ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಕರೋನಾ ವೈರಸ್ ಹರಡುವ ಭೀತಿಯಿಂದಾಗಿ ಕಳೆದ ಐವತ್ತು ದಿನಗಳಿಂದ ದೇಶದಲ್ಲಿ ಎಲ್ಲಾ ರೀತಿಯ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಲಾಕ್‌ಡೌನ್ ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪುನರಾರಂಭಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಇದನ್ನು ದೃಢೀಕರಿಸಿದ್ದಾರೆ.

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಸದ್ಯಕ್ಕೆ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ನಾಲ್ಕನೇ ಹಂತವನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಅದರಂತೆ ಸಾರ್ವಜನಿಕ ಸಾರಿಗೆ ವಾಹನಗಳಾದ ವಿಮಾನ, ರೈಲು ಹಾಗೂ ಬಸ್‌ಗಳ ಸೇವೆಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು.

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಶೀಘ್ರದಲ್ಲೇ ಕಮರ್ಷಿಯಲ್ ವಿಮಾನಗಳನ್ನು ಪುನರಾರಂಭಿಸುವುದು ಖಚಿತ. ಆದರೆ ಕರೋನಾ ವೈರಸ್ ಕಾರಣಕ್ಕೆ ಭವಿಷ್ಯದಲ್ಲಿ ವಿಮಾನ ಪ್ರಯಾಣದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ವಿಮಾನಗಳಲ್ಲಿ ಮಾಡಬಹುದಾದ ಹಾಗೂ ಮಾಡಬಾರದಾದ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಅವುಗಳೆಂದರೆ:

ಸಾಮಾಜಿಕ ಅಂತರದ ಕಾರಣಕ್ಕಾಗಿ ಬೋರ್ಡಿಂಗ್ ಪಾಸ್‌ಗಳನ್ನು ಕೈಬಿಡಲಾಗಿದೆ.

ಪ್ರಯಾಣಿಕರು 350 ಎಂಎಲ್ ಹ್ಯಾಂಡ್ ಸ್ಯಾನಿಟೈಜರ್ ಅನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.

2 ಗಂಟೆಗಳಿಗಿಂತ ಕಡಿಮೆ ಅವಧಿಯ ವಿಮಾನಗಳಲ್ಲಿ ಆಹಾರ ನೀಡುವುದಿಲ್ಲ.

ಆಹಾರದ ಬದಲು ತಿಂಡಿಗಳನ್ನು ಮಾತ್ರ ನೀಡಲಾಗುವುದು.

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಆರೋಗ್ಯವಂತ ಜನರು ಮಾತ್ರ ಪ್ರಯಾಣಿಸಬೇಕು. ಕೆಮ್ಮು, ಸೀನು, ಸಣ್ಣ ಜ್ವರವಿದ್ದರೂ ಪ್ರಯಾಣಿಸುವಂತಿಲ್ಲ.

ವಿಮಾನದ ಕ್ಯಾಬಿನ್ ಒಳಗೆ ಲಗೇಜ್‌ಗಳನ್ನು ಕೊಂಡೊಯ್ಯುವಂತಿಲ್ಲ.

ವೆಬ್-ಚೆಕ್ಇನ್ ಮಾತ್ರ ನಡೆಸಲಾಗುತ್ತದೆ.

ಆರೋಗ್ಯ ಸೇತು ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಕೋವಿಟ್ -19 ವೈರಸ್‌ ಸೋಂಕಿಗೆ ಒಳಗಾಗಿದ್ದರೆ ಅಥವಾ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ, ಅದನ್ನು ವರದಿ ಮಾಡಬೇಕು. 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ.

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಈ ಎಲ್ಲಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಈ ಹೊಸ ನಿಯಮಗಳು ಈಗಾಗಲೇ ಜಾರಿಯಲ್ಲಿವೆ. ಜೊತೆಗೆ ಕಡ್ಡಾಯ 14 ದಿನಗಳ ಕ್ವಾರಂಟೈನ್‌ ಸಹ ಜಾರಿಯಲ್ಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಕರೋನಾ ವೈರಸ್ ಸೋಂಕು ಪೂರ್ತಿಯಾಗಿ ನಿರ್ಮೂಲನೆಯಾಗುವವರೆಗೂ ಈ ಸುರಕ್ಷತಾ ನಿಯಮಗಳು ಜಾರಿಯಲ್ಲಿರಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ವಿಮಾನಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ.

ಪ್ರಯಾಣಿಕರ ಗಮನಕ್ಕೆ: ವಿಮಾನಯಾನಕ್ಕಾಗಿ ಬರಲಿವೆ ಹತ್ತು ಹಲವು ನಿಯಮಗಳು

ಸಾಮಾಜಿಕ ಅಂತರವನ್ನು ಕಾಪಾಡುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಇನ್ನೂ ಮುಂದೆ ವಿಮಾನಗಳಲ್ಲಿ ಹೆಚ್ಚಿನ ನಿರ್ಬಂಧಗಳನ್ನು ಹಾಗೂ ನಿಬಂಧನೆಗಳನ್ನು ನಿರೀಕ್ಷಿಸಲಾಗಿದೆ. ಇದು ಪ್ರಯಾಣಿಕರಿಗೆ ವಿಭಿನ್ನ ಅನುಭವವನ್ನು ನೀಡಲಿದೆ. ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ವಿದೇಶಗಳಲ್ಲಿರುವ ಭಾರತೀಯರನ್ನು ವಾಪಸ್ ಕರೆತರುತ್ತಿದೆ.

More from DriveSpark

Article Published On: Monday, May 18, 2020, 14:26 [IST]
English summary
Do's and don't do's for future flying. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+