ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಬಾಲಿವುಡ್ ನಟ ಅಜಯ್ ದೇವ್‌ಗನ್ ಅವರ ಬಿಎಂಡಬ್ಲ್ಯು ಎಕ್ಸ್ 7 ಕಾರನ್ನು ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದ. ಈ ಘಟನೆ ನಡೆದಾಗ ಅಜಯ್ ದೇವಗನ್ ಮುಂಬೈನ ಫಿಲ್ಮ್ ಸಿಟಿಗೆ ಶೂಟಿಂಗ್'ಗಾಗಿ ತೆರಳುತ್ತಿದ್ದರು.

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಜಯ್ ದೇವಗನ್ ಈ ವಿಷಯದ ಬಗ್ಗೆ ಯಾವ ಹೇಳಿಕೆಯನ್ನು ನೀಡದ ಕಾರಣಕ್ಕೆ ರಾಜ್‌ದೀಪ್ ಸಿಂಗ್ ಎಂಬ ವ್ಯಕ್ತಿ ಅವರ ಕಾರ್ ಅನ್ನು ತಡೆದು ನಿಲ್ಲಿಸಿದ್ದಾನೆ.

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಅಜಯ್ ದೇವಗನ್ ಅವರ ಕಾರನ್ನು ನಿಲ್ಲಿಸಿದ ರಾಜ್‌ದೀಪ್ ಸಿಂಗ್ ತನ್ನ ಮೊಬೈಲ್ ಫೋನ್‌ ಕ್ಯಾಮೆರಾ ಆನ್ ಮಾಡಿ ರೈತರ ಹೋರಾಟದ ಬಗ್ಗೆ ಮಾತನಾಡುವಂತೆ ಅಜಯ್ ದೇವಗನ್ ಅವರನ್ನು ಕೇಳಿಕೊಂಡಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದ್ದಾನೆ. ಅಜಯ್ ದೇವಗನ್ ಅವರ ಕಾರ್ ಅನ್ನು ಅಡ್ಡ ಗಟ್ಟಿದ ಕಾರಣಕ್ಕೆ ಪೊಲೀಸರು ರಾಜ್‌ದೀಪ್ ಸಿಂಗ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಈ ವೀಡಿಯೊದಲ್ಲಿ ರಾಜ್‌ದೀಪ್ ಸಿಂಗ್, ನಿಮ್ಮ ಈ ನಡೆ ಪಂಜಾಬ್'ಗೆ ವಿರುದ್ಧವಾಗಿದೆ. ಪಂಜಾಬ್ ನಿಮಗೆ ಅನ್ನ ನೀಡಿದೆ. ನೀವು ಪಂಜಾಬ್ ವಿರುದ್ಧ ಹೇಗೆ ಇರಲು ಸಾಧ್ಯ? ನಿಮಗೆ ನಾಚಿಕೆಯಾಗಬೇಕು. ನಿಮಗೆ ಕಾರಿನಿಂದ ಇಳಿದು ಮಾತನಾಡಲು ಯಾಕೆ ಸಾಧ್ಯವಾಗುತ್ತಿಲ್ಲವೆಂದು ಪ್ರಶ್ನಿಸಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ರಾಜ್‌ದೀಪ್ ಸಿಂಗ್ ಪಂಜಾಬ್ ಮೂಲದವನಾಗಿದ್ದು, ಮುಂಬೈನಲ್ಲಿ ಚಾಲಕ ವೃತ್ತಿಯಲ್ಲಿದ್ದಾನೆ. ಆತ ಅಜಯ್ ದೇವಗನ್ ಅವರ ಕಾರನ್ನು 15 ರಿಂದ 20 ನಿಮಿಷಗಳ ಕಾಲ ನಿಲ್ಲಿಸಿದ್ದ ಎಂದು ವರದಿಯಾಗಿದೆ.

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ರೈತರ ಹೋರಾಟದ ಬಗ್ಗೆ ಅಜಯ್ ದೇವಗನ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ರಾಜ್‌ದೀಪ್ ಸಿಂಗ್ ಹೀಗೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಪೊಲೀಸರು ರಾಜ್‌ದೀಪ್ ಸಿಂಗ್'ರವರನ್ನು ಬಂಧಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಜಯ್ ದೇವಗನ್ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ.

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಅವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಸೇರಿದಂತೆ ಹಲವಾರು ದುಬಾರಿ ಐಷಾರಾಮಿ ಎಸ್‌ಯುವಿಗಳಿವೆ. ಇವುಗಳಲ್ಲಿ ಬಿಎಂಡಬ್ಲ್ಯು ಎಕ್ಸ್ 7 ಸಹ ಸೇರಿದೆ.ಈ ಘಟನೆ ನಡೆದಾಗ ಅವರು ಬಿಎಂಡಬ್ಲ್ಯು ಎಕ್ಸ್ 7 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಜಯ್ ದೇವಗನ್ ಅವರು ಮಾಸೆರೋಟಿ ಕ್ವಾಟ್ರೋಪೋರ್ಟ್, ಬಿಎಂಡಬ್ಲ್ಯು ಝಡ್ 4 ಹಾಗೂ ಕಸ್ಟಮೈಸ್ ಮಾಡಿದ ವ್ಯಾನ್ ಅನ್ನು ಸಹ ಹೊಂದಿದ್ದಾರೆ.

ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ

ಅಜಯ್ ದೇವಗನ್ ಬಹುತೇಕ ಬಾರಿ ತಾವೇ ಕಾರುಗಳನ್ನು ಚಾಲನೆ ಮಾಡುತ್ತಾರೆ. ಆದರೆ ಈ ಘಟನೆ ನಡೆದಾಗ ಅವರ ಜೊತೆಗೆ ಕಾರು ಚಾಲಕನಿದ್ದ.

Most Read Articles

Kannada
English summary
Driver arrested for blocking Bollywood actor Ajay Devgn's car. Read in Kannada.
Story first published: Thursday, March 4, 2021, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X