ಪ್ರಧಾನಿ ಮೋದಿ ಯಾವ ಕಾರು ಬಳಸುತ್ತಾರೆ ಗೊತ್ತಾ? ಮರ್ಸಿಡಿಸ್‌ನಿಂದ ಸ್ಕಾರ್ಪಿಯೊವರೆಗೆ..
ನಮ್ಮಗೆಲ್ಲರಿಗೂ ತಿಳಿದಿರುವಂತೆ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಅವರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅವರು, ಸಂಚರಿಸುವ ವಾಹನಗಳು ಅತ್ಯುನ್ನತ ಮಟ್ಟದ ಸುರಕ್ಷಿತ ವ್ಯವಸ್ಥೆಯನ್ನು ಹೊಂದಿರುತ್ತವೆ. ಇಲ್ಲಿ ಮೋದಿ ಅವರು, ಯಾವ ಕಾರನ್ನು ತಮ್ಮ ಪ್ರಯಾಣಕ್ಕೆ ಬಳಸುತ್ತಿದ್ದಾರೆ ಅವು ಯಾವ ರೀತಿಯ ವಿಶೇಷತೆಯನ್ನು ಹೊಂದಿವೆ ಎಂಬುದನ್ನು ತಿಳಿಯೋಣ.
ಮರ್ಸಿಡಿಸ್-ಮೇಬ್ಯಾಕ್ S650:
ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ತೆರಳುತ್ತಿದ್ದಾಗ, ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ತಮ್ಮ ಮರ್ಸಿಡಿಸ್-ಮೇಬ್ಯಾಕ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಈ ಹೊಸ ಮರ್ಸಿಡಿಸ್-ಮೇಬ್ಯಾಕ್ S650 ಅನ್ನು ಸಂಚಾರಕ್ಕೆ ಬಳಸುವ ಮೊದಲು ಪ್ರಧಾನ ಮೋದಿ ಅವರು, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಅನ್ನು ಉಪಯೋಗ ಮಾಡುತ್ತಿದ್ದರು ಎಂಬುದು ಇಲ್ಲಿ ಗಮನಿಸಿದ ಬೇಕಾದ ಅಂಶವಾಗಿದೆ.

ಹಲವಾರು ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ನೂತನ ಮರ್ಸಿಡಿಸ್-ಮೇಬ್ಯಾಕ್ S650 ಬಲವಾದ ಗಾರ್ಡ್ VR-10 ಮಟ್ಟದ ರಕ್ಷಣೆಯನ್ನು ಹೊಂದಿದೆ. ಇದು ಯಾವುದೇ ಉತ್ಪಾದನಾ ಕಾರಿನಲ್ಲಿ ಲಭ್ಯವಿರಬಹುದಾದ ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆಯಾಗಿದೆ ಎಂದು ಹೇಳಬಹುದಾಗಿದೆ. ಈ ಕಾರಿನ ಮೇಲೆ AK-47ನಿಂದ ದಾಳಿ ಮಾಡಿದರೂ ಅದರ ಬುಲೆಟ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, 15 ಕೆಜಿ TNT ಸ್ಫೋಟವಾದರೂ ಅದರಿಂದ ತನ್ನ ಪ್ರಯಾಣಿಕನಿಗೆ ಪ್ರಾಣಹಾನಿಯಾದಂತೆ ತಡೆಯುತ್ತದೆ.
ಲ್ಯಾಂಡ್ ರೋವರ್ ರೇಂಜ್ ರೋವರ್ ಎಚ್‌ಎಸ್‌ಇ:
ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಲ್ಯಾಂಡ್ ರೋವರ್ ರೇಂಜ್ ರೋವರ್ ಎಚ್‌ಎಸ್‌ಇ ಅನ್ನು ಹಲವಾರು ಸಂದರ್ಭಗಳಲ್ಲಿ ಬಳಕೆ ಮಾಡಿದ್ದಾರೆ. ಅಲ್ಲದೆ, ಈ ಲ್ಯಾಂಡ್ ರೋವರ್ ರೇಂಜ್ ರೋವರ್ HSE ಅನ್ನು BMW 7 ಸೀರಿಯಸ್ 760 Li ಬದಲಾಗಿ ಉಪಯೋಗ ಮಾಡುತ್ತಿದ್ದರು. ಈ BMW 7 ಕಾರನ್ನು ಈ ಹಿಂದೆ ಮೋದಿ ಅವರು, ಬಳಸುತ್ತಿದ್ದರು. ಅಲ್ಲದೆ, ಈ ಲ್ಯಾಂಡ್ ರೋವರ್ ರೇಂಜ್ ರೋವರ್ ಎಚ್‌ಎಸ್‌ಇ ಕೂಡ ಸಂಪೂರ್ಣ ಶಸ್ತ್ರಸಜ್ಜಿತವಾಗಿತ್ತು ಎಂದು ಹೇಳಬಹುದು.
ಈ ಲ್ಯಾಂಡ್ ರೋವರ್ ರೇಂಜ್ ರೋವರ್ ಎಚ್‌ಎಸ್‌ಇ ಕುರಿತಂತೆ ಮಾತನಾಡುವುದಾದರೇ, ಪ್ರಧಾನಿ ಮೋದಿ ಅವರು ಉಪಯೋಗಿಸುತ್ತಿದ್ದ ಈ SUV 5.0-ಲೀಟರ್, ಸೂಪರ್ಚಾರ್ಜ್ಡ್ V8 ಎಂಜಿನ್ ಅನ್ನು ಹೊಂದಿತ್ತು. ಇದು IED ಸ್ಫೋಟಗಳು ಮತ್ತು ಅನೇಕ ಸುತ್ತಿನ ಗನ್ ಫೈರಿಂಗ್ ಅನ್ನು ತಡೆದುಕೊಳ್ಳುವ ಮೂಲಕ ತನ್ನ ಪ್ರಯಾಣಿಕರಿಗೆ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿತ್ತು ಎಂದು ಹೇಳಬಹುದಾಗಿದ್ದು, ನಮ್ಮ ಪ್ರಧಾನಿಗೆ ಟಾಪ್-ಶೆಲ್ಫ್ ಸೆಕ್ಯುರಿಟಿಯನ್ನು ಈ SUV ಖಾತರಿಪಡಿಸುತ್ತದೆ.
BMW 7 ಸೀರಿಯಸ್ 760 Li ಹೈ-ಸೆಕ್ಯುರಿಟಿ ಎಡಿಷನ್:
ಪ್ರಧಾನಿ ನರೇಂದ್ರ ಮೋದಿ ಅವರು, ಹೆಚ್ಚು ಆದ್ಯತೆ ನೀಡುವ ವಾಹನವಾಗಿ ಈ BMW ಸಹ ಇತ್ತು. ಇದನ್ನು ವಿಶ್ವದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಕಾರಿನಲ್ಲಿ ಅನೇಕ ಲೇಯರ್ ಸೆಕ್ಯುರಿಟಿಯನ್ನು ನೀಡಲಾಗಿತ್ತು. ವಾಸ್ತವವಾಗಿ, ಗುಂಡೇಟು ಮತ್ತು ಬಾಂಬ್‌ಗಳಿಂದ ರಕ್ಷಣೆ ಒದಗಿಸುವ ವೈಶಿಷ್ಯಗಳ ಹೊರತಾಗಿಯೂ ಈ BMW 7 ಸೀರಿಯಸ್ 760 Li ಹೈ-ಸೆಕ್ಯುರಿಟಿ ಎಡಿಷನ್ ಕಾರಿಗೆ ಯಾವುದೇ ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದರೂ ಅದರ ವಿರುದ್ದದ ರಕ್ಷಣೆಗೆ ಆಕ್ಸಿಜನ್ ಟ್ಯಾಂಕ್ ಅನ್ನು ಸಹ ಅಳವಡಿಸಲಾಗಿತ್ತು.
ಮಹೀಂದ್ರಾ ಸ್ಕಾರ್ಪಿಯೋ 4X4:
ಸದ್ಯ ಮಹೀಂದ್ರಾ ಸ್ಕಾರ್ಪಿಯೋ SUV ಈ ಪಟ್ಟಿಯಲ್ಲಿ ಅತ್ಯಂತ ಸಾಮಾನ್ಯ ವಾಹನವಾಗಿರಬಹುದು. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು, ಮೊದಲ ಭಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಇದೇ ವಾಹನವನ್ನು ಬಳಕೆ ಮಾಡಿದ್ದರು. ಪ್ರಧಾನಿಗಳ ಸುರಕ್ಷತೆಯ ದೃಷ್ಟಿಯಿಂದ ಈ ವಾಹನವನ್ನು ಮರುವಿನ್ಯಾಸ ಮಾಡಲಾಗಿದೆ. ಈ ಮಹೀಂದ್ರಾ ಸ್ಕಾರ್ಪಿಯೋ ಅನೇಕ ಸುತ್ತಿನ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟದಿಂದಲೂ ತನ್ನ ಪ್ರಯಾಣಿಕರನ್ನು ರಕ್ಷಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು, ಬಳಸುವ ಕಾರುಗಳ ಪೈಕಿ, ಹೊಸ ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಬಹುಶಃ ಅವರಿಗೆ ಅತೀ ಹೆಚ್ಚು ಭದ್ರತೆ ಒದಗಿಸುವ ವಾಹನಗಳಲ್ಲಿ ಅತ್ಯುತ್ತಮ ಹಾಗೂ ಸುರಕ್ಷಿತವಾಗಿದೆ ಎಂದು ಹೇಳಬಹುದು. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ. ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications