ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರಗಳು ನಿರಂತರವಾಗಿ ಸುಲಭಗೊಳಿಸುತ್ತಿವೆ. ಈಗ ದೆಹಲಿ ಸರ್ಕಾರವು ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಳಿಸಲು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಚಾಲನಾ ಪರೀಕ್ಷೆಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಸಾರಿಗೆ ಇಲಾಖೆ ಇನ್ನು ಮುಂದೆ ರಾತ್ರಿ 10 ಗಂಟೆಯವರೆಗೆ ಚಾಲನಾ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಟ್ರ್ಯಾಕ್‌ನಲ್ಲಿ ಬೆಳಕಿನ ವ್ಯವಸ್ಥೆ

ಮುಂಬರುವ ದಿನಗಳಲ್ಲಿ ಎಲ್ಲಾ ಸ್ವಯಂಚಾಲಿತ ಟ್ರ್ಯಾಕ್‌ಗಳಲ್ಲಿ ರಾತ್ರಿ ಪರೀಕ್ಷೆಗಳು ನಡೆಯಲಿವೆ. ಈ ಕಾರಣಕ್ಕೆ ಎಲ್ಲಾ ವಲಯ ಸಾರಿಗೆ ಪ್ರಾಧಿಕಾರಗಳ ಟ್ರ್ಯಾಕ್‌ಗಳಲ್ಲಿ ಹೆಚ್ಚಿನ ಸಾಮರ್ಥ್ಯದ ದೀಪಗಳನ್ನು ಅಳವಡಿಸಲಾಗುವುದು. ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಅಳವಡಿಸಲಾಗುವ ಲೈಟ್ ಗಳು ಹಗಲು ಬೆಳಕಿನಂತೆ ಪ್ರಕಾಶಮಾನವಾಗಿರಲಿವೆ. ದೀಪಾವಳಿಗೂ ಮುನ್ನ ಈ ಟ್ರ್ಯಾಕ್‌ಗಳಲ್ಲಿ ಲೈಟಿಂಗ್ ಕೆಲಸ ಆರಂಭಿಸಲಾಗುವುದು. ಈಗ ಚಾಲನಾ ಪರೀಕ್ಷೆಗಾಗಿ ಅಭ್ಯರ್ಥಿಗಳು ಹೆಚ್ಚು ಅವಧಿ ಕಾಯಬೇಕಾಗಿದೆ.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಪರೀಕ್ಷೆ ವಿಸ್ತರಣೆ ಸಾಧ್ಯತೆ

ಈಗ ಚಾಲನಾ ಪರವಾನಗಿ ಪಡೆಯಲು ಬೇಡಿಕೆ ಹೆಚ್ಚುತ್ತಿರುವುದರಿಂದ ದೆಹಲಿಯಲ್ಲಿ ಕೆಲವು ತಿಂಗಳುಗಳವರೆಗೆ ರಾತ್ರಿ ವೇಳೆ ಚಾಲನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಿಂದ ಚಾಲನಾ ಪರೀಕ್ಷೆಗೆ ಕಾಯುವ ಸಮಯ ಕಡಿಮೆಯಾಗಲಿದೆ. ಆದರೆ ಬೇಡಿಕೆ ಹೆಚ್ಚಾಗಿದ್ದರೆ, ರಾತ್ರಿ ಚಾಲನೆ ಪರೀಕ್ಷೆಯನ್ನು ಇನ್ನೂ ಕೆಲವು ತಿಂಗಳುಗಳವರೆಗೆ ವಿಸ್ತರಿಸುವ ಸಾಧ್ಯತೆಗಳಿವೆ.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಭಾನುವಾರವೂ ಚಾಲನಾ ಪರೀಕ್ಷೆ

ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, ಚಾಲನಾ ಪರೀಕ್ಷೆಗೆ ಕಾಯುವ ಸಮಯವನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಭಾನುವಾರವೂ ಚಾಲನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದರಿಂದ ಜನರು ಪರೀಕ್ಷೆ ತೆಗೆದುಕೊಳ್ಳಲು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಇಲಾಖೆಯ ಪ್ರಕಾರ, ಭಾನುವಾರ ಚಾಲನಾ ಪರೀಕ್ಷೆಯನ್ನು ತೆಗೆದು ಕೊಳ್ಳುವುದರಿಂದ ಡ್ರೈವಿಂಗ್ ಟೆಸ್ಟ್ ಗಾಗಿ ದೀರ್ಘ ಕಾಲ ಕಾಯುವ ಅವಧಿಯನ್ನು ಕಡಿಮೆ ಮಾಡಬಹುದು.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಆರ್‌ಸಿ, ಡಿ‌ಎಲ್ ಡಿಜಿಟಲ್ ದಾಖಲೆಗಳಿಗೆ ಅವಕಾಶ

ದೆಹಲಿ - ಎನ್‌ಸಿಆರ್ ಪ್ರದೇಶದಲ್ಲಿ ವಾಹನ ಸವಾರರು ವಾಹನಗಳ ಡಿಜಿಟಲ್ ದಾಖಲೆಗಳನ್ನು ಇಟ್ಟುಕೊಳ್ಳಲು ದೆಹಲಿ ಸರ್ಕಾರವು ಅವಕಾಶ ನೀಡಿದೆ. ಇದರಿಂದ ಇನ್ನು ಮುಂದೆ ವಾಹನ ಸವಾರರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಹಾರ್ಡ್ ಕಾಪಿಗಳನ್ನು ತಮ್ಮೊಂದಿಗೆ ಇಟ್ಟು ಕೊಳ್ಳುವುದು ಅನಿವಾರ್ಯವಲ್ಲ. ಹಾರ್ಡ್ ಕಾಪಿಗಳ ಬದಲಿಗೆ ಡಿಜಿಟಲ್ ದಾಖಲೆಗಳನ್ನು ಇಟ್ಟು ಕೊಳ್ಳಲು ಸರ್ಕಾರವು ಅನುಮೋದನೆ ನೀಡಿರುವ ಆ್ಯಪ್‌ಗಳನ್ನು ಬಳಸಬಹುದು.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ವಾಹನ ಸವಾರರು ವಾಹನ ತಪಾಸಣೆ ವೇಳೆಯಲ್ಲಿ ಡಿಜಿಲಾಕರ್ ಅಥವಾ ಎಂ ಪರಿವಾಹನ್ ನಂತಹ ಆ್ಯಪ್ ಗಳಲ್ಲಿ ಸಂಗ್ರಹವಾಗಿರುವ ದಾಖಲೆಗಳನ್ನು ತೋರಿಸಬಹುದು. ಈ ಡಿಜಿಟಲ್ ದಾಖಲೆಗಳನ್ನು ತೋರಿಸಿದ ನಂತರ ಪೊಲೀಸರು ಚಾಲನಾ ಪರವಾನಗಿ ಅಥವಾ ವಾಹನದ ಆರ್‌ಸಿ ದಾಖಲೆಗಳ ಮೂಲ ಪ್ರತಿಯನ್ನು ಹಾಜರು ಪಡಿಸುವಂತೆ ಒತ್ತಾಯಿಸುವಂತಿಲ್ಲ.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ದೆಹಲಿಯ ಸಾರಿಗೆ ಇಲಾಖೆಯು ಡಿಜಿಲಾಕರ್ ಪ್ಲಾಟ್‌ಫಾರಂ ಅಥವಾ ಎಂ ಪರಿವಾಹನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಿರುವಚಾಲನಾ ಪರವಾನಗಿ ಹಾಗೂ ನೋಂದಣಿ ಪ್ರಮಾಣಪತ್ರಗಳನ್ನು ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಮಾನ್ಯ ದಾಖಲೆಗಳೆಂದು ತಿಳಿಸಿದೆ. ಸಾರಿಗೆ ಇಲಾಖೆಯಿಂದ ನೀಡಲಾದ ಪ್ರಮಾಣಪತ್ರಗಳಂತೆಯೇ ಇವುಗಳನ್ನು ಕಾನೂನುಬದ್ಧವಾಗಿ ಗುರುತಿಸಲಾಗಿದೆ.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಇನ್ನು ಮುಂದೆ 15 ದಿನಗಳಲ್ಲಿ ಕೈ ಸೇರಲಿದೆ ಇ ಚಲನ್

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಇ ಚಲನ್ ಮತ್ತು ದಂಡಗಳಿಗೆ ಸಂಬಂಧಿಸಿದ ಪ್ರಕರಣಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ನಿಯಮಗಳ ಪ್ರಕಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು 15 ದಿನಗಳಲ್ಲಿ ಇ-ಚಲನ್ (ಎಲೆಕ್ಟ್ರಾನಿಕ್ ಚಲನ್) ಅನ್ನು ವಾಹನ ಸವಾರರ ಮನೆಗೆ ಕಳುಹಿಸಲಿದ್ದಾರೆ.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಕೇಂದ್ರ ಸಾರಿಗೆ ಇಲಾಖೆಯ ಹೊಸ ಅಧಿಸೂಚನೆಯಲ್ಲಿ ಸ್ಪೀಡ್ ಕ್ಯಾಮೆರಾ, ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾ, ಸ್ಪೀಡ್ ಗನ್‌, ಬಾಡಿ ವೇರಬಲ್ ಕ್ಯಾಮೆರಾ, ಡ್ಯಾಶ್‌ಬೋರ್ಡ್ ಕ್ಯಾಮೆರಾ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿ‌ಆರ್), ತೂಕದ ಯಂತ್ರ (ಡಬ್ಲ್ಯು‌ಐ‌ಎಂ) ಗಳನ್ನು ಬಳಸಲಾಗುವುದು ಎಂದು ಹೇಳಲಾಗಿದೆ. ಇವುಗಳನ್ನು ಸಂಚಾರ ನಿರ್ವಹಣೆಗಾಗಿ ಬಳಸಲಾಗುವುದು.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ದೆಹಲಿ ಸರ್ಕಾರವು ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸುವುದರ ಜೊತೆಗೆ ಆಗಸ್ಟ್ 11 ರಿಂದ ಮನೆಯಲ್ಲಿ ಕುಳಿತೇ ಚಾಲನಾ ಪರವಾನಗಿ ಪಡೆಯುವ ಸೌಲಭ್ಯವನ್ನು ಜಾರಿಗೆ ತಂದಿದೆ. ಇನ್ನು ಮುಂದೆ ದೆಹಲಿಯ ನಾಗರಿಕರು ಕಲಿಕಾ ಪರವಾನಗಿ ಅರ್ಜಿ, ಚಾಲನಾ ಪರವಾನಗಿ ನವೀಕರಣ, ಪರವಾನಗಿ ನವೀಕರಣ, ನೋಂದಣಿ ಪ್ರಮಾಣಪತ್ರ, ವಿಮಾ ಎನ್ಒಸಿ ಸೇರಿದಂತೆ ಸಾರಿಗೆ ಇಲಾಖೆಯ 33 ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಇದರಿಂದ ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯ ಬಯಸುವವರು ಚಾಲನಾ ಪರೀಕ್ಷೆ ಹಾಗೂ ಫಿಟ್ನೆಸ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಪಡೆಯಲು ಮಾತ್ರ ಸಾರಿಗೆ ಇಲಾಖೆಯ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ದೆಹಲಿ ಸರ್ಕಾರವು ಆರಂಭಿಸಿರುವ ಆನ್‌ಲೈನ್ ಸೇವೆಗಳನ್ನು ಪಡೆಯಲು ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು.

ರಾತ್ರಿ 10 ಗಂಟೆವರೆಗೂ ಡ್ರೈವಿಂಗ್ ಟೆಸ್ಟ್ ನಡೆಸಲು ಮುಂದಾದ ಸಾರಿಗೆ ಇಲಾಖೆ

ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು. ಸಾರ್ವಜನಿಕರಿಗೆ ಆಗುತ್ತಿದ್ದಅನಾನುಕೂಲವನ್ನು ತಪ್ಪಿಸಲು ದೆಹಲಿ ಸರ್ಕಾರವು ಸಾರಿಗೆ ಇಲಾಖೆಯ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇದರಿಂದ ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Driving test to be conducted till 10 pm in delhi details
Story first published: Wednesday, August 25, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X