ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಪ್ರತಿಯೊಬ್ಬ ಗ್ರಾಹಕರು ಕಾರು ಖರೀದಿಗೂ ಮುನ್ನ ಆ ಕಾರಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯುತ್ತಾರೆ. ಆ ಕಾರಿನ ಮೈಲೇಜ್, ಅದರಲ್ಲಿರುವ ಫೀಚರ್ ಹಾಗೂ ಮೆಂಟೆನೆನ್ಸ್'ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುತ್ತಾರೆ.

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಜನರು ತಮ್ಮ ಕಾರುಗಳ ಮೆಂಟೆನೆನ್ಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕಾರುಗಳನ್ನು ಕಾಲ ಕಾಲಕ್ಕೆ ಸರ್ವೀಸ್ ಮಾಡಿಸುವುದರಿಂದ ಕಾರಿನ ಬಾಳಿಕೆ ಹೆಚ್ಚುತ್ತದೆ. ಕೆಲವರು ತಮ್ಮ ಕಾರುಗಳ ಮೆಂಟೆನೆನ್ಸ್ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಇನ್ನೂ ಕೆಲವರು ಕಾರುಗಳನ್ನು ಕಾಲಕಾಲಕ್ಕೆ ಸರ್ವೀಸ್ ಸೆಂಟರ್'ಗಳಿಗೆ ಕೊಂಡೊಯ್ಯುತ್ತಾರೆ.

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಕಾಲ ಬದಲಾದಂತೆ ಕಾರ್ ಸರ್ವೀಸ್ ಟೆಕ್ನಾಲಜಿಗಳು ಸಹ ಬದಲಾಗಿವೆ. ಈಗ ಕಾರ್ ಸರ್ವೀಸ್ ಮಾಡಲು ಡಿಟೇಲಿಂಗ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಈಟೆಕ್ನಾಲಜಿಯಿಂದ ಕಾರಿನ ಪ್ರತಿಯೊಂದು ಭಾಗವನ್ನು ಆಳವಾಗಿ ಸ್ವಚ್ಛಗೊಳಿಸಿ, ಶೈನಿಂಗ್ ಬರುವಂತೆ ಮಾಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಈ ಟೆಕ್ನಾಲಜಿಯು ಕಾರು ಸರ್ವೀಸ್'ಗಿಂತ ಉತ್ತಮವಾಗಿದೆ. ಕಾರು ಡಿಟೇಲಿಂಗ್ ಕಾರಿನ ಬಾಳಿಕೆಯನ್ನು ಹೆಚ್ಚಿಸುವುದರ ಜೊತೆಗೆ ಕಾರಿನ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಅನ್ನು ಹೊಳೆಯುವಂತೆ ಮಾಡುತ್ತದೆ. ಕಾರು ಡಿಟೇಲಿಂಗ್ ಎಂದರೆ ಏನು ಅದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಕಾರು ಡಿಟೇಲಿಂಗ್ ಪ್ರಯೋಜನವೇನು?

ಕಾಲ ಕಳೆದಂತೆ ಕಾರಿನ ಪ್ರತಿ ಮೂಲೆಯಲ್ಲೂ ಧೂಳು, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಸೇರಿಕೊಳ್ಳುತ್ತವೆ. ಇವುಗಳು ಸಾಮಾನ್ಯ ಕಾರ್ ಸರ್ವೀಸ್'ನಿಂದ ಸ್ವಚ್ಛವಾಗುವುದಿಲ್ಲ. ಕಾರು ಡಿಟೇಲಿಂಗ್'ನಲ್ಲಿ ಕಾರಿನ ಪ್ರತಿಯೊಂದು ಮೂಲೆಯನ್ನೂ ಸ್ವಚ್ಛಗೊಳಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಕಾರು ಡಿಟೇಲಿಂಗ್ ಬಗ್ಗೆ

ಕಾರು ಡಿಟೇಲಿಂಗ್'ನಲ್ಲಿ ಸುಗಂಧ ದ್ರವ್ಯ ಹಾಗೂ ಸೀಲಾಂಟ್ ಬಳಸಿ ವ್ಯಾಕ್ಸಿಂಗ್, ಶೈನಿಂಗ್ ಸೇರಿದಂತೆ ಹಲವಾರು ಸೇವೆಗಳನ್ನು ಮಾಡಲಾಗುತ್ತದೆ. ಈ ಸೇವೆಗಳು ಸ್ವಲ್ಪ ದುಬಾರಿಯಾಗಿದ್ದು, ಕಾರನ್ನು ಸಂಪೂರ್ಣವಾಗಿ ಸ್ವಚ್ಛವಾಗಿಡುತ್ತವೆ.

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಜಿಮ್‌ಗೆ ಹೋದ ನಂತರ ಕಾರಿನಲ್ಲಿ ಪ್ರಯಾಣಿಸಿದರೆ ಕಾರಿನ ಅಪ್ ಹೊಲೆಸ್ಟರಿಯಲ್ಲಿ ದುರ್ವಾಸನೆ ಬರುವುದನ್ನು ಗಮನಿಸಬಹುದು. ಕಾಲಕಾಲಕ್ಕೆ ಕಾರನ್ನು ಡಿಟೇಲಿಂಗ್ ಮಾಡಿಸುವುದರಿಂದ ಕಾರು ಯಾವಾಗಲೂ ಹೊಳೆಯುವುದರ ಜೊತೆಗೆ ಪರಿಮಳಯುಕ್ತವಾಗಿರುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಮಯಕ್ಕೆ ಸರಿಯಾಗಿ ಕಾರು ಡಿಟೇಲಿಂಗ್ ಮಾಡಿಸುವುದರಿಂದ ಹಳೆಯ ಕಾರು ಸಹ ಹೊಸ ಕಾರಿನಂತೆ ಕಾಣುತ್ತದೆ. ಇದರ ಜೊತೆಗೆ ಒಳ್ಳೆಯ ರಿ ಸೇಲ್ ವ್ಯಾಲ್ಯುವನ್ನು ಸಹ ಪಡೆಯಬಹುದು.

ಕಾರಿನ ಸ್ವಚ್ಛತೆ ಹಾಗೂ ಹೊಳಪು ಹೆಚ್ಚಿಸುವ ಕಾರು ಡಿಟೇಲಿಂಗ್ ಬಗೆಗಿನ ವಿವರಗಳಿವು

ಸಾಮಾನ್ಯ ಸರ್ವೀಸ್ ಮಾಡಲಾದ ಕಾರುಗಳನ್ನು ಹಾಗೂ ಕಾರು ಡಿಟೇಲಿಂಗ್ ಮಾಡಲಾದ ಕಾರುಗಳನ್ನು ಒಟ್ಟಿಗೆ ನಿಲ್ಲಿಸಿದಾಗ, ಡಿಟೇಲಿಂಗ್ ಮಾಡಿಸಲಾದ ಕಾರಿನಲ್ಲಿ ಹೊಳಪು ಹಾಗೂ ಸ್ವಚ್ಛತೆಯನ್ನು ಗುರುತಿಸಬಹುದು.

ಮೂಲ: ಗೋಮೆಕ್ಯಾನಿಕ್

Most Read Articles

Kannada
English summary
Difference between regular car cleaning and car detailing. Read in Kannada.
Story first published: Sunday, April 25, 2021, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X