ಕ್ಯಾಬ್‌ನಲ್ಲಿ ಸ್ವತಃ 100ಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣಿಸಿ, ತನ್ನ ಮಾಲೀಕನನ್ನು ಸೇರಿದ ಕಿಲಾಡಿ ಶ್ವಾನ!

ಮಾನವ ಹಾಗೂ ಶ್ವಾನಗಳ ನಡುವೆ ಅವಿನಾಭಾವ ಸಂಬಂಧವಿದ್ದು, ಅವುಗಳ ಬುದ್ದಿವಂತಿಕೆಗೆ ಸರಿ ಸಾಟಿಯೇ ಇಲ್ಲ.. ಶ್ವಾನಗಳ ಕ್ಯೂಟ್ ಲುಕ್ ಸಣ್ಣವರಿಂದ ದೊಡ್ಡವರ ತನಕ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇಲ್ಲೊಂದು 'ಸ್ಮಾರ್ಟ್ ಶ್ವಾನ' ತನ್ನ ಮಾಲೀಕನನ್ನು ಸೇರಲು ಕ್ಯಾಬ್‌ನಲ್ಲಿ ಸ್ವತಃ 161 ಕಿ.ಮೀ ಪ್ರಯಾಣಿಸಿದೆ.

ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ. ದೂರದ ಇಂಗ್ಲೆಂಡ್ ದೇಶದಲ್ಲಿ. ಈ ಶ್ವಾನದ ಬುದ್ದಿವಂತಿಕೆಯನ್ನು ಹಲವು ಮಂದಿ ಮೆಚ್ಚಿಕೊಳ್ಳುತ್ತಿದ್ದಾರೆ. 'ಕ್ಯಾವಾಪೂ' ತಳಿಯ ಮೂರು ವರ್ಷದ 'ರಾಲ್ಫ್' ಹೆಸರಿನ ಮುದ್ದಿನ ಶ್ವಾನವೊಂದು ಈ ಸಾಹನವನ್ನು ಮಾಡಿದ್ದು, ಸದ್ಯ ತನ್ನ ಮಾಲೀಕನ್ನು ಸೇರಿಕೊಂಡಿದೆ. ಕೆಲವರು, ಇದನ್ನು ಕಿಲಾಡಿ ಶ್ವಾನ ಎನ್ನುತ್ತಿದ್ದು, ಆಲೋಚನ ಸಾಮರ್ಥ್ಯ ಕಂಡು ಬೆರಗಿದಿದ್ದಾರೆ. ಅಲ್ಲದೆ, ಶ್ವಾನ ಪ್ರಿಯನಾದ ಕ್ಯಾಬ್‌ ಚಾಲಕನ ಶ್ರಮವನ್ನು ಶ್ಲಾಘಿಸಿದ್ದಾರೆ.

ಕ್ಯಾಬ್‌ನಲ್ಲಿ ಸ್ವತಃ 100ಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣಿಸಿ, ತನ್ನ ಮಾಲೀಕನನ್ನು ಸೇರಿದ ಕಿಲಾಡಿ ಶ್ವಾನ!

ಸೋಮವಾರ ಬೆಳಗ್ಗೆ ತನ್ನ ಮಾಲೀಕ ಜಾರ್ಜಿಯಾ ಕ್ರೂವ್ ಅವರೊಂದಿಗೆ 'ರಾಲ್ಫ್' ವಾಕಿಂಗ್ ಗೆ ತೆರಳಿತ್ತು. ಆದರೆ, ಕ್ರೂವ್ ಬೇರೆಯವರ ಜೊತೆ ಮಾತನಾಡುತ್ತಾ ನಿಂತರು. ಅಷ್ಟರಲ್ಲಿ ಚುರುಕು ಬುದ್ದಿಯ ಶ್ವಾನ ಬೇರೆ ಕಡೆ ಹೋಗಿ, ದಾರಿ ತಪ್ಪಿದೆ. ಬಳಿಕ, ಯಾರಾದರೂ ಸಹಾಯ ಮಾಡುತ್ತಾರೆಯೇ ಎಂದು ರಸ್ತೆಗೆ ಬಂದಿದ್ದು, ಅಲ್ಲೇ ಮ್ಯಾಂಚೆಸ್ಟರ್‌ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಕ್ಯಾಬ್‌ ಹತ್ತಿದೆ. ಚಾಲಕ ಹಾಗೂ ಪ್ರಯಾಣಿಕರು ಶ್ವಾನ ಪ್ರಿಯರಾಗಿದ್ದರಿಂದ ಇದಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ನೀಡಿಲ್ಲ.

ಅಲ್ಲಿಂದ ನೋಡಿ.. ಈ ಶ್ವಾನದ ನಿಜವಾದ ಪ್ರಯಾಣ ಆರಂಭವಾಗಿದೆ. ಕ್ಯಾಬ್‌ ಚಾಲಕ, ಅದರ ಮಾಲೀಕರ ವಿವರವನ್ನು ತಿಳಿಯಲು ಶ್ವಾನವನ್ನು ಪರೀಕ್ಷಿಸಿದ್ದಾನೆ. ಆದರೆ, ಅದು ಪ್ರಯೋಜನವಾಗಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡ ಚಾಲಕ, ಮೊದಲು ಕ್ಯಾಬ್‌ ನಲ್ಲಿದ್ದ ಪ್ರಯಾಣಿಕರನ್ನು 160 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಬಿಡಲು ನಿರ್ಧರಿಸಿ.. ಆ ಬಳಿಕ, ಶ್ವಾನ ಮಾಲೀಕನನ್ನು ಹುಡುಕುವ ಪ್ರಯತ್ನ ಮಾಡೋಣವೆಂದು ತೀರ್ಮಾನಿಸಿದ್ದಾನೆ. ಇತ್ತ ಆ ಶ್ವಾನ ಪತ್ತೆಗೆ ಮಾಲೀಕ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದಾನೆ.

ಸಮೀಪದ ಗ್ರೆಸ್‌ಫೋರ್ಡ್ ಕ್ವಾರಿಯಲ್ಲಿರುವ ಕಾಡಿನಲ್ಲಿ ಮೂರು ಗಂಟೆಗಳ ಕಾಲ ನಿರಂತರವಾಗಿ ಶ್ವಾನವನ್ನು ಹುಡುಕಿ ಸುಸ್ತಾಗಿ ಕಡೆಗೊಂದು ಐಡಿಯಾ ಮಾಡಿದ್ದಾನೆ. 'ರಾಲ್ಫ್' ಹೆಸರಿನ ಮುದ್ದಿನ ಶ್ವಾನವೊಂದು ಬೆಳಗ್ಗೆ ಕಾಣಿಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವಿಚಾರ ಕ್ಯಾಬ್ ಚಾಲಕ ಸ್ನೇಹಿತನಿಗೆ ಗೊತ್ತಾಗಿದೆ. ಮಾಲೀಕ ಸಮೀಪ ಆ ಶ್ವಾನವನ್ನು ಸೇರಿಸಲು ತನ್ನ ಸ್ನೇಹಿತ ಮಾಡುತ್ತಿರುವ ಪ್ರಯತ್ನವನ್ನು ಕಂಡಿದ್ದ ಆತ, ಶ್ವಾನದ ಮಾಲೀಕನಿಗೆ ನಡೆದಿದ್ದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾನೆ. ನಂತರ, ರಾಲ್ಫ್ ತನ್ನ ಮಾಲೀಕನನ್ನು ಸೇರಿದೆ.

ಇವತ್ತು ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದಿದೆ ಅಂದರೆ ಕಳೆದುಕೊಂಡು ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಬಹುದು. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆದಾಗ ಮಾಲೀಕರು, ತಮ್ಮ ಶ್ವಾನಗಳನ್ನು ಹುಡುಕಲು ಅವುಗಳಿಗೆ ಜಿಪಿಎಸ್ ಟ್ಯಾಗ್ ಅಳವಡಿಕೆ ಮಾಡಿದರೆ ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾ ತುಂಬಾ ವೇಗವಾಗಿದ್ದು, ಅಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಶ್ವಾನಗಳನ್ನು ಹುಡುಕಬಹುದು. ಇಲ್ಲಿ ಮಾಲೀಕ ಕೂಡ ಮಾಡಿದ್ದು, ಇದೇ ಐಡಿಯವನ್ನೇ.

ಶ್ವಾನದ ಕುತ್ತಿಗೆಗೆ ಮೈಕ್ರೋಚಿಪ್ ಅಳವಡಿಸುವ ಮೂಲಕ ಅವುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಮೊದಲು ಸಂಬಂಧಿಸಿದ ಮೈಕ್ರೋಚಿಪ್ ಕಂಪನಿಗೆ ಕರೆ ಮಾಡಿ. ಶ್ವಾನಕ್ಕೆ ಆಶ್ರಯ ನೀಡಿದವರೂ ಮೈಕ್ರೋಚಿಪ್ ಐಡಿಯನ್ನು ಸ್ಕ್ಯಾನ್ ಮಾಡಬಹುದು. ಜೊತೆಗೆ ಮೈಕ್ರೋಚಿಪ್ ಡೇಟಾಬೇಸ್‌ನಲ್ಲಿ ಮಾಲೀಕರನ್ನು ಹುಡುಕಲು ಪ್ರಯತ್ನಿಸಬಹುದು. ಕಂಪನಿ ಹಾಗೂ ಆಶ್ರಯ ನೀಡಿದವರ ನಡುವೆ ಸಂಪರ್ಕ ಏರ್ಪಟ್ಟು, ಕಳೆದುಹೋದ ಶ್ವಾನವನ್ನು ಮಾಲೀಕರಿಗೆ ತಲುಪಿಸಬಹುದು. ಇದು, ಪ್ರಯೋಜನವಾಗದಿದ್ದರೆ ಅಂತಿಮವಾಗಿ ಟಿವಿ ಹಾಗೂ ಪತ್ರಿಕೆಗಳಲ್ಲಿ ಶ್ವಾನ ಕಳೆದು ಹೋಗಿದೆ ಎಂದು ಜಾಹೀರಾತು ನೀಡಬಹುದು.

ಈ ಘಟನೆಯಲ್ಲಿ ಕ್ಯಾಬ್‌ ಚಾಲಕನ ಶ್ವಾನಗಳ ಪ್ರೀತಿಯನ್ನು ಮೆಚ್ಚಲೇಬೇಕು. ಜೊತೆಗೆ ಮೂರು ವರ್ಷದ ಈ ಪುಟ್ಟ ನಾಯಿಯ ಬುದ್ದಿವಂತಿಕೆಯನ್ನುಕೊಂಡಾಡಲೇ ಬೇಕು. ಅದು ಸಮೀಪವಿದ್ದ ಅರಣ್ಯಕ್ಕೂ ಹೋಗದೆ, ಯಾರಾದರೂ ಸಿಗಬಹುದು ಎಂದು ರಸ್ತೆಗೆ ಬಂದಿದ್ದು, ಅಲ್ಲಿ ಕ್ಯಾಬ್‌ ಚಾಲಕನಿಗೆ ಸಿಕ್ಕಿ, ತನ್ನ ಮಾಲೀಕನನ್ನು ಸೇರಲು ಯಶಸ್ವಿಯಾಗಿದೆ. ಈ ಕುರಿತಂತೆ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಮೆಚ್ಚಿಕೊಂಡಿದ್ದು, ಈ ಬಗ್ಗೆ ನಿಮಗೇನು ಅನಿಸಿಕೆಯನ್ನು ಕಾಮೆಂಟ್ ಮಾಡಿರಿ.

Article Published On: Thursday, February 16, 2023, 19:00 [IST]
English summary
Dog travels 100 km in cab after getting lost during details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+