ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ

ಭಾರತದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಹೆಚ್ಚಿನ ಪ್ರಮಾಣದ ಅಪಘಾತಗಳಾಗುತ್ತವೆ. ಸಂಚಾರಿ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ ಹೊಸ ಮೋಟಾರು ವಾಹನ ಕಾಯ್ದೆಯನ್ನು 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ತಂದಿತು.

ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ

ಈ ಕಾಯ್ದೆಯನ್ವಯ ಕುಡಿದು ವಾಹನ ಚಾಲನೆ ಮಾಡುವವರಿಗೆ ರೂ.10,000 ದಂಡ ವಿಧಿಸಲಾಗುತ್ತದೆ. ಪೊಲೀಸರು ಕುಡಿದು ವಾಹನ ಚಾಲನೆ ಮಾಡುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದಾರೆ. ಕಾನೂನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ಕುಡಿದು ವಾಹನ ಚಾಲನೆ ಮಾಡಿ ಮಹಿಳೆಯ ಮೇಲೆ ಕಾರು ಹತ್ತಿಸಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈ ಇಡೀ ಘಟನೆ ಹತ್ತಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ರಸ್ತೆ ದಾಟಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಕಾರೊಂದು ಆ ಮಹಿಳೆಗೆ ಗುದ್ದಿ ಅಲ್ಲಿಯೇ ನಿಲ್ಲುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ

ಕಾರು ಗುದ್ದಿದ ತಕ್ಷಣ ಮಹಿಳೆ ರಸ್ತೆ ಮೇಲೆ ಬೀಳುತ್ತಾರೆ. ಸ್ಥಳದಲ್ಲಿದ್ದವರು ಆಕೆಯನ್ನು ರಕ್ಷಿಸಲು ಮುಂದಾಗುತ್ತಾರೆ. ಆದರೆ ಕಾರು ಆ ಮಹಿಳೆಯನ್ನು ಗುದ್ದಿಕೊಂಡು ಮುಂದೆ ಸಾಗುತ್ತದೆ. ಆ ಮಹಿಳೆ ಕಾರಿನ ಕೆಳಗೆ ಬರುತ್ತಾರೆ.

ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ

ಮಹಿಳೆ ಕಾರಿನ ಕೆಳಗೆ ಬಂದ ನಂತರವೂ, ಚಾಲಕನು ಕಾರು ನಿಲ್ಲಿಸದೇ ಇನ್ನಷ್ಟು ದೂರ ಸಾಗುತ್ತಾನೆ. ಇದರಿಂದ ಆ ಮಹಿಳೆಯು ಹಲವು ಅಡಿಗಳಷ್ಟು ಮುಂದೆ ಸಾಗುತ್ತಾರೆ. ಮಹಿಳೆ ಕಾರಿನ ಹಿಂದೆ ಬಿದ್ದ ನಂತರ ಮುಂದೆ ಹೋಗಿದ್ದ ಕಾರು ನಿಲ್ಲುತ್ತದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸ್ಥಳದಲ್ಲಿದ್ದವರು ಕಾರು ಚಾಲಕನನ್ನು ಹಿಡಿದಿದ್ದಾರೆ. ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಹಿಳೆಯು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ದೆಹಲಿಯ ಗಾಜಿಪುರ ಪ್ರದೇಶದ ಚಿಲ್ಲಾ ಗ್ರಾಮದ ಬಳಿ ನಡೆದಿದೆ.

ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ

ಈ ಘಟನೆಯ ಸಂಬಂಧ ಪೊಲೀಸರು ಯೋಗೇಂದ್ರ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಆರೋಪಿಯು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಕುಡಿದು ಕಾರು ಚಾಲನೆ ಮಾಡುತ್ತಿದ್ದ ವಿಷಯವು ಸಹ ತನಿಖೆಯಲ್ಲಿ ಬಯಲಾಗಿದೆ.

Most Read Articles

Kannada
English summary
Drunk police sub inspector drives car over a woman. Read in Kannada.
Story first published: Monday, July 6, 2020, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X