ಡ್ರೈವರ್ ಇಲ್ಲದೇ ಚಲಿಸುತ್ತವೆ ಈ ರೊಬೊಟಿಕ್ ಟ್ಯಾಕ್ಸಿಗಳು
ವಿಶ್ವಾದ್ಯಂತ ಚಾಲಕರ ಸಹಾಯವಿಲ್ಲದೆ ಆಟೋಮ್ಯಾಟಿಕ್ ಆಗಿ ಚಲಿಸುವ ಕಾರುಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆ ನಡೆಯುತ್ತಿದೆ. ಆಟೋಮೊಬೈಲ್ ಕಂಪನಿಗಳು ಮಾತ್ರವಲ್ಲದೆ ದೊಡ್ಡ ದೊಡ್ಡ ಟೆಕ್ನಾಲಜಿ ಕಂಪನಿಗಳು ಸಹ ಆಟೊಮೇಷನ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸುತ್ತಿವೆ.

ಕೆಲವು ಕಂಪನಿಗಳು ಸಾರ್ವಜನಿಕ ರಸ್ತೆಗಳಲ್ಲಿ ಆಟೋಮ್ಯಾಟಿಕ್ ಆಗಿ ಚಲಿಸುವ ವಾಹನಗಳನ್ನು ಪರೀಕ್ಷಿಸುತ್ತಿವೆ. ನಗರ ಪ್ರದೇಶಗಳಲ್ಲಿ ಈ ಪರೀಕ್ಷೆಯನ್ನು ನಡೆಸುವಾಗ ಹಲವಾರು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಈಗ ಅಲಿಬಾಬಾ ಕಂಪನಿಯಡಿಯಲ್ಲಿ ಕಾರ್ಯನಿರ್ವಹಿಸುವ ಆಟೋಎಕ್ಸ್ ಕಂಪನಿಯು, ಲೆವೆಲ್ 5 ಎಂಬ ಸುಧಾರಿತ ಆಟೊಮೇಷನ್ ಟೆಕ್ನಾಲಜಿಯನ್ನು ಹೊಂದಿರುವ ಕಾರುಗಳನ್ನು ಪರೀಕ್ಷಿಸುತ್ತಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ರೊಬೊಟಿಕ್ ಟ್ಯಾಕ್ಸಿಗಳನ್ನು ಚೀನಾದ ಶೆನ್ಜೆನ್‌ನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಲೆವೆಲ್ 5 ಆಟೊಮೇಷನ್ ಟೆಕ್ನಾಲಜಿಯನ್ನು ಹೊಂದಿರುವ ಈ ಟ್ಯಾಕ್ಸಿಯನ್ನು ಏಷ್ಯಾದಲ್ಲಿ ಮೊದಲ ಬಾರಿಗೆ ಪರೀಕ್ಷಿಸಲಾಗುತ್ತಿದೆ.

ಆಟೋಎಕ್ಸ್ ಈ ಪರೀಕ್ಷೆಯ ವೀಡಿಯೊವನ್ನು ಸಹ ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿಲ್ಲಿಸಲಾಗಿರುವ ಕಾರು ಹಾಗೂ ಟ್ರಕ್‌ಗಳನ್ನು ಗುರುತಿಸುವುದನ್ನು ಹಾಗೂ ಆಟೋಮ್ಯಾಟಿಕ್ ಟೆಕ್ನಾಲಜಿಯನ್ನು ಸುರಕ್ಷಿತವಾಗಿ ನಿರ್ವಹಿಸುವುದನ್ನು ಪರಿಗಣಿಸಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜೊತೆಗೆ ರಸ್ತೆ ದಾಟುವ ಪಾದಚಾರಿಗಳು ರಸ್ತೆ ನಿರ್ಮಾಣ ಸ್ಥಳಗಳಲ್ಲಿ ಅಸುರಕ್ಷಿತ ಯು-ಟರ್ನ್ ಗಳನ್ನು ನಿಖರವಾಗಿ ಕಂಡುಹಿಡಿಯಲು ಮುಂದೆ ಸಾಗುತ್ತಿದ್ದಾರೆ.ಇದುವರೆಗೂ ಆಟೋಮ್ಯಾಟಿಕ್ ಆಗಿ ಚಲಿಸುವ ವಾಹನಗಳಿಗೆ ಹೆದ್ದಾರಿಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಆದರೆ ಸುರಕ್ಷತೆಯ ಕಾರಣಕ್ಕೆ ನಗರ ಪ್ರದೇಶಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿಲ್ಲ. ಈಗ ಈ ಆಟೋಎಕ್ಸ್ ರೋಬೋಟ್ ಟ್ಯಾಕ್ಸಿ ಎಲ್ಲಾ ಸಂದರ್ಭಗಳಲ್ಲೂ ಉತ್ತಮವಾಗಿ ಚಲಿಸುವುದರಿಂದ ಇನ್ನು ಮುಂದೆ ನಗರಗಳಲ್ಲಿಯೂ ಆಟೋಮ್ಯಾಟಿಕ್ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆಗಳಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ
ಆಟೋಎಕ್ಸ್ ಕಂಪನಿಯು ವೆಮೊ ಬಳಸುವ ಫಿಯೆಟ್ ಕ್ರಿಸ್ಲರ್ ಪೆಸಿಫಿಕ್ ಕಾರು ಮಾದರಿಗಳನ್ನು ಬಳಸುತ್ತಿದೆ. ಈ ಕಾರುಗಳು ಉತ್ತಮ ಗುಣಮಟ್ಟದ ರೆಕಾರ್ಡಿಂಗ್ ಕ್ಯಾಮೆರಾಗಳು, ರಾಡಾರ್ ಸಿಸ್ಟಂ ಹಾಗೂ ಅಪಾಯಕಾರಿ ಸೆನ್ಸಾರ್ ಗಳನ್ನು ಹೊಂದಿವೆ.

ಈ ಪರೀಕ್ಷೆಗಳು ಯಶಸ್ವಿಯಾದರೆ ಈ ರೊಬೊಟಿಕ್ ಟ್ಯಾಕ್ಸಿಗಳು ಮುಂದಿನ ಕೆಲವು ವರ್ಷಗಳಲ್ಲಿ ಚೀನಾದ ಟ್ಯಾಕ್ಸಿ ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡುವ ಸಾಧ್ಯತೆಗಳಿವೆ. ಇದನ್ನು ಅನುಸರಿಸಿ ಈ ಕಾರುಗಳನ್ನು ಇತರ ದೇಶಗಳಲ್ಲಿಯೂ ಬಳಸಬಹುದು.


Click it and Unblock the Notifications