ಪೊಲೀಸ್ ಕಾರುಗಳಿಗೆ ವಿಶೇಷ ಪರ್ಮಿಟ್ ಇದೆಯೇ? ಸಾಕ್ಷ್ಯ ಸಮೇತ ಪ್ರಶ್ನಿಸಿ ಬೆವರಿಳಿಸಿದ ಯುವಕ

ಚೆನ್ನೈನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸಾಕ್ಷ್ಯ ಸಮೇತ ಪ್ರಶ್ನಿಸಿದ ಬಳಿಕ ಟ್ರಾಫಿಕ್ ಪೊಲೀಸರು ಪೊಲೀಸ್ ವಾಹನಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ.

ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ವಹಿಸಿ ದಂಡ ವಿಧಿಸುವುದು ಎಲ್ಲರಿಗೂ ಗೊತ್ತು. ಪ್ರಸ್ತುತ ಹಲವು ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಸ್ವಯಂಚಾಲಿತ ಕ್ಯಾಮೆರಾಗಳೂ ಕಾರ್ಯನಿರ್ವಹಿಸುತ್ತಿದ್ದು, ದಂಡ ವಿಧಿಸುತ್ತಿವೆ.

ಪೊಲೀಸ್ ಕಾರುಗಳಿಗೆ ವಿಶೇಷ ಪರ್ಮಿಟ್ ಇದೆಯೇ? ಸಾಕ್ಷ್ಯ ಸಮೇತ ಪ್ರಶ್ನಿಸಿ ಬೆವರಿಳಿಸಿದ ಯುವಕ

ಆದರೆ ಸಿಸಿಟಿವಿ ಹಾಗೂ ಟ್ರಾಫಿಕ್ ಪೊಲೀಸರೇ ಇಲ್ಲದ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ ಕ್ಯಾರೇ ಎನ್ನುವವರೇ ಇರುವುದಿಲ್ಲ. ಇನ್ನು ಪೊಲೀಸರೇ ನಿಯಮ ಉಲ್ಲಂಘಿಸಿದರೆ ಕೇಳುವ ಧೈರ್ಯ ಯಾರೂ ಮಾಡೋದಿಲ್ಲ. ಇಂತಹ ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ತಪ್ಪು ಮಾಡಿ ಸಿಕ್ಕಿಬಿದ್ದರೇ ದಂಡ ಖಚಿತ. ಆದರೆ ಪೊಲೀಸರು ಮಾಡಿದರೆ ನೋಡಿ ನೋಡದಂತೆ ಬಿಡಲಾಗುತ್ತದೆ.

ಇಂತಹ ಹಲವು ಉದಾಹರಣೆಗಳನ್ನು ನಾವು ನೋಡಿದಾಗ ಪೊಲೀಸರು ದಂಡ ವಿಧಿಸಿದಾಗ ಈ ಎಲ್ಲ ನಿಯಮಗಳು ಜನರಿಗಾಗಿಯೇ ಇವೆಯೇ ಎಂಬ ವೇದನೆ ನಮ್ಮನ್ನು ಪ್ರಶ್ನಿಸುತ್ತದೆ. ಆದರೆ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಪ್ರಶ್ನಿಸಬಹುದು, ಇದೀಗ ಕೈಯಲ್ಲೊಂದು ಆಂಡ್ರಾಯ್ಡ್ ಫೋನ್ ಇದ್ದರೇ ಸಾಕು ಫೋಟೋ ಕ್ಲಿಕ್ಕಿಸಿ ವೈರಲ್ ಮಾಡಬಹುದು.

ಇವು ಸರ್ಕಾರಿ ಮೇಲಾಧಿಕಾರಿಗಳಿಗೆ ತಲುಪುತ್ತವೆ, ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಇತ್ತೀಚೆಗೆ ಒಂದು ಪೊಲೀಸ್ ವಾಹನ ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿತ್ತು. ಇದನ್ನು ಕಂಡ ಅರವಿಂದ್ ಎಂಬ ಯುವಕ ಫೋಟೋ ತೆಗೆದು ತಮ್ಮ ಟ್ವಿಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಆ ಫೋಟೋದಲ್ಲಿ 3 ಸ್ಟಾರ್ ಸ್ಟೇಟಸ್‌ನೊಂದಿಗೆ ಪೊಲೀಸ್ ಕಾರೊಂದು ರಾಂಗ್ ರೂಟ್‌ನಲ್ಲಿ ಸಂಚರಿಸಿರುವುದಾಗಿ ತಿಳಿದುಬಂದಿದೆ.

ಈ ಫೋಟೋ ಪೋಸ್ಟ್ ಮಾಡಿರುವ ಅರವಿಂದ್ ಈ ಕಾರಿನ ನಂಬರ್ ಪೋಸ್ಟ್ ಮಾಡಿದ್ದು, ಪೊಲೀಸ್ ಕಾರುಗಳಿಗೆ ಮಾತ್ರ ವಿಶೇಷ ಪರ್ಮಿಟ್ ಇದೆಯೇ? ಎಂದು ಪ್ರಶ್ನಿಸಿದ್ದರು. ಅಲ್ಲದೇ ಈ ಪೋಸ್ಟ್ ನಲ್ಲಿ ತಮಿಳುನಾಡು ಪೊಲೀಸ್, ಚೆನ್ನೈ ಟ್ರಾಫಿಕ್ ಪೊಲೀಸ್, ಚೆನ್ನೈ ಕಾರ್ಪೊರೇಷನ್ ಟ್ರಾಫಿಕ್ ಪೊಲೀಸ್ ಅವರ ಅಧಿಕೃತ ಟ್ವಿಟರ್ ಪೋಸ್ಟ್ ಗಳನ್ನು ನಮೂದಿಸಿ ಟ್ಯಾಗ್ ಮಾಡಿದ್ದಾರೆ.

ಈ ವರದಿಗೆ ಪ್ರತಿಕ್ರಿಯಿಸಿದ ಚೆನ್ನೈ ಪೆರು ನಗರ ಪೊಲೀಸರು, ನಿರ್ದಿಷ್ಟ ವಾಹನವನ್ನು ಚಲಾಯಿಸಿದ ಚಾಲಕನಿಗೆ 500 ರೂ. ದಂಡ ವಿಧಿಸಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಈ ತಪ್ಪು ಮಾಡದಂತೆ ತಾಕೀತು ಮಾಡಿದ್ದೇವೆ ಎಂದು ಆ ಚಲನ್ ನೀಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಟ್ವೀಟ್ ವೈರಲ್ ಆಗುತ್ತಿದ್ದು ಕಾನೂನು ಉಲ್ಲಂಘಿಸಿದರೆ ಪೊಲೀಸರು ಶಿಕ್ಷೆಗೆ ಗುರಿಯಾಗುವುದಿಲ್ಲ ಎಂಬ ಜನರ ಧ್ವನಿಗೆ ಪ್ರತಿಯಾಗಿ ಈ ಘಟನೆ ನಡೆದಿದೆ. ಜನರು ಸಾಮಾನ್ಯವಾಗಿ ತಮ್ಮ ಕೈಯಲ್ಲಿ ಸೆಲ್ ಫೋನ್‌ಗಳನ್ನು ಹೊಂದಿರುವುದರಿಂದ ಸೆಲ್ ಫೋನ್‌ನಲ್ಲಿಯೇ ಸೂಕ್ತ ಪುರಾವೆಗಳನ್ನು ಒದಗಿಸಬಹುದಾದ್ದರಿಂದ ಇನ್ಮುಂದೆ ಪೊಲೀಸರಿಗೂ ಎಲ್ಲಾ ನಿಯಮಗಳು ಅನ್ವಯಿಸುತ್ತವೆ ಎಂದು ಕಮೆಂಟ್‌ಗಳು ವ್ಯಕ್ತವಾಗುತ್ತಿವೆ.

Most Read Articles

Kannada
English summary
Do police cars have a special permit man questioned to police
Story first published: Friday, November 18, 2022, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X