ಡಿಕೆ ಸಾಹೇಬ ಓಡಿಸುತ್ತಿದ್ದ ಯೆಜ್ಡಿ ಬೈಕ್‌ಗೆ ಹೊಸ ರೂಪ: ಆನಂದ್ ಮಹೀಂದ್ರ ಏನಂದ್ರು?
ಭಾರತದಲ್ಲಿ ಯೆಜ್ಡಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಯೆಜ್ಡಿ ಬೈಕಿನ ಮೇಲೆ ಜನರಿಗಿರುವ ಕ್ರೇಜ್ ಇಂದು ನೆನ್ನೆಯದಲ್ಲ, 80ರ ದಶಕದಲ್ಲಿ ಯಂಗ್‌ಸ್ಟರ್‌ಗಳಲ್ಲಿ ಕ್ರೇಜ್ ಸೃಷ್ಟಿಸಿದ್ದ ಬೈಕ್ ಆಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು 30-35 ವರ್ಷಗಳ ಹಿಂದೆ ಬೆಂಗಳೂರಿನ ಹೆಚ್ಆರ್ಸಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಬೈಕ್ ಕ್ರೇಜ್ ಇತ್ತು. ಆಗ ಅವರು ಯೆಜ್ಡಿ (Yezdi) ಬೈಕ್ ಓಡಿಸುತ್ತಿದ್ದರು. ಅಲ್ಲದೇ ಯೂತ್ ಕಾಂಗ್ರೆಸ್‌ನಲ್ಲಿದ್ದಾಗಲೂ ಈ ಬೈಕ್‌ನಲ್ಲಿ ಓಡಾಡುತ್ತಿದ್ದರು. ಇದು ಡಿಕೆ ಶಿವಕುಮಾರ್ ಅವರ ಲಕ್ಕಿ ಬೈಕ್ ಇದಾಗಿದೆ.
30 ವರ್ಷದಿಂದ ಧೂಳು ಹಿಡಿದಿದ್ದ ಯೆಜ್ಡಿ ಬೈಕನ್ನು ಬೆಂಗಳೂರಿನ ಮೆಕ್ಯಾನಿಕ್ ಸುಪ್ರೀತ್ ಅವರು ರಿಸ್ಟೂರ್ ಮಾಡಿದ್ದಾರೆ. ಹೊಸದರಂತೆ ಈ ಬೈಕ್ ಅನ್ನು ರಿಸ್ಟೂರ್ ಮಾಡಿ ಡಿಕೆ ಶಿವಕುಮಾರ್ ಅವರಿಗೆ ಒಪ್ಪಿಸಿದ್ದಾರೆ. 70-80 ದಶಕದ ಬೈಕ್ ಆದ ಕಾರಣ ಅದರ ಬಿಡಿ ಭಾಗಗಳು ಇಲ್ಲಿ ಸಿಗುವುದು ಅಪರೂಪ. ಹೀಗಾಗಿ ಕೆಲ ಭಾಗಗಳನ್ನು ಬೇರೆ ಕಡೆಗಳಲ್ಲಿ ಇಂಜಿನ್ ಪಾರ್ಟ್ಸ್ಗಳನ್ನು ವಿದೇಶದಿಂದ ತರಿಸಿಕೊಂಡಿದ್ದಾರೆ.

ಡಿಕೆಯ ಯೆಜ್ಡೆ ಬೈಕನ್ನು ರಿಸ್ಟೂರ್ ಮಾಡಲು 10 ತಿಂಗಳ ಅವಧಿಯನ್ನು ತೆಗೆದುಕೊಂಡಿದ್ದಾರೆ. ಈ ಬೈಕ್ ಅನ್ನು ರಿಸ್ಟೂರ್ ಮಾಡಲು 2 ಲಕ್ಷ ರೂ. ವೆಚ್ಚವಾಗಿದೆ. ಈ ಯೆಜ್ಡೆ ಬೈಕ್ ಹೊಸ ರೂಪವನ್ನು ಪಡೆದುಕೊಂಡಿದ್ದಾರೆ. ಇನ್ನು ಸುಪ್ರೀತ್ ಅವರು ತನ್ನ ಬೈಕಿಗೆ ಹೊಸ ರೂಪವನ್ನ್ಜು ನೀಡುವುದನ್ನು ಕಂಡು ಡಿಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಇನ್ನು ಈ ಬೈಕ್ ಅನ್ನು ಅವರು ಸ್ಟಾರ್ಟ್ ಮಾಡಿ ಪರಿಶೀಲಿಸಿದ್ದಾರೆ.
ಫೋಟೋ ಸಹಿತ ಡಿಕೆಶಿಯವರು ತಮ್ಮ ಟ್ವಿಟರ್ ಶೇರ್ ಮಾಡಿ, ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ, ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು, ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು ಎಂದು ಬರೆದುಕೊಂಡಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರ ಡಿಕೆ ಶಿವಕುಮಾರ್ ಪೋಸ್ಟ್‌ಗೆ ಕನ್ನಡದಲ್ಲೇ ಕಮೆಂಟ್ ಮಾಡಿದ್ದಾರೆ. ನೆನಪಿನ ಶಕ್ತಿ ಎಂದು ಆನಂದ್ ಮಹೀಂದ್ರ ರಿಟ್ವೀಟ್ ಮಾಡಿ ಕೋಟ್ ಮಾಡಿದ್ದಾರೆ. ಕೆ ಶಿವಕುಮಾರ್ ಕಾಲೇಜು ದಿನದ ನೆನಪು ಹಾಗೂ ಆನಂದ್ ಮಹೀಂದ್ರ ಕನ್ನಡದ ಮೆಸೇಜ್ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದಲ್ಲಿ ಯೆಜ್ಡೆ ಹಾಗೂ ಜಾವಾ ಆಟೋಮೊಬೈಲ್ ಮಹೀಂದ್ರ ಗ್ರೂಪ್ ಮಾಲೀಕತ್ವ ಹೊಂದಿದೆ.
ಯೆಜ್ಡೆ ರೋಡ್‌ಕಿಂಗ್ ಮೋಟಾರ್‌ಸೈಕಲ್ ಆಗಿದ್ದು ಅದು ಭಾರತೀಯ ಮೋಟಾರ್‌ಸೈಕಲ್ ಇತಿಹಾಸದ ಮುಂಚೂಣಿಯಲ್ಲಿದೆ. ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ, ಇದನ್ನು 1970 ರ ದಶಕದಲ್ಲಿ ಜನಪ್ರಿಯ ಜಾವಾ ಮಾದರಿಗಳಿಗೆ ಉತ್ತರಾಧಿಕಾರಿಯಾಗಿ ಪರಿಚಯಿಸಲಾಯಿತು. ಅದರ ದೃಢತೆ ಮತ್ತು ಸರಳ ವಿನ್ಯಾಸಕ್ಕೆ ಹೆಸರುವಾಸಿಯಾದ ಈ ಮಾದರಿಯು ಆ ಸಮಯದಲ್ಲಿ ಭಾರತೀಯ ಯುವಕರ ಗಮನ ಸೆಳೆಯಿತು.

ಯೆಜ್ಡೆ ಬೈಕಿನಲ್ಲಿ 250 cc ಸಿಂಗಲ್ ಸಿಲಿಂಡರ್ ಎರಡು-ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು 18 bhp ಪವರ್ ಮತ್ತು 24 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಏರ್-ಕೂಲ್ಡ್ ಎಂಜಿನ್ ಟ್ವಿನ್-ಪೋರ್ಟ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ಹೊಂದಿದ್ದು, ಆ ಕಾಲದ ಗಮನಾರ್ಹ ವೈಶಿಷ್ಟ್ಯಗಳಲ್ಲಿ ಒಂದಾದ ನ್ಯೂಟ್ರಲ್ ಫೈಂಡರ್‌ನೊಂದಿಗೆ 4-ಸ್ಫೀಡ್ ಗೇರ್‌ಬಾಕ್ಸ್‌ನೊಂದಿಗೆ ಬಂದಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications