ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಕೆಲವು ದಶಕಗಳ ಹಿಂದೆ ಹಾಲಿವುಡ್ ಸಿನಿಮಾಗಳಲ್ಲಿ ಡ್ರೈವರ್ ಲೆಸ್ ಕಾರುಗಳನ್ನು ನೋಡುತ್ತಿದ್ದೆವು. ಈ ರೀತಿಯ ಕಾರುಗಳು ನಿಜ ಜೀವನದಲ್ಲಿಯೂ ಇರಬಾರದೇ ಎಂದು ಹಲವರಿಗೆ ಅನಿಸಿದ್ದು ಸುಳ್ಳಲ್ಲ.

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಡ್ರೈವರ್ ಲೆಸ್ ಕಾರುಗಳನ್ನು ಪರಿಚಯಿಸಿ ಜನರ ಕನಸನ್ನು ನನಸು ಮಾಡಿದ್ದು ಅಮೆರಿಕಾ ಮೂಲದ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ. ಆದರೆ ಈ ಡ್ರೈವರ್ ಲೆಸ್ ಕಾರುಗಳು ಹಲವು ಬಾರಿ ಅಪಘಾತಕ್ಕೀಡಾಗಿವೆ. ಈಗ ಅಮೆರಿಕಾದ ಟೆಕ್ಸಾಸ್‌ನಲ್ಲಿ ಟೆಸ್ಲಾ ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ.

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಅಪಘಾತಕ್ಕೀಡಾಗಿರುವುದು 2019ರ ಮಾದರಿಯ ಟೆಸ್ಲಾ ಮಾಡೆಲ್ ಎಸ್ ಕಾರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಈ ಕಾರಿನ ಮುಂಭಾಗದಲ್ಲಿ ಒಬ್ಬರು ಹಾಗೂ ಹಿಂಭಾಗದಲ್ಲಿ ಒಬ್ಬರು ಪ್ರಯಾಣಿಸುತ್ತಿದ್ದರು. ಟೆಕ್ಸಾಸ್‌ನ ವುಡ್‌ಲ್ಯಾಂಡ್ ಬಳಿಯ ರಸ್ತೆಯ ಕ್ರಾಸ್'ನಲ್ಲಿ ಈ ಎಲೆಕ್ಟ್ರಿಕ್ ಕಾರ್ ಅನ್ನು ತಿರುಗಿಸುವಾಗ ಈ ಅಪಘಾತ ಸಂಭವಿಸಿದೆ.

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದ ಈ ಡ್ರೈವರ್ ಲೆಸ್ ಟೆಸ್ಲಾ ಕಾರು ತಿರುವಿಗೆ ಗುದ್ದಿ ಹತ್ತಿರದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಕಾರಣಕ್ಕೆ ಕಾರಿನಲ್ಲಿದ್ದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಸುಮಾರು 4 ಗಂಟೆಗಳ ಹೋರಾಟದ ನಂತರ ಅಗ್ನಿಶಾಮಕ ಇಲಾಖೆ ಬೆಂಕಿ ನಂದಿಸಿದೆ. ಈ ಘಟನೆಯ ಬಗ್ಗೆ ಟೆಸ್ಲಾ ಕಂಪನಿಯು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕೆಲವು ಗಂಟೆಗಳ ನಂತರ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ಆಟೋಪೈಲಟ್ ಕಾರುಗಳು ಇತರ ಕಾರುಗಳಿಗಿಂತ ಅಪಘಾತಗಳಲ್ಲಿ ಸಿಲುಕುವ ಸಾಧ್ಯತೆಗಳು 10 ಪಟ್ಟು ಕಡಿಮೆ ಎಂದು ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರನ್ನು ಯಾರೂ ಚಾಲನೆ ಮಾಡುತ್ತಿರಲಿಲ್ಲವೆಂದು ಪೊಲೀಸರು ಖಚಿತಪಡಿಸಿದ್ದಾರೆ. ಕಾರಿನಲ್ಲಿದ್ದ ಎರಡು ಮೃತ ದೇಹ ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಪೊಲೀಸರು ಇದನ್ನು ಖಚಿತಪಡಿಸಿದ್ದಾರೆ.

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಟೆಕ್ಸಾಸ್ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಘಟನೆಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಟೆಸ್ಲಾ ಕಾರುಗಳು ಬೆಂಕಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಜೊತೆಗೆ ಪ್ರಯಾಣಿಕರ ಚಾಲನಾ ಸಹಾಯ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಈಗ ಡ್ರೈವರ್ ಲೆಸ್ ಕಾರುಗಳ ಸಂಚಾರವನ್ನು ನಿಲ್ಲಿಸುವ ಸಮಯ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಸಂಭವಿಸಿದ ಹಲವಾರು ಟೆಸ್ಲಾ ಕಾರು ಅಪಘಾತಗಳ ಬಗ್ಗೆ ಅಮೆರಿಕಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ.

ಇಬ್ಬರ ಸಾವಿಗೆ ಕಾರಣವಾಯ್ತು ಡ್ರೈವರ್ ಲೆಸ್ ಎಲೆಕ್ಟ್ರಿಕ್ ಕಾರು

ಆದರೆ ಈಗ ಸಂಭವಿಸಿರುವ ಅಪಘಾತದ ಬಗ್ಗೆ ತನಿಖೆಯನ್ನು ನಡೆಸಲಾಗುವುದೇ ಇಲ್ಲವೇ ಎಂಬುದರ ಬಗ್ಗೆ ಅಮೆರಿಕಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Driverless Tesla Model S electric car kills two people in America. Read in Kannada.
Story first published: Tuesday, April 20, 2021, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X