Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನಗಳ ಪವರ್ ಹಾಗೂ ಟಾರ್ಕ್ ನಡುವೆ ಇರುವ ವ್ಯತ್ಯಾಸಗಳಿವು
ಯಾವುದೇ ವಾಹನವನ್ನು ಚಾಲನೆ ಮಾಡಲು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಚಾಲನೆ ಮಾಡಲು ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸಲಾಗುತ್ತದೆ. ಈ ವಾಹನಗಳನ್ನು ಮಾರಾಟ ಮಾಡುವಾಗ ಎಂಜಿನ್ ಉತ್ಪಾದಿಸುವ ಪವರ್ ಹಾಗೂ ಟಾರ್ಕ್ ಗಳ ಬಗ್ಗೆ ನಮೂದಿಸಲಾಗುತ್ತದೆ.

ಯಾವುದೇ ಎಂಜಿನ್‌ನ ಪವರ್ ಹಾಗೂ ಟಾರ್ಕ್ ನಡುವಿನ ವ್ಯತ್ಯಾಸವೇನು, ವಾಹನವನ್ನು ಚಾಲನೆ ಮಾಡಲು ಈ ಎರಡರಲ್ಲಿ ಯಾವುದು ಹೆಚ್ಚು ಮುಖ್ಯ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪವರ್ ಹಾಗೂ ಟಾರ್ಕ್ ನಡುವಿನ ವ್ಯತ್ಯಾಸವೇನು, ಈ ಎರಡರಲ್ಲಿ ಯಾವುದು ಹೆಚ್ಚು ಮುಖ್ಯ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪವರ್ ಹಾಗೂ ಟಾರ್ಕ್, ವಾಹನಗಳ ಪರ್ಫಾಮೆನ್ಸ್ ಬಗ್ಗೆ ತಿಳಿಯಲು ಬಳಸುವ ಸಾಮಾನ್ಯ ಪದಗಳಾಗಿವೆ. ಇವೆರಡರ ನಡುವಿನ ವ್ಯತ್ಯಾಸಗಳೇನು ಎಂಬುದು ಕೆಲವೇ ಜನರಿಗಷ್ಟೇ ತಿಳಿದಿದೆ. ಪವರ್ ಹಾಗೂ ಟಾರ್ಕ್ ಕಾರಿನ ಪರ್ಫಾಮೆನ್ಸ್ ಬಗ್ಗೆ ವ್ಯಾಖ್ಯಾನಿಸಲು ಬಳಸುವ ಪ್ರಮುಖ ಪದಗಳಾಗಿವೆ. ಆದರೆ ಇವೆರಡೂ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಇವೆರಡರ ಬಗ್ಗೆ ತಿಳಿದುಕೊಳ್ಳುವ ಮೊದಲು ಪವರ್ ಬಗ್ಗೆ ತಿಳಿದುಕೊಳ್ಳಬೇಕು. ಯಾವುದೇ ಕಾರ್ಯವನ್ನು ನಿರ್ವಹಿಸುವ ಅಗತ್ಯವಿರುವುದು ಪವರ್ ಅಥವಾ ಎನರ್ಜಿ. ಇದನ್ನು ಹೀಟ್ ಎನರ್ಜಿ ಅಥವಾ ಮೆಕಾನಿಕಲ್ ಎನರ್ಜಿಯಂತೆ ಬಳಸಿಕೊಳ್ಳಬಹುದು ಅಥವಾ ವಸ್ತುವಿನೊಳಗೆ ಪೊಟೆನ್ ಶಿಯಲ್ ಎನರ್ಜಿಯಾಗಿ ಹೀರಿಕೊಳ್ಳಬಹುದು.

ಇನ್ನು ಟಾರ್ಕ್ ಬಗ್ಗೆ ಹೇಳುವುದಾದರೆ, ಟಾರ್ಕ್ ಎನ್ನುವುದು ಎಂಜಿನ್‌ನ ಕ್ರ್ಯಾಂಕ್‌ಶಾಫ್ಟ್‌ನಿಂದ ಉತ್ಪತ್ತಿಯಾಗುವ ತಿರುಗುವ ಶಕ್ತಿ (ರೋಟೆಟಿಂಗ್ ಪವರ್) ಆಗಿದೆ. ಸರಳವಾಗಿ ಹೇಳುವುದಾದರೆ ಟಾರ್ಕ್ ಅನ್ನು ಎಂಜಿನ್‌ನ ಎಳೆಯುವ ಶಕ್ತಿ ಎಂದು ಹೇಳಬಹುದು. ಇದು ವಾಹನಗಳ ಆರಂಭಿಕ ಆಕ್ಸಲರೇಷನ್ ಗೆ ನೆರವಾಗುತ್ತದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಈ ಕಾರಣಕ್ಕೆ ಹೆಚ್ಚಿನ ಪ್ರಮಾಣದ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಎಸ್‌ಯುವಿಗಳಂತಹ ದೊಡ್ಡ ಗಾತ್ರದ ವಾಹನಗಳಲ್ಲಿ ಭಾರೀ ಸಾಮರ್ಥ್ಯದ ಎಂಜಿನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದೇ ವೇಳೆ ಪವರ್ ಅನ್ನು ವಸ್ತುವಿನ ಕೆಲಸ ಮಾಡುವ ದರ ಎಂದು ಹೇಳಲಾಗುತ್ತದೆ.

ವಾಹನಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಪವರ್ ಅನ್ನು ಹಾರ್ಸ್ ಪವರ್ ಅಥವಾ ಬ್ರೇಕ್ ಹಾರ್ಸ್ ಪವರ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಸಾಮರ್ಥ್ಯದ ವಾಹನಗಳು ಹೆಚ್ಚು ಆಕ್ಸಲರೇಷನ್ ಹಾಗೂ ಹೆಚ್ಚಿನ ವೇಗವನ್ನು ಹೊಂದಿರುತ್ತವೆ. ಟಾರ್ಕ್ ಕೆಲಸ ಮಾಡುವ ಸಾಮರ್ಥ್ಯವನ್ನು ಸೂಚಿಸಿದರೆ, ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸ ಪೂರ್ಣಗೊಳ್ಳುವ ದರವನ್ನು ಪವರ್ (ಶಕ್ತಿ) ತೋರಿಸುತ್ತದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಕ್ಸಲರೇಷನ್ ನ ಆರಂಭಿಕ ಹಂತಗಳಲ್ಲಿ ಕಾರು ವೇಗವಾಗಿ ಚಲಿಸುವಂತೆ ಮಾಡುವುದು ಟಾರ್ಕ್ ನ ಕೆಲಸವಾದರೆ, ಪವರ್ ವಾಹನದ ಆಕ್ಸಲರೇಷನ್ ದರವನ್ನು ನಿರ್ಧರಿಸುತ್ತದೆ. ಪವರ್ ಹಾಗೂ ಟಾರ್ಕ್ ಆಧರಿಸಿ ವಾಹನವನ್ನು ಖರೀದಿಸುವಾಗ, ಪವರ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪವರ್ ವಾಹನದ ಒಟ್ಟಾರೆ ಪರ್ಫಾಮೆನ್ಸ್ ಮೇಲೆ ಪರಿಣಾಮ ಬೀರುವುದು ಇದರ ಹಿಂದಿರುವ ಕಾರಣ.