ಕೊಟ್ಟ ಮಾತಿನಂತೆ ನಡೆದ ಡ್ರೋನ್ ಪ್ರತಾಪ್: ಬಿಗ್​ಬಾಸ್​ನಲ್ಲಿ ಗೆದ್ದ ಸ್ಕೂಟರ್ ಬಡ ಯುವಕನಿಗೆ ದಾನ

ಬಿಗ್​ಬಾಸ್ ಕನ್ನಡ ಸೀಸನ್ 10ರ (Bigg Boss Kannada Season 10) ಸ್ಪರ್ಧಿಯಾಗಿ, 113 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದು, ಕೊನೆಗೆ ಫಿನಾಲೆಯಲ್ಲಿ ರನ್ನರ್ ಅಪ್ ಪಟ್ಟವನ್ನು ಡ್ರೋನ್ ಪ್ರತಾಪ್ (Drone Prathap) ಅಲಂಕರಿಸಿದರು. ಡ್ರೋನ್ ಪ್ರತಾಪ್ ಇಂಥದ್ದೊಂದು ಸಾಧನೆ ಮಾಡುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಸ್ವತಃ ಅವರಿಗೂ ಆ ನಂಬಿಕೆ ಇರಲಿಲ್ಲ ಅನ್ಸುತ್ತೆ.

ಬಿಗ್​ಬಾಸ್​ ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಬಡ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾಗಳಲ್ಲ್ ಹಂಚಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಬಡ ಯುವಕನೊಬ್ಬನಿಗೆ ಎಲೆಕ್ಟ್ರಿಕ್ ಸ್ಕೂಟರ್ ಚಿತ್ರ ಹಂಚಿಕೊಂಡಿರುವ ಜೊತೆ ಮಾಹಿತಿಯನ್ನು ಬರೆದುಕೊಂಡಿದ್ದಾರೆ.

Drone Prathap Gifted Scooter

ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು.

ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್ ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿದು ನನಗೆ ತುಂಬಾ ಖುಷಿ ತಂದಿದೆ' ಎಂದು ಬರೆದುಕೊಂಡಿದ್ದಾರೆ. ಡ್ರೋನ್ ಪ್ರತಾಪ್​ರ ಈ ಕಾರ್ಯಕ್ಕೆ ಮೆಚ್ಚಿ ಹಲವರು ಆವರನ್ನು ಅಭಿನಂದಿಸಿ ಕಾಮೆಂಟ್ ಮಾಡಿದ್ದಾರೆ.

Drone Prathap Gifted Scooter

ಕೆಲವರು ಕೊಟ್ಟ ಮಾತಿನಂತೆ ನಡೆದ ನನ್ನ ಕರಿ ಚಿರತೆ .ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ, ನಿಮಗೆ ನಾವೂ ವೋಟ್ ಹಾಕಿದ್ದಕ್ಕೆ ಸಾರ್ಥಕ್ ಆಯ್ತಾ ಬ್ರೋ, ತುಂಬಾ ಒಳ್ಳೇ. ಕಾರ್ಯ ಎಂಬ ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ. ಪ್ರತಾಪ್​ರ ಈ ಕಾರ್ಯಕ್ಕೆ ಅತೀವ ಮೆಚ್ಚುಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಬಿಗ್​ಬಾಸ್ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್​ಗೆ 10 ಲಕ್ಷ ನಗದು ಬಹುಮಾನ, ಒಂದು ಎಲೆಕ್ಟ್ರಿಕ್ ಬೈಕ್ ಬಹುಮಾನವಾಗಿ ನೀಡಲಾಗಿತ್ತು.

ತನಗೆ ಬಹುಮಾನವಾಗಿ ಬಂದ 10 ಲಕ್ಷ ಹಣವನ್ನು ಸಹ ತಾವು ಬಡವರಿಗೆ ದಾನ ನೀಡುವುದಾಗಿ ಡ್ರೋನ್ ಪ್ರತಾಪ್ ಘೋಷಣೆ ಮಾಡಿದ್ದರು. ಆದರೆ ಆ ಹಣವನ್ನು ಪ್ರತಾಪ್ ಯಾರಿಗೆ ನೀಡಿದ್ದಾರೆಂಬ ಬಗ್ಗೆ ಮಾಹಿತಿ ಇನ್ನು ಬಹಿರಂಗಪಡಿಸಿಲ್ಲ. ಬಡ ಯುವಕನೊಬ್ಬನಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಬೌನ್ಸ್ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಆಗಿರಬಹುದು. ಈ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ ಶೈಲಿಯನ್ನು ಹೊಂದಿದೆ. ಮುಂಭಾಗದಿಂದ ಪ್ರಾರಂಭಿಸಿ, ಇದು ಎಲ್ಇಡಿ ಡಿಆರ್ಎಲ್ ಗಳೊಂದಿಗೆ ವೃತ್ತಾಕಾರದ ಹೆಡ್ ಲ್ಯಾಂಪ್ ಅನ್ನು ಹೊಂದಿದೆ ಮತ್ತು ಅದು ವೃತ್ತಾಕಾರದ ಆಕಾರವನ್ನು ಹೊಂದಿದೆ. ಎರಡು ಪ್ರೊಜೆಕ್ಟರ್ ಯುನನಿಟ್ ಗಳು ಹೆಚ್ಚಿನ ಮತ್ತು ಲೋ ಬೀಮ್ ಗಳನ್ನು ಹೊಂದಿವೆ. ಸ್ಕೂಟರ್ ವಿಶಿಷ್ಟವಾದ ಹ್ಯಾಂಡಲ್‌ಬಾರ್ ಅನ್ನು ಸಹ ಪಡೆಯುತ್ತದೆ.

ಈ ಹೆಡ್‌ಲ್ಯಾಂಪ್ ಕ್ಲಸ್ಟರ್ ಹ್ಯಾಂಡಲ್‌ಬಾರ್‌ಗಳ ಮೇಲ್ಭಾಗದಲ್ಲಿ ಇರುತ್ತದೆ. ಬೌನ್ಸ್ ಇನ್ಫಿನಿಟಿ ಇ1 ಕನಿಷ್ಠ ಬಾಡಿ ಲೈನ್‌ಗಳನ್ನು ಹೊಂದಿದೆ. ಅದೇ ಸೈಡ್ ಪ್ಯಾನೆಲ್‌ಗಳಲ್ಲಿ ಕಂಡುಬರುತ್ತದೆ. ಹಿಂಬದಿಯ ಕಡೆಗೆ ಚಲಿಸುವಾಗ, ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಟರ್ನ್ ಸಿಗ್ನಲ್ ಇಂಡೀಕೆಟರ್ ಸಹ ಎಲ್ಇಡಿ ಯುನಿಟ್ ಗಳಾಗಿವೆ. ಇದು 2kWh ಬ್ಯಾಟರಿ ಪ್ಯಾಕ್‌ ನೊಂದಿಗೆ 2.2kW ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ.

ಈಗ ಪವರ್ ಅಂಕಿಅಂಶಗಳು ಉತ್ತಮವಾಗಿಲ್ಲ, ಆದರೆ ಸ್ಕೂಟರ್ 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಪರಿಭಾಷೆಯಲ್ಲಿ ಅದು ಕೇವಲ ಅದ್ಭುತವಾಗಿದೆ. ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಲ್ಟಿಪಲ್ ರೈಡಿಂಗ್ ಮೋಡ್ ಗಳನ್ನು ಸಹ ಪಡೆಯುತ್ತದೆ. ಇದು ಪವರ್, ಇಕೋ ಮತ್ತು ಡ್ರ್ಯಾಗ್ ಆಗಿದೆ. ಇದರಲ್ಲಿ ಇಕೋ ಮೋಡ್‌ನಲ್ಲಿ 35 ಕಿ.ಮೀ ಮತ್ತು ಪವರ್ ಮೋಡ್‌ನಲ್ಲಿ 65 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Article Published On: Wednesday, February 21, 2024, 13:38 [IST]
English summary
Drone prathap gifted his electric scooter which he won in bigg boss kannada details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+