ಬ್ರೇಕ್ ಬದಲು ಎಕ್ಸಲೇಟರ್ ತುಳಿದು ಮನೆಯ ಗೋಡೆ ಪುಡಿಪುಡಿ: ಟಾಟಾ ಕಾರಿನಿಂದ ಚಾಲಕ ಸೇಫ್
ಅನೇಕ ಹೊಸ ಚಾಲಕರು ಪೆಡಲ್ಗಳ ನಡುವೆ ಗೊಂದಲಕ್ಕೊಳಗಾಗುತ್ತಾರೆ. ಕಾರು ಚಾಲನೆ ವೇಳೆ ಗಲಿಬಿಲಿಗೊಂಡು ಬ್ರೇಕ್ ಬದಲಿಗೆ ಎಕ್ಸಲೇಟರ್ ತುಳಿದು ಅಪಘಾತಗಳು ಸಂಭವಿಸಿದ ಅನೇಕ ಘಟನೆಗಳು ವರದಿಗಳಾಗಿವೆ. ಇತ್ತೀಚೆಗೆ ಇದೇ ರೀತಿ ಬ್ರೇಕ್ ಮತ್ತು ಎಕ್ಸಲೇಟರ್ ಪೆಡಲ್ ತುಳಿದು ಮನೆಯ ಗೋಡೆ ಪುಡಿಪುಡಿ ಮಾಡಿದ್ದಾರೆ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿ ಚಾಲಕ ರಿವಸ್ ತೆಗೆಯುವಾಗ ಬ್ರೇಕ್ ಬದಲಿಗೆ ಎಕ್ಸಲೇಟರ್ ತುಳಿದಿದ್ದಾರೆ. ಇದರಿಂದ ಕಾರು ಸಂಪೂರ್ಣವಾಗಿ ಹಿಮ್ಮುಖವಾಗಿ ಚಲಿಸಿತು. ಒಂದೇ ಸಮನೆ ವೇಗವಾಗಿ ರಿವರ್ಸ್ ಚಲಿಸಿರುವುದರಿಂದ ಮನೆಯ ಗೋಡೆ ಮತ್ತು ಗೇಟ್'ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಅದೃಷ್ಟವಾಶತ್ ಯಾರಿಗೂ ಗಾಯಗಳಾಗಿಲ್ಲ. ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್ ಕಾರಿನ ಚಾಲಕ ಕೂಡ ಸೇಫ್ ಆಗಿದ್ದಾನೆ. ಟಾಟಾ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಸಣ್ಣ ಹಾನಿಗಳಾಗಿದೆ. ಈ ಘಟನೆಯ ವಿಡಿಯೋವನ್ನು Nikhil rana ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಟಾಟಾ ಕಾರುಗಳು ಗರಿಷ್ಠ ಸುರಕ್ಷತೆ ಹೆಚ್ಚು ಜನಪ್ರಿಯತೆಗಳಿಸಿದೆ. ಈ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಸುರಕ್ಷತೆಯಿಂದ ಕೂಡಿದೆ. ಎಲೆಕ್ಟ್ರಿಕ್ ಕಾರುಗಳು ಟಾರ್ಕ್ ಬಹಳ ಹೆಚ್ಚು. ಪೂರ್ಣ ಪ್ರಮಾಣದ ಟಾರ್ಕ್ ಶೂನ್ಯ rpm ನಿಂದ ಲಭ್ಯವಿರುತ್ತದೆ ಎಂಬ ಅಂಶವು ಹೊಸ ಡ್ರೈವರ್‌ಗಳಿಗೆ ನಿಯಂತ್ರಿಸಲು ತುಂಬಾ ಕಷ್ಟಕರವಾಗುತ್ತದೆ. ಅನೇಕ ಎಲೆಕ್ಟ್ರಿಕ್ ವಾಹನ ಮಾಲೀಕರು ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗಿಂತ ವಿಭಿನ್ನವಾಗಿದೆ ಎಂಬ ಅಂಶ ಗಮನದಲ್ಲಿಟ್ಟುಕೊಳ್ಳಬೇಕ್ಯ್, ಅಂತಹ ಸಮಸ್ಯೆಗಳು ಬಹಳ ಸಾಮಾನ್ಯವಾಗಿದೆ.
ICE ಎಂಜಿನ್‌ಗಳು ಗರಿಷ್ಠ ಟಾರ್ಕ್ ಮತ್ತು ಪವರ್ ಅನ್ನು ಉತ್ಪಾದಿಸುವ ಮೊದಲು ನಿರ್ದಿಷ್ಟ rpm ಅನ್ನು ತಲುಪಬೇಕು. ಆದರೆ ಎಲೆಕ್ಟ್ರಿಕ್ ಮೋಟಾರ್ಗಳು ಪ್ರಾರಂಭದಿಂದಲೇ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಅದಕ್ಕಾಗಿಯೇ ಒಬ್ಬರು ಎಲೆಕ್ಟ್ರಿಕ್ ವಾಹನಗಳನ್ನು ಎಚ್ಚರಿಕೆಯಿಂದ ಬಳಸಬೇಕು. ವಾಹನದ ಸಂಪೂರ್ಣ ಪವರ್ ಅನ್ನು ಬಳಸುವ ಮೊದಲು ಎಕ್ಸಲೇಟರ್ ಹೇಗೆ ಕೊಡಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು. ಜನಪ್ರಿಯ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯಾದ ಮೂರು ವರ್ಷಗಳ ನೆನಪಿಗಾಗಿ, ಟಾಟಾ ಪರಿಷ್ಕೃತ ಬೆಲೆಗಳೊಂದಿಗೆ ಹೆಚ್ಚಿನ ರೇಂಜ್ ನೊಂದಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿತು.
ಅಲ್ಲದೇ ಇತ್ತೀಚೆಗೆ ಮತ್ತೊಂದು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ XUV400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಇನ್ನು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯನ್ನು ರೂ. 85,000 ವರೆಗೆ ಕಡಿಮೆ ಮಾಡಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ರೇಂಜ್ ಅನ್ನು ಸಿಂಗಲ್ ಚಾರ್ಜ್‌ನಲ್ಲಿ 437 ಕಿ.ಮೀ ನಿಂದ 453 ಕಿ.ಮೀಗೆ ಹೆಚ್ಚಿಸಿದೆ. ಈ ಹೊಸ ಟಾಟಾ ನೆಕ್ಸಾನ್ ಇವಿ ಪ್ರೈಮ್ 3 ರೂಪಾಂತರಗಳಲ್ಲಿ ಲಭ್ಯವಿದೆ. ಇದು XM, XZ+ ಮತ್ತು XZ+ Lux. ಆಗಿದೆ.
ಈ ರೂಪಾಂತರಗಳು 3.3kW ಚಾರ್ಜರ್ ಜೊತೆಗೆ 30.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ. XM ಮತ್ತು XZ+ ರೂಪಾಂತರಗಳಿಗೆ ಕ್ರಮವಾಗಿ ರೂ.14.49 ಲಕ್ಷ ಮತ್ತು 15.99 ಲಕ್ಷ ರೂ.ಗಳಾಗಿದ್ದು, ಇನ್ನು XZ+ Lux ರೂಪಾಂತರದ ಬೆಲೆಯು ರೂ.16.99 ಲಕ್ಷವಾಗಿದೆ. ಇನ್ನು ಮೂಲ ಮಾದರಿಯ ಬೆಲೆ 50,000 ರೂ.ಗಳಷ್ಟು ಕಡಿಮೆಯಾಗಿದೆ, ಆದರೆ ಟಾಪ್-ಸ್ಪೆಕ್ ಮಾಡೆಲ್ ಈಗ 85,000 ರೂ.ಗಳಷ್ಟು ಅಗ್ಗವಾಗಿದೆ. ಈ 2023ರ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ದೊಡ್ಡದಾದ 40.5kWh ಬ್ಯಾಟರಿ ಪ್ಯಾಕ್ ಮತ್ತು 3.3kW ಅಥವಾ 7.2kW ಚಾರ್ಜರ್ ಆಯ್ಕೆಯೊಂದಿಗೆ ಲಭ್ಯವಿದೆ.
3.3kW ಚಾರ್ಜರ್ ಹೊಂದಿರುವ ನೆಕ್ಸಾನ್ ಇವಿ ಬೆಲೆಯು ರೂ. 16.49 ಲಕ್ಷದಿಂದ ರೂ.18.49 ಲಕ್ಷದವರೆಗೆ ಇದೆ. 7.2kW ಚಾರ್ಜರ್ ಹೊಂದಿರುವ ಇವಿ ಮ್ಯಾಕ್ಸ್ ರೂ 16.99 ಲಕ್ಷದಿಂದ ರೂ 18.99 ಲಕ್ಷ ಬೆಲೆಯಲ್ಲಿ ಲಭ್ಯವಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ನೆಕ್ಸಾನ್ ಇವಿ ಪ್ರೈಮ್ ಅನ್ನು 30.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಅಳವಡಿಸಲಾಗಿದೆ, ಇದು ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. ಎಲೆಕ್ಟ್ರಿಕ್ ಮೋಟಾರ್ 129 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಈ ಕಾರಿನಲ್ಲಿ ಡ್ರೈವ್ ಮತ್ತು ಸ್ಪೋರ್ಟ್ಸ್ ಎಂಬ ಮೋಡ್‌ಗಳನ್ನು ನೀಡುತ್ತದೆ ನೆಕ್ಸಾನ್ ಇವಿ ಪ್ರೈಮ್ ಸಿಂಗಲ್ ಚಾರ್ಜ್‌ನಲ್ಲಿ 312 ಕಿಮೀ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. 15A AC ವಾಲ್ ಸಾಕೆಟ್‌ನಿಂದ 8 ಗಂಟೆಗಳಲ್ಲಿ ಬ್ಯಾಟರಿಯನ್ನು 20% ರಿಂದ 80% ವರೆಗೆ ಚಾರ್ಜ್ ಮಾಡಬಹುದು. ನೆಕ್ಸಾನ್ ಇವಿ ಮ್ಯಾಕ್ಸ್ ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಅಳವಡಿಸಲಾಗಿರುತ್ತದೆ, ಇದು 40.5kWh ಬ್ಯಾಟರಿ ಪ್ಯಾಕ್‌ನಿಂದ ಪವರ್ ಅನ್ನು ಪಡೆಯುತ್ತದೆ.


Click it and Unblock the Notifications