ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಮಾರಣಾಂತಿಕ ಕರೋನಾ ವೈರಸ್ ಪ್ರಪಂಚದಾದ್ಯಂತ ಭೀತಿಯನ್ನುಂಟು ಮಾಡಿದೆ. ಭಾರತದಲ್ಲಿ ಈ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ತಡೆಯುವ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ತಿಂಗಳ 14ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಪ್ರಧಾನಿ ಮೋದಿರವರು ಈ ತಿಂಗಳ 14ರಂದು ಮಾಧ್ಯಮಗಳ ಮೂಲಕ ಇದನ್ನು ಪ್ರಕಟಿಸಿದರು. ಅನಿವಾರ್ಯತೆಯಿಲ್ಲದೆ ಹೊರಗೆ ಬರಬಾರದು ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಪತ್ನಿಯೊಬ್ಬರು ಪ್ರಧಾನಿ ಮೋದಿರವರ ಆಶಯಕ್ಕೆ ಭಂಗ ತರಲು ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ವರದಿಗಳ ಪ್ರಕಾರ, ಅವರು ಕಾರನ್ನು ಕಲಿಯಲು ಲಾಕ್‌ಡೌನ್‌ನಿಂದಾಗಿ ಖಾಲಿಯಾಗಿರುವ ರಸ್ತೆಯನ್ನು ಬಳಸಿದ್ದಾರೆ. ಈ ವೀಡಿಯೊವನ್ನು ಟಿವಿ 9 ಬಿಡುಗಡೆಗೊಳಿಸಿದೆ. ಈ ಘಟನೆ ಮಧ್ಯಪ್ರದೇಶದ ರಾಯ್‌ಪುರದಲ್ಲಿ ನಡೆದಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಅನಿಲ್ ಜೈನ್‌ರವರು ಈ ಭಾಗದ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಅವರ ಪತ್ನಿ ಕಿರಣ್ ಜೈನ್. ಕಿರಣ್ ಜೈನ್‌ರವರು ಜಿಲ್ಲಾ ನ್ಯಾಯಾಧೀಶ ಅನಿಲ್ ಜೈನ್‌ರವರಿಗೆ ಸರ್ಕಾರವು ನೀಡಿರುವ ಬೊಲೆರೋ ಎಂವಿವಿಯನ್ನು ಚಾಲನೆ ಮಾಡಿದ್ದಾರೆ. ಅವರು ಕಾರು ಚಾಲನೆ ಮಾಡುವ ವೇಳೆಯಲ್ಲಿ ವ್ಯಕ್ತಿಯೊಬ್ಬ ಅವರ ಜೊತೆಗಿದ್ದ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಕಿರಣ್ ಜೈನ್‌ರವರು ಈ ಕಾರನ್ನು ನಿಧಾನವಾಗಿ ಚಾಲನೆ ಮಾಡಿದ್ದಾರೆ. ಇದನ್ನು ಗಮನಿಸಿದ ಪತ್ರಕರ್ತನೊಬ್ಬ ಈ ಘಟನೆಯನ್ನು ವೀಡಿಯೊ ಮಾಡಿದ್ದಾನೆ. ತಕ್ಷಣವೇ ನ್ಯಾಯಾಧೀಶರ ಪತ್ನಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಕಾರಿನ ಹಿಂಭಾಗಕ್ಕೆ ಹೋಗಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಆ ಪತ್ರಕರ್ತನು ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಕೇಳಿದ್ದಾನೆ. ಆದರೆ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ. ಕಾರು ಚಲಾಯಿಸಲು ಚಾಲನಾ ಪರವಾನಗಿ ಇದೆಯೇ ಎಂಬ ಪ್ರಶ್ನೆಗೆ, ಡ್ರೈವಿಂಗ್ ಲೈಸೆನ್ಸ್ ಮನೆಯಲ್ಲಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಅವರು ಪದೇ ಪದೇ ಕಾರಿನಲ್ಲಿ ಹೊರಬರುತ್ತಿರುವ ಆಘಾತಕಾರಿ ಸುದ್ದಿಯನ್ನು ಆ ಪ್ರದೇಶದ ಜನರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಜಿಲ್ಲಾ ನ್ಯಾಯಾಧೀಶ ಅನಿಲ್ ಜೈನ್ ಅವರನ್ನು ಪ್ರಶ್ನಿಸಿದಾಗ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಕಿರಣ್ ಜೈನ್‌ರವರು ವಾಹನ ಚಾಲನೆ ಮಾಡಲು ಸರಿಯಾದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ. ಮನೆಯಿಂದ ಹೊರ ಬರುವಾಗ ಅವರು ಮಾಸ್ಕ್ ಧರಿಸುವುದಿಲ್ಲವೆಂದು ಅಲ್ಲಿದ್ದ ಸಾರ್ವಜನಿಕರು ಹೇಳಿದ್ದಾರೆ.

ದೇಶಾದ್ಯಂತ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇದರ ಜೊತೆಗೆ ವಾಹನಗಳಿಗೆ ದಂಡ ವಿಧಿಸುವುದು ಹಾಗೂ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಕಾನೂನು ರಕ್ಷಣೆ ಮಾಡಬೇಕಾದ ಜಿಲ್ಲಾ ನ್ಯಾಯಾಧೀಶರ ಪತ್ನಿಯೇ ಲಾಕ್‌ಡೌನ್ ಉದ್ದೇಶವನ್ನು ಹಾಳು ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.

ಚಿತ್ರಕೃಪೆ : ಟಿವಿ 9 ಭಾರತ್‌ವರ್ಷ್ / ಯೂಟ್ಯೂಬ್

More from DriveSpark

Article Published On: Friday, April 17, 2020, 18:37 [IST]
English summary
District Magistrate wife violates coronavirus lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+