ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ್

ಬೆಂಗಳೂರು ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಅದರಲ್ಲಿಯು ಬೆಂಗಳೂರಿನಲ್ಲಿ ಮಳೆ ಬಂದರೆ ಪರಿಸ್ಥಿತಿ ಇನ್ನೂ ಚಿಂತಾಜನಕ. ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಬೆಂಗಳೂರಿನ ಟ್ರಾಫಿಕ್‌ನಿಂದಾಗಿ ಅನೇಕರು ಸರಿಯಾದ ಸಮಯಕ್ಕೆ ಕಚೇರಿ ತಲುಪಲಾಗದೆ ಮನೆ ತಲುಪಲಾಗದೆ ಸಂಕಷ್ಟ ಎದುರಿಸಿದ್ದಾರೆ. ಮತ್ತೆ ಕೆಲವರಿಗೆ ತುರ್ತು ಸಮಯದಲ್ಲಿ ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಂಡ ಕೆಲವು ಉದಾಹರಣೆಗಳು ಕೂಡ ಇದೆ. ಜಗತ್ತಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆಗಳಿಂದ ತತ್ತರಿಸುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇಂತಹ ದಟ್ಟ ಟ್ರಾಫಿಕ್‌ ಸಮಸ್ಯೆಯ ನಡುವೆಯೂ ವೈದ್ಯರೊಬ್ಬರು ಮಾಡಿದ ಕಾರ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ವೈದ್ಯರನ್ನು ವೈದ್ಯೋ ನಾರಾಯಣ ಹರಿ ಅಂತಾರೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವುದು. ಒಬ್ಬ ಆದರೆ ಕೆಲವು ವೈದ್ಯರು ಹಣದ ಹಿಂದೆ ದುರಾಸೆಗೆ ಬಿದ್ದು, ರೋಗಿಯ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಾರೆ. ಕೊರೋನಾ ಮಾಹಾಮಾರಿ ಅಬ್ಬರದ ಸಮಯದಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿ ವೈದ್ಯಲೋಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಇದೀಗ ವೈದ್ಯರೊಬ್ಬರು ಟ್ರಾಫಿಕ್ ನಲ್ಲಿ ರೋಗಿಗೆ ಆಪರೇಷನ್ ಮಾಡಲು ಬರೋಬ್ಬರಿ ಮುಕ್ಕಾಲು ಗಂಟೆ ಓಡಿದ ಘಟನೆಯೊಂದು ವರದಿಯಾಗಿದೆ, ಡಾ. ಗೋವಿಂದ ನಂದಕುಮಾರ್. ಇವರು ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟೆರೋಲಜಿ ತಜ್ಞ ವೈದ್ಯರು. ಮಣಿಪಾಲ್ ಆಸ್ಪತ್ರೆ ತಲುಪಲು ಇವರು ಕಳೆದ ತಿಂಗಳ 30ರಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಆದರೆ, ಧಾರಕರ ಮಳೆಯಿಂದ ನೀರು ನಿಂತ ಪರಿಣಾಮ ಸರ್ಜಾಪುರ - ಮಾರತ್‌ ಹಳ್ಳಿ ಬಳಿ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು. ಟ್ರಾಫಿಕ್ ಜಾಮ್‌ಗೆ ಕುಖ್ಯಾತವಾಗಿದೆ ಈ ಪ್ರದೇಶ. ಡಾ. ಗೋವಿಂದ ನಂದಕುಮಾರ್ ಅವರಿಗಾಗಿ ಆಸ್ಪತ್ರೆಯಲ್ಲಿ ರೋಗಿಗಳು ಎದುರು ನೋಡುತ್ತಿದ್ದರು. ಅದರಲ್ಲೂ ಒಬ್ಬರಿಗೆ ಗಾಲ್ ಬ್ಲಾಡರ್ ಆಪರೇಷನ್ ಆಗಬೇಕಿತ್ತು.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಆ ದಿನದ ಮೊದಲ ರೋಗಿಯೇ ಗಾಲ್ ಬ್ಲಾಡರ್ ಆಪರೇಷನ್ಗಾಗಿ ಡಾ. ಗೋವಿಂದ ನಂದಕುಮಾರ್ ಅವರನ್ನು ಕಾಯುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ಅದಾಗಲೇ ಆಪರೇಷನ್‌ಗೆ ಎಲ್ಲ್ಆ ಸಿದ್ದತೆ ಮಾಡಿಕೊಂಡಿದ್ದರು. ಮೊದಲ ಆಪರೇಷನ್ ಬಳಿಕ ಇನ್ನೂ ಕೆಲವು ಆಪರೇಷನ್‌ಗಳಿಗಾಗಿ ರೋಗಿಗಳು ಸಾಲುಗಟ್ಟಿ ನಿಂತಿದ್ದರು. ಟ್ರಾಫಿಕ್ ಜಾಮ್‌ನಿಂದಾಗಿ ವೈದ್ಯರು ಆಸ್ಪತ್ರೆ ತಲುಪಲು ವಿಳಂಬವಾದರೆ ಬಹಳಷ್ಟು ರೋಗಿಗಳಿಗೆ ತೊಂದರೆ ಆಗುತ್ತಿತ್ತು.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಹೀಗಾಗಿ, ಇನ್ನು ತಡ ಮಾಡಿದರೆ ಕಷ್ಟ ಎಂದು ಅರಿತ ವೈದ್ಯರು ಟ್ರಾಫಿಕ್ ಜಾಮ್‌ನಿಂದ ಕೂಡಿದ್ದ ರಸ್ತೆಯಲ್ಲಿ ಕಾರಿನಿಂದ ಇಳಿದು ಆಸ್ಪೆತ್ರೆಗೆ ಓಡತೊಡಗಿದರು. ಆ ಸ್ಥಳದಿಂದ ಆಸ್ಪತ್ರೆ 3 ಕಿ. ಲೋ. ಮೀಟರ್ ದೂರವಿತ್ತು. ಆದರೂ ವೈದ್ಯರು ಓಡತೊಡಗಿದರು. ಮುಕ್ಕಾಲು ಗಂಟೆ ನಿರಂತರವಾಗಿ ಓಡುತ್ತಾ, ನಡೆಯುತ್ತಾ, ಕೊನೆಗೂ ಆಸ್ಪತ್ರೆ ತಲುಪಿ ಆಪರೇಷನ್‌ಗಳನ್ನು ನಡೆಸಿದರು.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಮಾಧ್ಯಮಗಳ ಜೊತೆ ಡಾ. ಗೋವಿಂದ ನಂದಕುಮಾರ್ ಮಾತನಾಡಿ, ಕನ್ನಿಂಗ್ ಹ್ಯಾಮ್ ರಸ್ತೆ, ಸರ್ಜಾಪುರ ಮಾರ್ಗವಾಗಿ ನಾನು ಆಸ್ಪತ್ರೆ ತಲುಪಬೇಕಿತ್ತು. ಆದರೆ ಮಳೆಯಿಂದಾಗಿ ನೀರು ನಿಂತ ಪರಿಣಾಮ, ಟ್ರಾಫಿಕ್ ಜಾಮ್ ಕಿಲೋಮೀಟರ್.ಗಟ್ಟಲೆ ಇತ್ತು. ಪರಿಸ್ಥಿತಿ ಹೀಗಿರುವಾಗ ನಾನು ಆಸ್ಪತ್ರೆ ತಲುಪಲು ಗಂಟೆಗಟ್ಟಲೆ ತಡ ಆಗಬಹುದು ಎಂದು ಅರಿತು ನಡೆಯುತ್ತಾ, ಓಡುತ್ತಾ ಸಾಗಿದೆ. ನನಗೆ ಸಮಯ ವ್ಯರ್ಥ ಮಾಡೋದು ಇಷ್ಟ ಇರಲಿಲ್ಲ. ಏಕೆಂದರೆ ಆಪರೇಷನ್ ಆಗುವವರೆಗೂ ರೋಗಿಗಳು ಊಟ ಮಾಡಲು ಅವಕಾಶ ಇರಲಿಲ್ಲ. ಅವರಿಗೆ ತೊಂದರೆ ಕೊಡಲು ನನಗೆ ಇಷ್ಟ ಇರಲಿಲ್ಲ ಎಂದು ಹೇಳಿದ್ದಾರೆ.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಬೆಂಗಳೂರಿನಲ್ಲಿ ವಿನೂತನ ತಂತ್ರಜ್ಞಾನ ಬಳಿಸಿಕೊಂಡು ಟ್ರಾಫಿಕ್ ಕಡಿಮೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಒಂದೇ ಫ್ಲೈವರ್ ಮೇಲೆ, ಮೂರು ಫ್ಲೋರ್ ಮಾಡಿ, ಅಲ್ಲಿ ಮೆಟ್ರೋ, ರೋಡ್, ಎಲಿವೇಟೆಡ್ ರೋಪ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ವಿನೂತನ ಟೆಕ್ನಾಲಜಿ ಮೂಲಕ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರು ಮೈಸೂರು ರಸ್ತೆ ಕಾಮಗಾರಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಬೇಗ ಮುಗಿಯಬೇಕು, ಡ್ರೈನೇಜ್ ಸಿಸ್ಟಮ್ ಸರಿಪಡಿಸಲು ಸೂಚಿಸಲಾಗಿದೆ. ಹೊಸ ಹೈವೇ ಘೋಷಣೆಗಳ ಬಗ್ಗೆ ಸಕಾರಾತ್ಮಕ ಚರ್ಚೆಯಾಗಿದೆ. ನಿತಿನ್ ಗಡ್ಕರಿಯವರ ಜೊತೆ ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರು ಹಾಗೂ ಬೆಂಗಳೂರು ಸುತ್ತಾ ಮುತ್ತಲಿನ ರಸ್ತೆ ಬಗ್ಗೆ ಅಥಾರಿಟಿ ರಚಿಸುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಹಲವು ಸ್ಥಳಗಳಲ್ಲಿ ರೋಪ್ ವೇ ಮೂಲಕ ಸಂಚಾರಿಸುವ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಅದರ ತಂತ್ರಜ್ಞಾನ ಇದೆ. ಅದನ್ನು ಬೆಂಗಳೂರಿಗೆ ಯಾವ ರೀತಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಟ್ರಾಫಿಕ್ ಜಾಮ್: ಆಸ್ಪತ್ರೆಯಲ್ಲಿ ಆಪರೇಷನ್‌ಗೆ ಕಾಯುತ್ತಿದ್ದ ರೋಗಿಗಾಗಿ 3 ಕಿ.ಮೀ ಓಡಿಬಂದ ಡಾಕ್ಟರ

ಬೆಂಗಳೂರಿನಲ್ಲಿ ಕಡಿಮೆ ಭೂಮಿಯನ್ನು ಬಳಕೆ ಮಾಡಿಕೊಂಡು ಒಂದೇ ಜಾಗದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಬೆಂಗಳೂರಿನಲ್ಲಿ ಮೂರು ಫ್ಲೋರ್​ಗಳಾಗಿ ಮಾಡಿಕೊಂಡು ಅದರ ಅಡಿಯಲ್ಲಿ ಸಾರಿಗೆ ಸಂಪರ್ಕ ಸಾಧಿಸಲು ಚಿಂತನೆಯಾಗಿದೆ. ಈ ಬಗ್ಗೆ ಟೆಕ್ನಿಕಲ್ ತಂಡದ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Most Read Articles

Kannada
English summary
Doctor stuck in traffic leaves car runs 3 km to the hospital to perform a surgery details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X