅನಗತ್ಯ ಪಂಕ್ಚರ್ ಹಾಗೂ ಅಸಮರ್ಥತೆಯಂತಹ ಸಮಸ್ಯೆಗಳನ್ನು ತಪ್ಪಿಸಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಕಾಲಕಾಲಕ್ಕೆ ಟಯರ್‌ಗಳ ಏರ್ ಅನ್ನು ಸರಿಯಾಗಿ ನಿರ್ವಹಿಸುವುದರಿಂದ ವಾಹನಗಳ ಕಾರ್ಯಕ್ಷಮತೆಯಲ್ಲಿ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಆದರೆ ನೈಟ್ರೋಜನ್ ಏರ್ ವಾಹನ ನಿರ್ವಹಣೆಗೆ ಖಂಡಿತವಾಗಿಯೂ ನೆರವಾಗುತ್ತದೆ ಎಂಬುದು ವಾಹನ ತಜ್ಞರು ಅಭಿಪ್ರಾಯ.

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಒಮ್ಮೆ ವಾಹನಗಳ ಟಯರ್‌ಗಳಲ್ಲಿ ನೈಟ್ರೋಜನ್ ಏರ್ ತುಂಬಿಸಿದರೆ 30 ದಿನಗಳವರೆಗೆ ಪ್ರಯಾಣಿಸಬಹುದು. ಕಂಪ್ರೆಸ್ಡ್ ಏರ್ ತುಂಬಿಸುವುದಾದರೆ 8ರಿಂದ 10 ದಿನಗಳಿಗೆ ಒಮ್ಮೆಯಾದರೂ ಗಾಳಿಯನ್ನು ಪರೀಕ್ಷಿಸುವುದು ಒಳ್ಳೆಯದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಕಂಪ್ರೆಸ್ಡ್ ಏರ್ ಟಯರ್‌ಗಳಿಂದ ಬೇಗನೆ ಹೊರಬರುತ್ತದೆ. ಆದರೆ ನೈಟ್ರೋಜನ್ ಏರ್ ಹೆಚ್ಚು ಬಾಳಿಕೆ ಬರುತ್ತದೆ. ಕಂಪ್ರೆಸ್ಡ್ ಏರ್ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಹಾಗೂ ನೀರನ್ನು ಹೊಂದಿರುತ್ತದೆ.

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಬೇಸಿಗೆಯಲ್ಲಿ ಕಂಪ್ರೆಸ್ಡ್ ಏರ್ ಹೊಂದಿರುವ ಟಯರ್‌ಗಳು ಸ್ಫೋಟವಾಗುವ ಸಾಧ್ಯತೆಗಳಿರುತ್ತವೆ. ಆದರೆ ನೈಟ್ರೋಜನ್ ಏರ್'ಗೆ ಈ ಸಮಸ್ಯೆ ಇರುವುದಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಕಂಪ್ರೆಸ್ಡ್ ಏರ್ ಅನ್ನು ಪೆಟ್ರೋಲ್ ಬಂಕ್'ಗಳಲ್ಲಿ ಉಚಿತವಾಗಿ ತುಂಬಲಾಗುತ್ತದೆ. ಆದರೆ ನೈಟ್ರೋಜನ್ ಏರ್ ತುಂಬಿಸಲು ಪ್ರತಿ ಟಯರಿಗೆ 5ರಿಂದ 10 ರೂಪಾಯಿ ನೀಡಬೇಕಾಗುತ್ತದೆ. ಕಾರಿನಲ್ಲಿರುವ ಎಲ್ಲಾ ಟಯರ್‌ಗಳಿಗೆ ನೈಟ್ರೋಜನ್ ತುಂಬಿಸಬೇಕಾದರೆ ರೂ.40ರಿಂದ ರೂ.50 ಗಳವರೆಗೆ ನೀಡಬೇಕಾಗುತ್ತದೆ.

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ದ್ವಿಚಕ್ರ ವಾಹನಗಳಿಗೆ ರೂ.10 ವರೆಗೆ ವಿಧಿಸಲಾಗುತ್ತದೆ. ಮೊದಲ ಬಾರಿಗೆ ಟಯರ್‌ಗಳಿಗೆ ನೈಟ್ರೋಜನ್ ಏರ್ ತುಂಬಿಸುತ್ತಿದ್ದರೆ ಇದಕ್ಕಿಂತ ಸ್ವಲ್ಪ ಹೆಚ್ಚು ಹಣ ನೀಡಬೇಕಾಗುತ್ತದೆ. ಆದರೆ ಕಂಪ್ರೆಸ್ಡ್ ಏರ್ ತುಂಬಿಸಿಕೊಳ್ಳಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಈ ಕಾರಣಕ್ಕೆ ಹೆಚ್ಚಿನ ಜನರು ನೈಟ್ರೋಜನ್ ಏರ್'ಗೆ ಬದಲು ಕಂಪ್ರೆಸ್ಡ್ ಏರ್'ಗೆ ಆದ್ಯತೆ ನೀಡುತ್ತಾರೆ. ಈ ಕಂಪ್ರೆಸ್ಡ್ ಏರ್'ಗಿಂತ ನೈಟ್ರೋಜನ್ ಏರ್'ನಲ್ಲಿ ಹಲವಾರು ಪ್ರಯೋಜನಗಳಿವೆ.

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ಮುಖ್ಯವಾಗಿ ಆಗಾಗ ನಿರ್ವಹಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ಕಾರಣಕ್ಕೆ ವಾಹನ ಉತ್ಸಾಹಿಗಳು ತಮ್ಮ ವಾಹನಗಳಲ್ಲಿ ಕಂಪ್ರೆಸ್ಡ್ ಏರ್'ಗೆ ಬದಲುನೈಟ್ರೋಜನ್ ಏರ್ ಬಳಸುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಂಪ್ರೆಸ್ಡ್ ಏರ್ ಹಾಗೂ ನೈಟ್ರೋಜನ್ ಏರ್ ನಡುವಿನ ವ್ಯತ್ಯಾಸಗಳಿವು

ನೈಟ್ರೋಜನ್ ಹಾಗೂ ಕಂಪ್ರೆಸ್ಡ್ ಏರ್'ಗಳನ್ನು ಒಟ್ಟಿಗೆ ಬಳಸಬಹುದೇ?

ಎಲ್ಲಾ ಸ್ಥಳಗಳಲ್ಲಿಯೂ ನೈಟ್ರೋಜನ್ ಏರ್ ಲಭ್ಯವಿರುವುದಿಲ್ಲ. ಈ ಸೌಲಭ್ಯವು ಕೆಲವು ನಗರ ಹಾಗೂ ಪ್ರಮುಖ ಪೆಟ್ರೋಲ್ ಬಂಕ್'ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಈ ರೀತಿಯ ಪರಿಸ್ಥಿತಿ ಎದುರಾದಾಗ ನೈಟ್ರೋಜನ್ ಏರ್ ಹೊಂದಿರುವ ಟಯರ್‌ಗಳಲ್ಲಿ ಕಂಪ್ರೆಸ್ಡ್ ಏರ್ ಬಳಸಬಹುದು ಎಂದು ವಾಹನ ತಜ್ಞರು ಹೇಳುತ್ತಾರೆ.

Most Read Articles

Kannada
English summary
Difference between Nitrogen air and compressed air. Read in Kannada.
Story first published: Monday, February 22, 2021, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X