ನಾವೇ ಉಚಿತ ಕ್ಯಾಬ್ ಕೊಡ್ತೀವಿ, ಕುಡಿದು ವಾಹನ ಓಡಿಸಬೇಡಿ ಅಂತಿದೆ ಸರ್ಕಾರ!

ಪ್ರಪಂಚದಾದ್ಯಂತ ಕುಡಿದು ವಾಹನ ಚಾಲನೆ ಮಾಡುವುದನ್ನು ನಿಷೇದಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು, ನಾವು ಮಾತ್ರವಲ್ಲದೇ ಇತರ ವಾಹನ ಸವಾರರನ್ನು ಕೂಡ ಅಪಾಯಕ್ಕೆ ದೂಡಿದಂತಾಗುತ್ತದೆ. ಹಾಗಾಗಿ ಕುಡಿದು ವಾಹನ ಚಲಾಯಿಸುವುದು ಬೇಡ ನಿಮ್ಮ ಆರೋಗ್ಯವೇ ನಮಗೆ ಮುಖ್ಯವೆಂದು ಸರ್ಕಾರ ಉಚಿತ ಕ್ಯಾಬ್ ಒದಗಿಸುತ್ತಿದೆ.

ಹೌದು ಇದು ನಿಜ, ಆದ್ರೆ ಇದು ಭಾರತದಲ್ಲಿ ಅಲ್ಲ' ಬದಲಾಗಿ ಇಟಲಿಯಾಲ್ಲಿ. ಭಾರತದಲ್ಲಿ ಇಂತಹ ನಿರ್ಧಾರಗಳನ್ನು ತಗೆದುಕೊಳ್ಳುವುದಿಲ್ಲ ಬಿಡಿ, ಏಕೆಂದರೆ ನಮ್ಮ ಸರ್ಕಾರಗಳಿಗೆ ಆದಾಯವೂ ಬೇಕು ಜೊತೆ ಜೊತೆಗೆ ಸಾರ್ವಜನಿಕರ ಆರೋಗ್ಯವೂ ಮುಖ್ಯ ಎಂದು ಹೇಳುತ್ತಲೇ ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಂದ ದಂಡ ವಸೂಲಿ ಮಾಡುತ್ತಾರೆ.

dont-drive-drunk-govt-provide-free-cabs

ಕುಡುಕರಿಗೆ ಉಚಿತ ಕ್ಯಾಬ್ ಸೇವೆಗಳನ್ನು ನೀಡಲು ಇಟಲಿ ಸರ್ಕಾರವು ಪ್ರಾಯೋಗಿಕ ಯೋಜನೆಯನ್ನು ಹೊರತರಲು ಹೊರಟಿದೆ. ಇದು ಕೇವಲ ವಾಹನಗಳನ್ನು ಹೊಂದಿರುವವರಿಗೆ ಮಾತ್ರವಲ್ಲದೆ, ಎಲ್ಲಾ ಹಣ ಕುಡಿತಕ್ಕೆ ಖರ್ಚಾಗಿದೆ ಕ್ಯಾಬ್‌ಗೆ ಏನೂ ಉಳಿದಿಲ್ಲ ಎನ್ನುವವರಿಗೂ ಚಿಂತೆ ಮಾಡಬೇಡಿ, ನಾವೇ ಉಚಿತವಾಗಿ ಕ್ಯಾಬ್ ನೀಡುತ್ತೇವೆ. ನೆಮ್ಮದಿಯಾಗಿ ಮನೆಗೆ ಹೋಗಿ ಎಂದು ಇಲ್ಲಿನ ಸರ್ಕಾರ ಹೇಳುತ್ತಿದೆ.

ಅಂದರೇ ವಾಹನವಿಲ್ಲದವರು ಕುಡಿದು ಎಲ್ಲೆಂದರಲ್ಲಿ ಬೀಳುವ ಬದಲಿಗೆ ಮನೆಗೆ ಕ್ಯಾಬ್‌ನಲ್ಲಿ ಕಳುಹಿಸಿಕೊಡುವುದು ಉತ್ತಮ ಎಂಬುದು ಸರ್ಕಾರದ ಅಭಿಪ್ರಯಾವಾಗಿದೆ. ವಿಶ್ವದೇಶಗಳಿಗೆ ಮುಖ್ಯ ಆದಾಯಗಳಲ್ಲಿ ಮದ್ಯ ಕೂಡ ಪ್ರಮೂಖವಾಗಿದೆ. ಹಾಗಾಗಿ ಮದ್ಯವನ್ನು ಹೇಗೂ ನಿಷೇಧಿಸಲು ಸಾಧ್ಯವಿಲ್ಲ. ಜೊತೆಗೆ ಅಪಘಾತಗಳನ್ನು ತಡೆಯಲು ಇದು ಪರಿಣಾಮಕಾರಿಯಾಗಲಿದೆ ಎಂದು ನಂಬಲಾಗಿದೆ.

dont-drive-drunk-govt-provide-free-cabs

ಅತಿಯಾಗಿ ಮದ್ಯ ಸೇವನೆ ಮಾಡುವುದು ದೇಹಕ್ಕೆ ಹಾನಿಕಾರಕ, ಆದರೆ ಇದರ ಪ್ರಭಾವದಿಂದ ಚಾಲಕನಿಗೆ ಮಾತ್ರವಲ್ಲದೆ ಸಹ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಹೆಚ್ಚು ಅಪಾಯಕಾರಿ. ಇಟಲಿಯಲ್ಲಿ ಕೂಡ ಕುಡಿದು ವಾಹನ ಚಲಾಯಿಸುವುದು ಕಾನೂನುಬಾಹಿರ, ಈ ದೇಶ ಕೂಡ ಹಲವಾರು ಅಪಘಾತಗಳು ಮತ್ತು ಆರೋಪಿಗಳನ್ನು ಹೊಂದಿದ್ದರೂ ಇದೀಗ ಅದನ್ನು ಕಡಿಮೆ ಮಾಡಲು ಈ ಹೊಸ ಮಾರ್ಗವನ್ನು ಕಂಡುಕೊಂಡಿದೆ.

ಅದರಂತೆ, ಇಲ್ಲಿನ ಸರ್ಕಾರವು ಹೆಚ್ಚಾಗಿ ಕುಡಿದವರಿಗೆ ಉಚಿತ ಕ್ಯಾಬ್ ಸೇವೆಯನ್ನು ಹೊರತರಲು ಯೋಜಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಪುಗ್ಲಿಯಾ, ಟಸ್ಕನಿ ಮತ್ತು ವೆನೆಟೊದಂತಹ ಆರು ನೈಟ್‌ಕ್ಲಬ್‌ಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಇಟಾಲಿಯನ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿರುವ ಡೆಪ್ಯೂಟಿ ಪಿಎಂ ಮ್ಯಾಟಿಯೊ ಸಾಲ್ವಿನಿ ಅವರು ಕಾರ್ಯಕ್ರಮಕ್ಕೆ ಹಣವನ್ನು ಒದಗಿಸುತ್ತಾರೆ ಎಂದು ವರದಿಯಾಗಿದೆ.

ಅತಿಯಾಗಿ ಕುಡಿದವರಿಗೆ ರಾತ್ರಿಯಲ್ಲಿ ಉಚಿತ ಟ್ಯಾಕ್ಸಿಗಳು ಎಂದು ಅವರು ಈ ಹಿಂದೆ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ತಿಳಿಸಿದ್ದರು. ಕುಡುಕರಿಗೆ ಉಚಿತ ಕ್ಯಾಬ್ ಸೇವೆಗಳನ್ನು ಒದಗಿಸುವ ಹಿಂದೆ ದೇಶದಲ್ಲಿ ಸಂಭವಿಸಬಹುದಾದ ಮಾರಣಾಂತಿಕ ಅಪಘಾತಗಳನ್ನು ಕಡಿಮೆ ಮಾಡುವುದು ಮುಖ್ಯ ಉದ್ದೇಶವಾಗಿರುವುದಾಗಿ ಹೆಳಿದ್ದಾರೆ. ಸಾರ್ವಜನಿಕರ ಆರೋಗ್ಯ ಕೂಡ ಮುಖ್ಯವಾಗಿರುವುದರಿಂದ ಇದೊಂದೆ ಮಾರ್ಗ ನಮಗೆ ಉತ್ತವೆನಿಸಿದೆ ಎಂದಿದ್ದಾರೆ.

ಭಾರೀ ದಂಡಗಳು ಮತ್ತು ಪೆನಾಲ್ಟಿಗಳ ರೂಪದಲ್ಲಿ ಈ ಡ್ರಿಂಕ್ ಅಂಡ್ ಡ್ರೈವ್ ತಡೆಗಟ್ಟಲು ಮುಂದಾದರೂ, ದುರದೃಷ್ಟಕರ ಘಟನೆಗಳನ್ನು ತಡೆಯಲು ಇದು ಸಹಾಯ ಮಾಡಿಲ್ಲ. ಈಗ, ಉಚಿತ ಕ್ಯಾಬ್ ಸೇವೆಯು ಸನ್ನಿವೇಶವನ್ನು ಸಮರ್ಥವಾಗಿ ಬದಲಾಯಿಸಬಹುದು ಎಂದು ಅಲ್ಲಿನ ಸರ್ಕಾರ ನಂಬಿದೆ. ಇದು ಕೂಡ ಉತ್ತಮ ನಿರ್ಧಾರ ಎಂಬುದು ನಮ್ಮ ಅಭಿಪ್ರಾಯವಾಗಿದೆ.

ನೈಟ್‌ಕ್ಲಬ್‌ಗಳಲ್ಲಿ ಮದ್ಯಪಾನ ಮಾಡುವವರಿಗೆ ಉಚಿತ ಕ್ಯಾಬ್ ಸೇವೆಯನ್ನು ಒದಗಿಸುವ ಕ್ರಮವು ಅಲ್ಲಿನ ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇಟಲಿ ಸರ್ಕಾರದ ಈ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯಗಲನ್ನು ಕಮೆಂಟ್‌ನಲ್ಲಿ ತಿಳಿಸಿ. ಇಂತಹ ಕ್ರಮಗಳನ್ನು ನಾವು ಭಾರತದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ವೇಳೆ ಭಾರತದಲ್ಲೂ ಬಂದರೆ ಏನೆಲ್ಲಾ ಆಗಬಹುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Thursday, August 10, 2023, 13:33 [IST]
English summary
Dont drive drunk govt provide free cabs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+