ಮಹೀಂದ್ರಾ XUV700ನಲ್ಲಿ ಚಾಲಕನ ದೊಡ್ಡ ಎಡವಟ್ಟು: ಕೊಂಚ ಯಾಮಾರಿದ್ರೆ...

ಕೆಲವು ಸೋಷಿಯಲ್ ಮೀಡಿಯಾ ಇನ್ಫ್ಯೂಲೆನ್ಸರ್ ತಮ್ಮ ವೀಕ್ಷಣೆಯನ್ನು ಹೆಚ್ಚಿಸಿಕೊಳ್ಳಲು ಹುಚ್ಚು ಸಾಹಸಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರ ಜೀವಕ್ಕೆ ಅಥವಾ ಇತರರಿಗೂ ಹಾನಿಯಾಗಹುದು. ಮಹೀಂದ್ರಾ XUV700 ADAS ಕಾರಿನಲ್ಲಿ ಚಾಲಕನೊಬ್ಬ ಮಾಡಿದ ಎಡವಟ್ಟಿನಿಂದ ದೊಡ್ಡ ಮಟ್ಟದ ಅಪಾಯ ಎದುರಾಗಬಹುದಿತ್ತು. ಆದರೆ, ಸ್ವಲ್ಪದರಲ್ಲಿಯೇ ತಪ್ಪಿದೆ. ಅಷ್ಟಕ್ಕೂ ಅಲ್ಲಿ ಏನಾಯಿತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭಾರೀ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನಿಖಿಲ್ ರಾಣಾ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಕಾರು ಮಾಲೀಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅವರು, ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಅವರು ಮಾಡಿರುವ ರೀಲ್‌ವೊಂದು 8 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಆದರೆ, ತೀರಾ ಅಪಾಯಕಾರಿಯಾಗಿ ಮಾಡಿದ್ದ ಈ ರೀಲ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಾಕಷ್ಟು ಟೀಕೆ ಮಾಡಿದ್ದರು.

ಅಷ್ಟಕ್ಕೂ ಅವರು ಮಾಡಿದ್ದನು ಅಂದರೆ, ಮಹೀಂದ್ರಾ XUV700 ADAS ಕಾರಿನ ಬ್ರೇಕ್ ಹಾಗೂ ಎಕ್ಸಲೇಟರ್ ಅನ್ನು ಬಳಕೆ ಮಾಡದೆ, ಡ್ರೈವಿಂಗ್ ಸೀಟಿನ ಮೇಲೆ ತನ್ನ ಎರಡು ಕಾಲುಗಳನ್ನು ಇಟ್ಟುಕೊಂಡು ಕೈಗಳಿಂದ ಸ್ಟೇರಿಂಗ್ ಬಿಟ್ಟು ಆಹಾರವನ್ನು ಸೇವಿಸುತ್ತಿದ್ದಾರೆ. ಅದು ಸಹ 81 ಕಿಮೀ/ಗಂಟೆಗೆ ವೇಗದಲ್ಲಿರುವಾಗಲೇ. ಅದನ್ನು ವಿಡಿಯೋ ಸಹ ಮಾಡಲಾಗಿದೆ. ಈ ಮಹೀಂದ್ರಾ XUV700 SUV ರಸ್ತೆಗಳಲ್ಲಿ ಕೆಲಕಾಲ ಸ್ವಯಂ ಚಾಲನೆ ಆಗಬಹುದಾದ ಫೀಚರ್‌ ಹೊಂದಿದೆ. ಅದನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.

ಆದರೆ, ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಬೇರೆ ವಾಹನಗಳು ವೇಗದಲ್ಲಿ SUV ಅಕ್ಕಪಕ್ಕ ಅಥವಾ ಎದುರಿಗೆ ಬಂದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸುತ್ತಿತ್ತು. ಇನ್ನೂ ಬೇಸರದ ಸಂಗತಿಯೆಂದರೆ ಈ SUV ಮಳೆಯಲ್ಲಿ ಈ ರೀತಿಯಾಗಿ ಚಲಾಯಿಸಲಾಗಿದೆ. ಇದು ಸುಲಭವಾಗಿ ವಾಹನವು ಸ್ಕಿಡ್ ಆಗಿ ಅವಘಾತಕ್ಕೆ ಕಾರಣವಾಗಬಹುದಿತ್ತು. ಆದರೆ, ಅದು ತಪ್ಪಿದೆ. ಸೋಷಿಯಲ್ ಮೀಡಿಯಾ ಇನ್ಫ್ಯೂಲೆನ್ಸರ್ ಈ ರೀತಿ ಮಾಡಿ, ಇತರರ ಮೇಲೆ ಪ್ರಭಾವ ಬಿರುತ್ತಾರೆ. ಅವರು ಸಹ ಇಂತಹ ಪ್ರಯತ್ನ ಮಾಡಿದರೆ ನಷ್ಟವಾಗುವುದು ಗ್ಯಾರೆಂಟಿ.

ರಸ್ತೆಗಳಲ್ಲಿ ಈ ರೀತಿಯ ಅಸಡ್ಡೆ ಮನಸ್ಥಿತಿ ಹೊಂದಿರುವ ಚಾಲಕರು ಇರುತ್ತಾರೆ. ಪ್ರಯಾಣಿಸುವಾಗ ನೀವು ತುಂಬಾ ಎಚ್ಚರದಿಂದಿರಿ. ಇಂತಹ ಹುಚ್ಚಾಟದ ಕೆಲಸಗಳನ್ನು ಯಾರಾದರೂ ಮಾಡುತ್ತಿರುವುದನ್ನು ಗಮನಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡುವುದನ್ನು ಮರೆಯದಿರಿ. ಏಕೆಂದರೆ, ಇಂತಹ ಕೆಲಸಗಳಿಂದ ಅಪಘಾತಗಳು ಸಂಭವಿಸಿದರೆ ಅವರ ಪ್ರಾಣಕ್ಕೆ ಮಾತ್ರವಲ್ಲದೆ, ಇದಕ್ಕೆ ಸಂಬಂಧವಿಲ್ಲದವರಿಗೂ ಪ್ರಾಣ ಹಾನಿಯಾಗಬಹುದು ಅಥವಾ ಜೀವನಪೂರ್ತಿ ಅಂಗವೈಕಲ್ಯಕ್ಕೆ ಒಳಗಬಹುದು. ಆದ್ದರಿಂದ ಇಂತವರ ಬಗ್ಗೆ ಕೊಂಚ ಜಾಗ್ರತೆ ಹೆಚ್ಚೆ ಇರಲಿ.

ಅಲ್ಲದೆ, ನೀವು ಸೋಷಿಯಲ್ ಮೀಡಿಯಾ ಇನ್ಫ್ಯೂಲೆನ್ಸರ್ ಆಗಿದ್ದರೆ ಕೊಂಚ ಜವಾಬ್ದಾರಿಯಿಂದ ವರ್ತಿಸಿರಿ. ನೀವು ಮಾಡುವ ಕೆಲಸಗಳು ಇತರರಿಗೆ ಮಾದರಿಯಾಗಬೇಕೇ ಹೊರತು, ಅದರಿಂದ ಯಾವುದೇ ರೀತಿಯ ಸಮಸ್ಯೆ ಆಗಬಾರದು. ನೀವು ಈ ಯೂಟ್ಯೂಬರ್ ಮಾಡಿದ ಅಪಾಯಕಾರಿ ಸಾಹಸಗಳನ್ನು ಎಂದಿಗೂ ಮಾಡಬೇಡಿ. ನಿಮ್ಮನ್ನು ಅನುಸರಿಸುವ ಜನರ ಸಂಖ್ಯೆ ಹೆಚ್ಚಿರುತ್ತದೆ. ನೀವು ಜವಾಬ್ದಾರಿಯುತವಾಗಿ ಚಾಲನೆ ಮಾಡುವುದು ಮತ್ತು ರಸ್ತೆ ಸುರಕ್ಷತೆ ಅನ್ನು ಗಮನದಲ್ಲಿಟ್ಟುಕೊಂಡು ವಾಹನಗಳನ್ನು ಓಡಿಸುವಂತೆ ಇತರನ್ನು ಪ್ರೇರೇಪಿಸಿರಿ.

ಮಹೀಂದ್ರಾ XUV700 ಕಾರು ವಿನೂತನ ತಂತ್ರಜ್ಞಾನ, ಅತ್ಯಾಕರ್ಷಕ ವಿನ್ಯಾಸದೊಂದಿಗೆ 2021ರ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. XUV700, 200 PS ಪವರ್ ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಡಿಸೇಲ್ ಆವೃತ್ತಿಯು 155 PS ಪವರ್ ಮತ್ತು 360 Nm ಟಾರ್ಕ್ ಉತ್ಪಾದಿಸುವ 2.2-ಲೀಟರ್ ಡೀಸೆಲ್ ಮೋಟಾರು ಅನ್ನು ಹೊಂದಿದ್ದು, ಇದು ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್ ಅನ್ನು ಹೊಂದಿರುತ್ತದೆ. ಅದು ಆಯ್ಕೆ ಮಾತ್ರ.

ಈ ಮಹೀಂದ್ರಾ XUV700 5- ಅಥವಾ 7-ಆಸನಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಕ್ಯಾಪ್ಟನ್ ಸೀಟ್‌ಗಳ ಆಯ್ಕೆಯನ್ನು ಹೊಂದಿಲ್ಲ. ಬೆಲೆ ವಿಚಾರವಾಗಿ ಹೇಳುವುದಾದರೆ, ಮಹೀಂದ್ರಾ XUV700 ಬೆಲೆ 13.45 ಲಕ್ಷದಿಂದ 24.95 ಲಕ್ಷದ ನಡುವೆ ಇದೆ (ಎಕ್ಸ್ ಶೋರೂಂ ಪ್ರಕಾರ). ಈ XUV700 ಕಾರು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಸಫಾರಿ, ಹುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Most Read Articles

Kannada
English summary
Driver biggest mistake in mahindra xuv700 too much
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X