ಪಟ್ಟು ಬಿಡದೆ ಕಾರು ಕಲಿತ ಕೈಗಳಿಲ್ಲದ ಮಹಿಳೆ! 5 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ಸಿಕ್ತು DL

ಡ್ರೈವಿಂಗ್ ಲೈಸೆನ್ಸ್ ಪಡೆಯಲು 17 ರ ಆಸುಪಾಸಿನಲ್ಲಿರುವ ಎಲ್ಲಾ ಯುವಜನತೆ ಕುತೂಹಲದಿಂದ ಕಾಯುತ್ತಾರೆ. 18 ವರ್ಷ ತುಂಬುತ್ತಿದ್ದಂತೆ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುತ್ತರೆ. ಆದರೆ ಇದೇ ಕುತೂಹಲ ವಿಶೇಷಚೇತನರಿಗೂ ಇರುತ್ತದೆಯದರೂ, ಕೆಲವು ಸವಾಲುಗಳನ್ನು ಎದುರಿಸಬೇಕಾದ್ದರಿಂದ ಅವರಿಗೆ ಅಷ್ಟು ಸುಲಭವಾಗಿ ಚಾಲನಾ ಪರವಾನಿಗಿ ಸಿಗುವುದಿಲ್ಲ.

ಒಮ್ಮೆ ಅರ್ಜಿ ಸಲ್ಲಿಸಿ ಅನೇಕ ಸವಾಲುಗಳನ್ನು ಎದುರಿಸುವ ಹಲವರು ವಿಶೇಷಚೇತನರು ನಮ್ಮ ನಡುವೆಯೂ ವಾಸಿಸುತ್ತಿದ್ದಾರೆ. ಹುಟ್ಟಿದಾಗಿನಿಂದಲೂ ಕೈಗಳಿಲ್ಲದೆ ಸಂಕಷ್ಟದ ಜೀವನವನ್ನು ಎದುರಿಸಿ ಅಂಗವಿಕಲತೆಯನ್ನು ಲೆಕ್ಕಿಸದೇ ಸಾಮಾನ್ಯರಂತೆ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತ ಮಹಿಳೆಯ ಬಗ್ಗೆ ಈ ಲೇಖನದಲ್ಲಿ ಹೇಳಲು ಹೊರಟಿದ್ದಾವೆ. ಬರೋಬ್ಬರಿ ಐದು ವರ್ಷ ಕಠಿಣ ಶ್ರಮದಿಂದ ವಾಹನ ಪರವಾನಿಗಿಯನ್ನು ಈ ಮಹಿಳೆ ದಕ್ಕಿಸಿಕೊಂಡಿದ್ದಾರೆ.

kerala-cm-handed-over-driving-license-to-disabled-woman-after-5-years-of-struggle

ಕೇರಳದ ಮಹಿಳೆಯೊಬ್ಬರು ಯಾವಾಗಲೂ ತಾನೇ ಕಾರು ಓಡಿಸುವ ಕನಸು ಕಾಣುತ್ತಿದ್ದರು. ಕೆರಳ ರಾಜ್ಯ ಸರ್ಕಾರವು ಈಗ ಆ ಕನಸನ್ನು ನನಸಾಗಿಸಲು ಸಹಾಯ ಮಾಡಿದೆ. ಆಕೆ ಈಗ ಕಾರು ಓಡಿಸುವುದು ಮಾತ್ರವಲ್ಲ, ಡ್ರೈವಿಂಗ್ ಲೈಸೆನ್ಸ್ ಕೂಡ ಪಡೆದಿದ್ದಾರೆ. ವಿಷಯಕ್ಕೆ ಬಂದರೆ 32 ವರ್ಷದ ಜಿಲುಮೋಲ್ ಎಂ.ಥಾಮಸ್ ಮೂಲತಃ ಇಡುಕ್ಕಿ ಜಿಲ್ಲೆಯವರು, ಪ್ರಸ್ತುತ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಜಿಲುಮೋಲ್ ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಸ್ವತಃ ಕಲಾವಿದರು ಕೂಡ ಆಗಿದ್ದಾರೆ. ಎರಡೂ ಕೈಗಳಿಲ್ಲದೆ ಹುಟ್ಟಿದ್ದರು, ಒಂದು ವಯಸ್ಸಿಗೆ ಬಂದ ನಂತರ ತನ್ನ ಕಾಲುಗಳಿಂದ ಕಾರನ್ನು ಓಡಿಸುವ ಕನಸು ಕಾಣುತ್ತಿದ್ದರು. ಆದರೆ ಕಾನೂನು ನಿಯಮಗಳು ಆಕೆಯನ್ನು ಅನುಮತಿಸಲಿಲ್ಲ. ಆಕೆ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್‌ಗೆ ವಿನಂತಿಸಿದಾಗ, ವಿನಂತಿಯನ್ನು ನಿರಾಕರಿಸಲಾಯಿತು.

kerala-cm-handed-over-driving-license-to-disabled-woman-after-5-years-of-struggle

ಜಿಲುಮೋಲ್ ಅವರ ಮನವಿಯನ್ನು ಸುಮಾರು ಐದು ವರ್ಷಗಳ ಹಿಂದೆಯೇ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ ಆಕೆ ಅಲ್ಲಿಗೆ ನಿಲ್ಲಲಿಲ್ಲ, ರಾಜ್ಯ ಅಂಗವಿಕಲರ ಆಯೋಗವನ್ನು ಸಂಪರ್ಕಿಸಿ ಎಲ್ಲವನ್ನು ವಿವರಿಸಿದ್ದರು. ಆಯೋಗವು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತೆ ರಾಜ್ಯ ಸಾರಿಗೆ ಆಯುಕ್ತರನ್ನು ಕೇಳಿದೆ.

ಸಾರಿಗೆ ಕಮಿಷನರ್ ಎರ್ನಾಕುಲಂ ಜಿಲ್ಲೆಯ ಮೋಟಾರು ವಾಹನ ಇಲಾಖೆ ಅಧಿಕಾರಿಗಳಿಗೆ ಈ ಪ್ರಕರಣವನ್ನು ವಿವರವಾಗಿ ಅಧ್ಯಯನ ಮಾಡಿ ಸೂಕ್ತ ಪರಿಹಾರವನ್ನು ನೀಡುವಂತೆ ಸೂಚಿಸಿದರು. ವಿಷಯವನ್ನು ಅಧ್ಯಯನ ಮಾಡಿದ ನಂತರ, MVD (Motor Vehicle Division) ಅಧಿಕಾರಿಗಳು ಜಿಲುಮೋಲ್‌ಗೆ ಸೂಕ್ತವಾದ ಕಾರಿಗೆ ಹಲವಾರು ಬದಲಾವಣೆಗಳನ್ನು ಮಾಡಬೇಕೆಂದು ಸೂಚಿಸಿದರು.

kerala-cm-handed-over-driving-license-to-disabled-woman-after-5-years-of-struggle

ಅಧಿಕಾರಿಗಳು ಅಗತ್ಯ ಬದಲಾವಣೆಗಳನ್ನು ಸೂಚಿಸಿದರೂ, ಅಂತಹ ಮಾರ್ಪಾಡುಗಳನ್ನು ಮಾಡುವ ಯಾವುದೇ ಸ್ಥಳೀಯ ಸಂಸ್ಥೆಗಳು ಈ ಪ್ರದೇಶದಲ್ಲಿ ಲಭ್ಯವಿರಲಿಲ್ಲ. ನಂತರ ಇಲಾಖೆಯು ಈ ವಲಯದ ತಜ್ಞರನ್ನು ಕರೆದು ಒಂದು ವರ್ಷದೊಳಗೆ ಕಾರನ್ನು ಕಸ್ಟಮೈಸ್ ಮಾಡಿತು. ಕೊಚ್ಚಿ ಮೂಲದ ಸಂಸ್ಥೆಯು 2018 ರ ಮಾದರಿಯ ಸೆಲೆರಿಯೊ ಹ್ಯಾಚ್‌ಬ್ಯಾಕ್‌ಗೆ ಎಲ್ಲಾ ಎಲೆಕ್ಟ್ರಾನಿಕ್-ಸಂಬಂಧಿತ ಮಾರ್ಪಾಡುಗಳನ್ನು ನಿರ್ವಹಿಸಿದೆ.

ಕಾರಿನ ಪ್ರಮುಖ ನಿಯಂತ್ರಣಗಳನ್ನು ಈಗ ಆಕೆಯ ಪಾದಗಳನ್ನು ಬಳಸಿ ನಿರ್ವಹಿಸಬಹುದು, ಆದರೆ ಸಣ್ಣ ವೈಶಿಷ್ಟ್ಯಗಳನ್ನು ಧ್ವನಿ ಗುರುತಿಸುವಿಕೆಯನ್ನು ಬಳಸಿಕೊಂಡು ಸಕ್ರಿಯಗೊಳಿಸಬಹುದು ಮತ್ತು ನಿಷ್ಕ್ರಿಯಗೊಳಿಸಬಹುದು. ಈ ಎಲ್ಲಾ ಬದಲಾವಣೆಗಳನ್ನು ಮಾಡಿದ ನಂತರ, MVD ಪರಿಶೀಲಿಸಿ ಜಿಲುಮೋಲ್ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲು ಸೂಕ್ತವಾಗಿದೆ ಎಂದು ಖಚಿತಪಡಿಸಿತು.

kerala-cm-handed-over-driving-license-to-disabled-woman-after-5-years-of-struggle

ಮಾರ್ಪಾಡುಗಳ ನಂತರ, ಜಿಲುಮೋಲ್ ಈ ವರ್ಷದ ಮಾರ್ಚ್‌ನಲ್ಲಿ ಕಲಿಯುವವರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನವೆಂಬರ್‌ನಲ್ಲಿ ಅವರು ತಮ್ಮ ಮಾರುತಿ ಸೆಲೆರಿಯೊದಲ್ಲಿ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. MVD ಸಹ ಕಾರಿನ RC ಗೆ ಬದಲಾವಣೆಗಳನ್ನು ಮಾಡಿದೆ. ಈಗ ಅದನ್ನು ಅಡಾಪ್ಟೆಡ್ ಕ್ಲಾಸ್ ವಾಹನ ಎಂದು ವರ್ಗೀಕರಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜಿಲುಮೋಲ್ ಅವರ ಆರು ವರ್ಷಗಳ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಜಿಲುಮೋಲ್ ಲೈಸೆನ್ಸ್ ಪಡೆಯುವ ಮೂಲಕ ಭವಿಷ್ಯದಲ್ಲಿ ಆಕೆಯಂತಹ ಇನ್ನಷ್ಟು ಮಂದಿ ಮುಂದೆ ಬಂದು ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಜಿಲುಮೋಲ್‌ಗೆ ಪರವಾನಗಿಯನ್ನು ಕೇರಳದ ಮುಖ್ಯಮಂತ್ರಿಯೇ ನೆರವಾಗಿ ಹಸ್ತಾಂತರಿಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 8, 2023, 12:26 [IST]
English summary
Kerala cm handed over driving license to disabled woman after 5 years of struggle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+