ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

By Nagaraja

ಜನಪ್ರಿಯ ಸುದ್ದಿ ವಾಹಿನಿ ಟೈಮ್ಸ್ ನೌ ನಲ್ಲಿ ಪ್ರಸಾರವಾಗುವ 'ದಿ ನ್ಯೂಸ್ ಹವರ್ ಡಿಬೇಟ್' ಕಾರ್ಯಕ್ರಮದಲ್ಲಿ ತನ್ನ ವಾಕ್ ಚಾತುರ್ಯ ಮೆರೆಯುವ ಮೂಲಕ ಕುಳಿತಲ್ಲಿಂದಲೇ ರಾಜಕಾರಣಿಗಳಿಗೆ ನೀರು ಕುಡಿಸುವ ಹೆಸರಾಂತ ನಿರೂಪಕ ಹಾಗೂ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ, ಇತ್ತೀಚೆಗಿನ ಸ್ವಲ್ಪ ಸಮಯದಿಂದ ಪದೇ ಪದೇ ವಿವಾದಕ್ಕೆ ಸಿಲುಕುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತೀಯ ತಂಡವನ್ನು ಟೀಕಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದ್ದ ಅರ್ನಾಬ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಚರ್ಚಾ ವೇಳೆಯಲ್ಲಿ ನ್ಯಾಯ, ನೀತಿ ಹೇಳಿಕೊಡುವ ಅರ್ನಾಬ್ ತಾವೇ ಅಮಿತ ವೇಗದ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದರೇ?

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಭಾನುವಾರದಂದು ಮುಂಬೈನಲ್ಲಿ ನಡೆದ ಈ ಘಟನೆಯು ಫೇಸ್ ಬುಕ್ ಹಾಗೂ ಟ್ವಿಟರ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. 3.43 ಕೋಟಿ ರು.ಗಳಷ್ಟು (ಎಕ್ಸ್ ಶೋ ರೂಂ) ಬೆಲೆ ಬಾಳುವ ಲಂಬೋರ್ಗಿನಿ ಕಾರು ಪಕ್ಕದಲ್ಲಿ ನಿಂತುಕೊಂಡಿರುವ ಅರ್ನಾಬ್ ಟ್ರಾಫಿಕ್ ಪೊಲೀಸರಲ್ಲಿ ಮಾತನಾಡುವ ದೃಶ್ಯಗಳು ಭಾರಿ ಪ್ರಚಾರ ಗಿಟ್ಟಿಸಿತ್ತು.

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಈ ಬಗ್ಗೆ ಟ್ವೀಟ್ ಮಾಡಿದ ಇನ್ನು ಕೆಲವರು ಅರ್ನಾಬ್ ಅವರನ್ನು ಗೇಲಿ ಮಾಡ ತೊಡಗಿದರು. "ಅಮಿತ ವೇಗದಲ್ಲಿ ಕಾರು ಚಾಲನೆ ಮಾಡಿದ ಅರ್ನಾಬ್; ಯಾತಕ್ಕಾಗಿ ಹೀಗೆ ಮಾಡಿದಿರಿ ಇಡೀ ದೇಶವೇ ತಿಳಿಯಲು ಬಯಸುತ್ತದೆ (The nation wants to know)"? ಎಂದೆಲ್ಲ ಟೀಕಿಸಿದರು.

ಘಟನೆಯ ಸತ್ಯಾಂಶ

ಘಟನೆಯ ಸತ್ಯಾಂಶ

ಆದರೆ ನಿಜ ಸಂಗತಿ ಏನೆಂದರೆ ಅರ್ನಾಬ್ ಬಳಿ ಯಾವುದೇ ದುಬಾರಿ ಲಂಬೋರ್ಗಿನಿ ಕಾರಿಲ್ಲ. ಭಾನುವಾರ ನಡೆದ ಘಟನೆಯಲ್ಲಿ ಅರ್ನಾಬ್ ಓರ್ವ ಪ್ರಜ್ಞಾವಂತ ನಾಗರಿಕನ ಪಾತ್ರ ವಹಿಸಿದ್ದಾರೆ ಅಷ್ಟೇ. ಮುಂದಕ್ಕೆ ಓದಿ...

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಭಾನುವಾರ ಬಾಂದ್ರಾ-ವರ್ಲಿ ಸೀ ಲಿಂಕ್ ಪ್ರದೇಶದಲ್ಲಿ ಚಾಲಕರೋರ್ವರು ಲಂಬೋರ್ಗಿನಿ ಕಾರನ್ನು ವೇಗವಾಗಿ ಓಡಿಸುತ್ತಿದ್ದನ್ನು ಗಮನಿಸಿದ್ದ ಅರ್ನಾಬ್ ಪೊಲೀಸರಿಗೆ ದೂರು ನೀಡಿದ್ದರು.

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಇದಾದ ಬೆನ್ನಲ್ಲೇ ಘಟನೆಗೆ ಸಂಬಂಧಪಟ್ಟಂತೆ ಕಾರು ಚಾಲಕ ಸಮ್ವಿತ್ ರಮೇಶ್ ತಾರಾ ಎಂಬವರನ್ನು ಟ್ರಾಫಿಕ್ ಪೊಲೀಸ್ ಬಂಧಿಸಿದ್ದಾರೆ. ಬಳಿಕ ಚಾಲಕ ಜಾಮೀನು ಪಡೆಯಲು ಯಶಸ್ವಿಯಾಗಿದ್ದಾನೆ. ಅಚ್ಚರಿಯೆಂಬಂತೆ ಇದು ಹೈ ಎಂಡ್ ಡೀಲರ್ ಶಿಪ್ ಗೆ ಸೇರಿದ ಕಾರಾಗಿದ್ದು ಸಮ್ವಿತ್ ಟೆಸ್ಟ್ ಡ್ರೈವ್ ಮಾಡಲು ಕಾರನ್ನು ತೆಗೆದುಕೊಂಡಿದ್ದರು.

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಬಳಿಕ ಈ ಬಗ್ಗೆ ಹೇಳಿಕೆ ಕೊಟ್ಟಿರುವ ಅರ್ನಾಬ್, "ಭಾನುವಾರ ಪೊಲೀಸ್ ದೂರು ದಾಖಲಿಸುವುದಕ್ಕಾಗಿ ನಾಲ್ಕು ತಾಸುಗಳಷ್ಟು ಸಮಯವನ್ನು ವ್ಯಯ ಮಾಡಿದ್ದೇನೆ" ಎಂದಿದ್ದಾರೆ.

ಅಷ್ಟಕ್ಕೂ ಅರ್ನಾಬ್ ಕಾರು ಯಾವುದು?

ಅಷ್ಟಕ್ಕೂ ಅರ್ನಾಬ್ ಕಾರು ಯಾವುದು?

ಇಷ್ಟೆಲ್ಲ ಓದಿದ ಬಳಿಕ ಅಷ್ಟಕ್ಕೂ ಬಳಿಯಿರುವ ಕಾರು ಯಾವುದು ಎಂಬ ಪ್ರಶ್ನೆ ಮೂಡಬಹುದು. ಅವರು 2005ರ ಟೊಯೊಟಾ ಕರೊಲ್ಲಾ ಆಲ್ಟೀಸ್ ಕಾರನ್ನು ಹೊಂದಿದ್ದಾರೆ.

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಪ್ರಸ್ತುತ ದೇಶದಲ್ಲಿ ಟೊಯೊಟಾ ಕರೊಲ್ಲಾ ಆಲ್ಟೀಸ್, ಐದು ಪೆಟ್ರೋಲ್ ಹಾಗೂ ನಾಲ್ಕು ಡೀಸೆಲ್ ಸೇರಿದಂತೆ ಒಟ್ಟು ಒಂಬತ್ತು ವೆರಿಯಂಟ್ ಗಳಲ್ಲಿ ಲಭ್ಯವಿರುತ್ತದೆ.

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಈ ಸೆಡಾನ್ ಕಾರು 1798ಸಿಸಿ 4 ಸಿಲಿಂಡರ್ ಪೆಟ್ರೋಲ್ ಮತ್ತು 1364 ಸಿಸಿ 4 ಸಿಲಿಂಡರ್ ಡೀಸೆಲ್ ವೆರಿಯಂಟ್ ನಿಂದ ನಿಯಂತ್ರಿಸಲ್ಪಡುತ್ತದೆ. ಇವೆರಡು ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಪೆಟ್ರೋಲ್ ಮಾದರಿಯು ಏಳು ಸ್ಪೀಡ್ ಆಟೋಮ್ಯಾಟಿಕ್ ಸಹ ಹೊಂದಿದೆ.

ಓವರ್ ಸ್ಪೀಡಿಂಗ್ ಬಲೆಗೆ ಸಿಕ್ಕಿ ಬಿದ್ದರೇ ಅರ್ನಾಬ್ ?

ಇನ್ನು ಟೊಯೊಟಾ ಕರೊಲ್ಲಾ ಆಲ್ಟೀಸ್ ಬೇಸ್ ಮಾಡೆಲ್ ಬೆಂಗಳೂರು ಆನ್ ರೋಡ್ ಬೆಲೆ 14.89 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ 16.20 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.


More from DriveSpark

Article Published On: Wednesday, April 1, 2015, 10:44 [IST]
English summary
Does Arnab Goswami owns a Lamborghini?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+