Just In
- 4 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 6 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 7 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
- 7 hrs ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
Don't Miss!
- News
ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Sports
ಈ 13 ಆಟಗಾರರು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದದ್ದು ನೆನಪಿದೆಯಾ?
- Movies
ಕನ್ನಡ ಬಿಟ್ಟ ಶಾರುಖ್ ಖಾನ್ 'ಪಠಾಣ್' ಪ್ಯಾನ್ ಇಂಡಿಯಾ ಫಿಲ್ಮ್ ಅಲ್ಲವೇ ಅಲ್ಲಾ!
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ವಿಮಾನ ನಿಲ್ದಾಣಗಳಲ್ಲಿನ ಪೊಲೀಸ್ ಶ್ವಾನಗಳ ಸಾಮರ್ಥ್ಯ ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ...
ವಿಶ್ವಾಸಕ್ಕೆ ಮತ್ತೊಂದು ಹೆಸರೇ ಶ್ವಾನ, ಒಮ್ಮೆ ನಾಯಿಗಳಿಗೆ ಊಟ ಹಾಕಿದರೆ ಕಡೆವರೆಗು ನಿಮ್ಮನ್ನು ಹಿಂಬಾಲಿಸುತ್ತವೆ. ಈ ನಾಯಿಗಳು ಕೇವಲ ಪ್ರೀತಿಯನ್ನು ತೋರುವುದು ಮಾತ್ರವಲ್ಲದೇ ಕೆಲವು ಅಚ್ಚರಿ ಮೂಡಿಸುವ ಕೆಲಸಗಳನ್ನು ಮಾಡುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪೊಲೀಸ್ ನಾಯಿಗಳು, ಇವು ವಾಸನೆ ನೋಡುವ ಮೂಲಕ ಏನನ್ನಾದರು ಪತ್ತೆಹಚ್ಚಬಲ್ಲವು.

ನಾಯಿಗಳಿಗೆ ಟ್ರೈನಿಂಗ್ ನೀಡುವ ಮೂಲಕ ಅವುಗಳನ್ನು ಯೋಧರಂತೆ ಸಿದ್ಧಗೊಳಿಸಲಾಗುತ್ತದೆ. ಈಗಲೂ ಸಾವಿರಾರು ನಾಯಿಗಳು ಭಾರತೀಯ ಸೇನೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿವೆ. ಇಂತಹ ಕೆಲಸಗಳಿಗೆ ಶ್ವಾನಗಳನ್ನೇ ಹೆಚ್ಚಾಗಿ ಏಕೆ ಬಳಸಿಕೊಳ್ಳುತ್ತಾರೆ ಎಂದು ಹಲವರಿಗೆ ಅನುಮಾನವಿರಬಹುದು. ಇದಕ್ಕೆ ಕಾರಣ ನಾಯಿಯ ಮೂಗು ಮನುಷ್ಯನಿಗಿಂತ ಶೇ20 ರಿಂದ 40 ಪಟ್ಟು ಹೆಚ್ಚು ವಾಸನೆ ಗ್ರಾಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಜೊತೆಗೆ ಇತರ ಕೆಲವು ಪ್ರಾಣಿಗಳು ಸಹ ಹೆಚ್ಚು ವಾಸನೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು ಸಹ ಅವುಗಳನ್ನು ಶ್ವಾನಗಳಂತೆ ಟ್ರೈನ್ ಮಾಡಲು ಆಗುವುದಿಲ್ಲ. ಇದೇ ಕಾರಣಕ್ಕೆ ವಿಶ್ವದ ಹಲವು ದೇಶಗಳಲ್ಲಿ ನಾಯಿಗಳನ್ನು ಪತ್ತೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ವಿಮಾನ ನಿಲ್ದಾಣಗಳು, ಸೇನೆ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಹೆಚ್ಚಾಗಿ ಕಾಣಬಹುದು.

ವಿಮಾನ ನಿಲ್ದಾಣಗಳಲ್ಲಿ ಅಪರಾಧಗಳನ್ನು ತಡೆಯಲು ನಾಯಿಗಳನ್ನು ಬಳಸಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದನೆ ಮತ್ತು ಮಾದಕವಸ್ತುಗಳ ಸಾಗಣೆ ವಿಪರೀತವಾಗಿರುತ್ತದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಭದ್ರತೆ ಒದಗಿಸುವಲ್ಲಿ ನಾಯಿಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ.

ಗಾಂಜಾ, ಹೆರಾಯಿನ್‌ನಂತಹ ಮಾದಕ ದ್ರವ್ಯಗಳನ್ನು ಹೊಂದಿದ್ದರೆ ನಾಯಿಗಳು ವಿಮಾನ ನಿಲ್ದಾಣಗಳಿಗೆ ತಂದ ಲಗೇಜ್‌ಗಳನ್ನು ವಾಸನೆ ನೋಡುವ ಮೂಲಕ ಪತ್ತೆಹಚ್ಚುತ್ತವೆ. ಅಲ್ಲದೇ ಆಯುಧಗಳು, ಸ್ಫೋಟಕಗಳಿದ್ದರೂ ಸಹ ನಾಯಿಗಳು ಅವನ್ನು ಸುಲಭವಾಗಿ ಗುರ್ತಿಸಬಲ್ಲವು.

ಜತೆಗೆ ವಿಮಾನ ನಿಲ್ದಾಣಗಳಲ್ಲಿ ದಂತ ಮತ್ತು ಘೇಂಡಾಮೃಗದ ಕೊಂಬುಗಳು ಕಳ್ಳಸಾಗಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಬೆಲೆ ಬಾಳುವ ವಸ್ತುಗಳನ್ನು ಸಾಗಿಸಲು ಅವುಗಳ ಮೂಲ ರೂಪವನ್ನು ಬದಲಿಸಿ ವಾಸನೆ ಬಾರದಂತೆ ಕಳ್ಳರು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲೂ ನಾಯಿಗಳು ಪತ್ತೆಹಚ್ಚಬಲ್ಲವು.

ರೋಗಿಗಳನ್ನು ಪತ್ತೆಹಚ್ಚಬಲ್ಲವು
ಹೌದು, ನಾಯಿಗಳು ಮಲೇರಿಯಾದಂತಹ ರೋಗಗಳನ್ನು ಕಂಡುಹಿಡಿಯಬಲ್ಲವು ಎಂದು ಇತ್ತೀಚೆಗೆ ನಡೆಸಿದ ಸಂಶೋಧನೆಗಳು ತಿಳಿಸಿವೆ. ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಆತನಲ್ಲಿ ಅಡಗಿರುವ ಮಲೇರಿಯಾವನ್ನು ನಾಯಿಗಳು ಕಂಡುಹಿಡಿಯುತ್ತವೆ ಎಂಬುದು ಗಮನಾರ್ಹ.

ಮಲೇರಿಯಾ ಪೀಡಿತರ ಚರ್ಮದ ಮೇಲೆ ವಿವಿಧ ರೀತಿಯ ವಾಸನೆ ಬರುತ್ತದೆ. ಇದು ಸಾಮಾನ್ಯರಿಗೆ ತಿಳಿಯುವುದಿಲ್ಲ, ಆದರೆ ನಾಯಿಗಳು ಇದನ್ನು ಕಂಡುಕೊಳ್ಳಬಹುದು. ಈ ವಾಸನೆಯನ್ನು ಪತ್ತೆಹಚ್ಚಲು ನಾಯಿಗಳಿಗೆ ತರಬೇತಿ ನೀಡುವ ಅಗತ್ಯವಿರುತ್ತದೆ. ಈ ರೀತಿಯ ರೋಗನಿರ್ಣಯ ವಿಧಾನವು ಇನ್ನೂ ಶೈಶವಸ್ಥೆಯಲ್ಲಿದ್ದರೂ, ಮುಂಬರುವ ವರ್ಷಗಳಲ್ಲಿ ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಸಾಧ್ಯತೆ ಇದೆ.

ಆದ್ದರಿಂದ ಬಹಳಷ್ಟು ವಿಮಾನ ನಿಲ್ದಾಣಗಳು ಮಲೇರಿಯಾ ಪತ್ತೆ ಕಾರ್ಯಾಚರಣೆಗಳಲ್ಲಿ ನಾಯಿಗಳನ್ನು ಬಳಸಿಕೊಳ್ಳಲು ಯೋಜಿಸುತ್ತಿವೆ. ಈ ಮಧ್ಯೆ ಮಲೇರಿಯಾ ಮಾತ್ರವಲ್ಲದೆ ನಾಯಿಗಳ ಮೂಲಕ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಪ್ರಸ್ತುತ ವಿಮಾನ ನಿಲ್ದಾಣಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ನಡೆಸಲಾಗುತ್ತಿದೆ.

ವಿಶ್ವಾದ್ಯಂತ ಕೋವಿಡ್ -19 ವೈರಸ್ ಹರಡುವುದನ್ನು ನಿಯಂತ್ರಿಸಲು ವಿಮಾನ ನಿಲ್ದಾಣಗಳ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಉದಾಹರಣೆಗೆ ತಾಪಮಾನ ಪರೀಕ್ಷೆಯಾಗಿದ್ದು, ಇದು ಅಷ್ಟೇನು ಅಷ್ಟೇನು ಯಶಸ್ವಿಯಾಗಿಲ್ಲ. ಕಾರಣ ದೇಹದಲ್ಲಿ ತಾಪಮಾನವಿಲ್ಲದ ಹಲವರಲ್ಲಿ ಕೊರೊನಾ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಾಯಿಗಳ ಮೂಲಕ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವ ಹೊಸ ಪ್ರಯತ್ನ ನಡೆಸಲಾಗುತ್ತಿದೆ.

ಕೊರೊನಾ ಸೋಂಕಿತರ ದೇಹದ ಮೇಲೂ ಒಂದು ರೀತಿಯ ವಾಸನೆ ಉಂಟಾಗುತ್ತದೆ. ನಾಯಿಗಳಿಂದ ಮಾತ್ರ ಈ ವಾಸನೆಯನ್ನು ಪತ್ತೆ ಹಚ್ಚಲು ಸಾಧ್ಯವಾದ್ದರಿಂದ, ವಿಮಾನ ನಿಲ್ದಾಣಗಳಲ್ಲಿ ಈ ಸಂಬಂಧ ಪ್ರಯತ್ನಗಳನ್ನು ವೆಗಗೊಳಿಸಿದ್ದಾರೆ. ರೋಗಲಕ್ಷಣಗಳು ಪ್ರಾರಂಭವಾಗುವ 5 ದಿನಗಳ ಮುಂಚೆಯೇ ನಾಯಿಗಳು ವೈರಸ್ ಅನ್ನು ಪತ್ತೆ ಮಾಡಬಹುದು ಎಂದು ನಂಬಲಾಗಿದೆ.

ಆದ್ದರಿಂದ, ಪ್ರಪಂಚದಾದ್ಯಂತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನಾಯಿಗಳ ಮೂಲಕ ಕೊರೊನಾ ರೋಗಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಬಳಸುವ ನಾಯಿಗಳು 2 ರಿಂದ 4 ತಿಂಗಳುಗಳಲ್ಲಿ ಮೂಲಭೂತ ಅಂಶಗಳನ್ನು ಬಳಸಿಕೊಳ್ಳುತ್ತವೆ. ಈ ಮೂಲಕ ಅವುಗಳ ಕೌಶಲ್ಯಗಳನ್ನು 'ತೀಕ್ಷ್ಣ'ವನ್ನಾಗಿ ಮಾಡುತ್ತದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ವಿಮಾನ ನಿಲ್ದಾಣಗಳಲ್ಲಿ ಬಳಸುವ ಸ್ನಿಫರ್ ನಾಯಿಗಳ ಬಗ್ಗೆ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅವು ಹೆಚ್ಚು ಬೊಗಳುವುದಿಲ್ಲ. ಅವು ಆಗಾಗ್ಗೆ ತಮ್ಮ ಕೆಲಸವನ್ನು ಶಾಂತವಾಗಿ ಮಾಡುತ್ತವೆ, ಇದಕ್ಕಾಗಿ ವಿಮಾನ ನಿಲ್ದಾಣದ ಸ್ನಿಫರ್ ನಾಯಿಗಳಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಶ್ವಾನಗಳನ್ನು ನಮ್ಮಿಷ್ಟದಂತೆ ಬೆಳಸಬಹುದು, ನಮ್ಮಿಷ್ಟದಂತೆ ಟ್ರೈನ್ ಕೂಡ ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೇ ಇತ್ತೀಚೆಗೆ ಬಿಡುಗಡೆಯಾದ ಚಾರ್ಲಿ ಸಿನಿಮಾ. ಇದರಲ್ಲಿ ಚಾರ್ಲಿ ಮಾಡಿರುವ ಪರ್ಫಾಮೆನ್ಸ್‌ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ನಾಯಿಗಳು ಕೇವಲ ದೇಶ ಸೇವೆ ಮಾತ್ರವಲ್ಲದೇ ಸಿನಿಮಾಗಳಲ್ಲಿ ಅಭಿನಯಿಸಲು ಕೂಡ ಸೈ ಎನಿಸಿಕೊಂಡಿವೆ.