2 ದುಬಾರಿ ಕಾರು, 1 ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ... ಉಡುಗೊರೆ ನೆಪದ ವರದಕ್ಷಿಣೆ ವಿಡಿಯೋ ವೈರಲ್

ಭಾರತದಲ್ಲಿ ವರದಕ್ಷಿಣೆ ಪದ್ಧತಿಯನ್ನು 1961 ರಲ್ಲೇ ಕಾನೂನುಬಾಹಿರಗೊಳಿಸಲಾಯಿತು. ಇದು ಶಿಕ್ಷಾರ್ಹ ಅಪರಾದವಾಗಿದ್ದರೂ, ಉಡುಗೊರೆಗಳ ನೆಪದಲ್ಲಿ ಇಂದಿಗೂ ಆಚರಣೆಯಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ವರದಕ್ಷಿಣೆ ನೀಡುವ ಕುರಿತು ಎರುಡು ಕುಟುಂಬಗಳು ಮಾತುಕತೆ ಮಾಡಿಕೊಂಡಿರುವುದು ಕಂಡುಬಂದಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ವಧು ಮತ್ತು ವರನ ಕುಟುಂಬಗಳ ನಡುವೆ ವಿನಿಮಯವಾದ ಉಡುಗೊರೆಗಳ ಪಟ್ಟಿಯನ್ನು ಘೋಷಿಸುತ್ತಿರುವುದು ನಾವು ನೋಡಬಹುದು. ಈ ಉಡುಗೊರೆಗಳ ಭಾಗವಾಗಿ, ವರನ ಕುಟುಂಬವು ಮರ್ಸಿಡಿಸ್ ಬೆಂಝ್ ಇ 200 ಐಷಾರಾಮಿ ಸೆಡಾನ್, ಟೊಯೊಟಾ ಫಾರ್ಚೂನರ್ ಎಸ್‌ಯುವಿ, 1.25 ಕೆ.ಜಿ ಚಿನ್ನ ಮತ್ತು 7 ಕೆ.ಜಿ ಬೆಳ್ಳಿಯನ್ನು ಪಡೆದಿದೆ.

dowry-viral-video-groom-received-2-expensive-cars-1kg-gold-7kg-silver

ಈ ಕುರಿತ ವೀಡಿಯೊವನ್ನು ವಿನೀತ್ ಭಾಟಿ ಎಂಬವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಸಣ್ಣ ವೀಡಿಯೊದಲ್ಲಿ ವ್ಯಕ್ತಿ ಕಾಗದ ಹಿಡಿದು ಉಡುಗೊರೆಗಳ ಪಟ್ಟಿಯನ್ನು ಜೋರಾಗಿ ಓದುತ್ತಿರುವುದು ಕಂಡುಬಂದಿದೆ. ಕಾರುಗಳು, ಚಿನ್ನ, ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ಹೇಳಿದ ಬಳಿಕ, ಇನ್ನೊಬ್ಬ ವ್ಯಕ್ತಿಯು ಮದುವೆಯ ಸಂದರ್ಭದಲ್ಲಿ 51 ಲಕ್ಷ ರೂ. ಮತ್ತು 21 ಲಕ್ಷ ರೂ. ಸಹ ನೀಡಲಾಗಿದೆ ಎಂದು ಹೇಳುತ್ತಾನೆ.

ಕಾರುಗಳ ಮೌಲ್ಯ: ಈ ಎರಡೂ ಕಾರುಗಳ ಮೌಲ್ಯವೇ 1.5 ಕೋಟಿ ರೂ. ದಾಟುತ್ತದೆ. ಮರ್ಸಿಡಿಸ್ ಬೆಂಝ್ ಇ 200 ಐಷಾರಾಮಿ ಸೆಡಾನ್ ರೂ. 75 ಲಕ್ಷದಿಂದ 88 ಲಕ್ಷ ರೂ. ಎಕ್ಸ ಶೋರೂಂ ಬೆಲೆಯಿದೆ. ಹಾಗೆಯೇ ಟೊಯೊಟಾ ಫಾರ್ಚೂನರ್ ಎಸ್‌ಯುವಿ 33 ಲಕ್ಷದಿಂದ ಆರಂಭವಾಗಿ 51 ಲಕ್ಷ ರೂ. ಎಕ್ಸ್‌ ಶೋರೂಂ ಬೆಲೆಯಿದೆ.

dowry-viral-video-groom-received-2-expensive-cars-1kg-gold-7kg-silver

ಇದು ಕಾನೂನುಬದ್ಧವೇ?: ವಧು ಮತ್ತು ವರನ ಕುಟುಂಬಗಳ ನಡುವೆ ಉಡುಗೊರೆ ನೀಡುವುದು ಕಾನೂನುಬಾಹಿರವಲ್ಲ. ಆದರೆ, ನೇರವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆ ಕೇಳುವುದು ಕಾನೂನುಬಾಹಿರ. ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ, ಶಿಕ್ಷೆಯಾಗಿ ಆರು ತಿಂಗಳ ಜೈಲು ಸೇರಬಹುದು ಅಥವಾ ಶಿಕ್ಷೆಯನ್ನು 2 ವರ್ಷಗಳವರೆಗೆ ವಿಸ್ತರಿಸಬಹುದು. ಈ ನಿರ್ದಿಷ್ಟ ವೀಡಿಯೊವನ್ನು ಹಂಚಿಕೊಂಡಿರುವ ವ್ಯಕ್ತಿಯು ಇದು ವರದಕ್ಷಿಣೆಯಲ್ಲ, "ಉಡುಗೊರೆ" ಎಂದು ಉಲ್ಲೇಖಿಸಿದ್ದಾರೆ.

ಹಂಚಿಕೊಳ್ಳಲಾದ ಮತ್ತೊಂದು ವೀಡಿಯೊದಲ್ಲೂ ಇದೇ ಉಡುಗೊರೆಗಳ ಪಟ್ಟಿಯಿದ್ದು, ಕನ್ಯಾದಾನ ಆಚರಣೆಗಾಗಿ ಹೆಚ್ಚುವರಿ 1 ಕೋಟಿ ರೂ. ನೀಡುವುದಾಗಿ ಇದರಲ್ಲಿ ಹೇಳಲಾಗಿದೆ. ಮತ್ತೊಂದು ವೀಡಿಯೊದಲ್ಲಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಐಷಾರಾಮಿ ಸೆಡಾನ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಇದು ಬಿಳಿ ಬಣ್ಣದಲ್ಲಿದ್ದು, ಇನ್ನೊಂದು ಬಿಳಿ ಬಣ್ಣದ ಟೊಯೊಟಾ ಫಾರ್ಚೂನರ್ ಎಸ್‌ಯುವಿಯನ್ನು ಸಹ ತೋರಿಸಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ: ಈ ಉಡುಗೊರೆಗಳ ವಿನಿಮಯವನ್ನು ತೋರಿಸುವ ಹಲವಾರು ವಿಡಿಯೋಗಳಿಗೆ ಇವು ಉಡುಗೊರೆಗಳಲ್ಲ' ಇದು ಲೈವ್ ವರದಕ್ಷಿಣೆ ವಿನಿಮಯ ಎಂದು ಹೇಳಿದ್ದಾರೆ. ಇದು ಮದುವೆಯಲ್ಲ, ಬದಲಿಗೆ ಇದು ಎರಡು ಕುಟುಂಬಗಳ ನಡುವೆ ನಡೆಯುತ್ತಿರುವ ವ್ಯವಹಾರ ಒಪ್ಪಂದವಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 13, 2024, 13:42 [IST]
English summary
Dowry viral video groom received 2 expensive cars 1kg gold 7kg silver
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+