ಕುಡುಕಿಯ ಅವಾಂತರದ ವಿಡಿಯೋ...ಮೂವರಿಗೆ ಡಿಕ್ಕಿ, ಸ್ಥಳೀಯರ ಮೇಲೆ ಹಲ್ಲೆ...ಪರಾರಿಗೆ ಯತ್ನ!

ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಡ್ರೈವಿಂಗ್ ಕುರಿತ ಕೆಲವು ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಏಕೆಂದರೆ ಚಾಲನಾ ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿ ಓಡಿಸುವುದಲ್ಲದೇ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಇಂಥಹದ್ದೇ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಮಹಿಳೆಯೊಬ್ಬರು ಕುಡಿದು ಚಾಲನೆ ಮಾಡಿ ಮೂವರನ್ನು ಗಾಯಗೊಳಿಸಿದ್ದಲ್ಲದೇ ಮನಬಂದತೆ ನಿಂದಿಸಿದ್ದಾರೆ.

ಪುದುಚೇರಿಯ ಪಂಡಕ್ಕಲ್‌ನಲ್ಲಿ ಈ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ಮಹಿಳೆಯನ್ನು ರಸೀನಾ ಎಂದು ಗುರುತಿಸಲಾಗಿದೆ. ತನ್ನ ಕಾರಿನೊಂದಿಗೆ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರನ್ನು ಗಾಯಗೊಳಿಸಿದ್ದಾರೆ. ಮದ್ಯ ಸೇವಿಸಿ ವಾಹನವನ್ನು ಏಕೆ ಓಡಿಸಬಾರದು ಎಂಬಂತೆ ಮಹಿಳೆ ವರ್ತಿಸಿದ್ದಾರೆ. ಮಹಿಳಾ ಕಾರ್ ಡ್ರೈವರ್‌ ವೀಡಿಯೊ ಇದೀಗ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗತ್ತಿದ್ದು, ಆಕೆ ತನ್ನ ಕಾರನ್ನು ಸ್ಕೂಟರ್‌ಗೆ ಡಿಕ್ಕಿ ಹೊಡೆದ ನಂತರ ರಸ್ತೆಯಲ್ಲಿ ಗಲಾಟೆಯನ್ನು ಸೃಷ್ಟಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕುಡುಕಿಯ ಅವಾಂತರದ ವಿಡಿಯೋ...ಮೂವರಿಗೆ ಡಿಕ್ಕಿ, ಸ್ಥಳೀಯರ ಮೇಲೆ ಹಲ್ಲೆ...ಪರಾರಿಗೆ ಯತ್ನ!

ಅಪಘಾತದ ನಂತರ ಮಹಿಳೆ ಸೇರಿದಂತೆ ಅವರನ್ನು ಪರಿಶೀಲಿಸಲು ಸ್ಥಳೀಯರು ಕಾರಿನ ಸುತ್ತಲೂ ಜಮಾಯಿಸಿದರು. ಅಪಘಾತದ ಬಗ್ಗೆ ಕೇಳಿದ ಸ್ಥಳೀಯರೊಂದಿಗೂ ಮಹಿಳೆ ಜಗಳವಾಡಿದ್ದಾರೆ. ಕಾರು ಚಲಾಯಿಸುತ್ತಿದ್ದ ರಸೀನಾ ಪಾನಮತ್ತಳಾಗಿದ್ದು, ಕೂಡಲೇ ವಾಹನದ ಸುತ್ತ ನೆರೆದಿದ್ದ ಸ್ಥಳೀಯರನ್ನು ನಿಂದಿಸಲು ಆರಂಭಿಸಿದ್ದಾರೆ. ನಂತರ ಆಕೆ ಸ್ಥಳದಿಂದ ತಪ್ಪಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ, ಸ್ಥಳೀಯರು ಆಕೆಯನ್ನು ಎಲ್ಲಿಯೂ ಹೋಗದಂತೆ ತಡೆದಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ವಾಹನದಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ.

ಹಲ್ಲೆ ಮಾಡಿ ಫೋನ್ ಎಸೆದು ಜಗಳ
ಪೊಲೀಸರು ಬರುವ ಮುನ್ನ ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರನ್ನು ನಿಂದಿಸಿದ್ದಾರೆ. ವರದಿಗಳ ಪ್ರಕಾರ, ರಸೀನಾ ಸ್ಥಳದಲ್ಲಿದ್ದ ಕೆಲವು ಸ್ಥಳೀಯರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಆಕೆಯೊಂದಿಗೆ ಜಗಳವಾಡಿದ ಬೈಕ್ ಸವಾರನ ಫೋನ್ ಅನ್ನು ಎಸೆದಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರಸೀನಾಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರಸೀನಾ ಪಾನಮತ್ತಳಾಗಿದ್ದು, ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದ್ದು ಅಪಘಾತಕ್ಕೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಮತ್ತು ರಸ್ತೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವುದು ತುಂಬಾ ಅಪಾಯಕಾರಿ, ಭಾರತದಲ್ಲಿ ರಕ್ತದಲ್ಲಿನ ಆಲ್ಕೋಹಾಲ್‌ನ ಗರಿಷ್ಠ ಮಿತಿ 100 ಮಿ.ಲೀಗೆ 30 ಮಿ.ಗ್ರಾಂ ಚಾಲಕ ಕುಡಿದು ವಾಹನ ಚಲಾಯಿಸಿದರೆ ಅಥವಾ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣವು ಮೇಲೆ ತಿಳಿಸಿದ ಮಿತಿಗಿಂತ ಹೆಚ್ಚಿದ್ದರೆ ಚಾಲಕನ ಪರವಾನಗಿಯನ್ನು ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಹಕ್ಕನ್ನು ಪೊಲೀಸ್ ಅಧಿಕಾರಿಗಳು ಹೊಂದಿರುತ್ತಾರೆ.

ಹಲವು ರಾಜ್ಯಗಳಲ್ಲಿ ಜನರು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಜೈಲಿಗೆ ಹೋಗಬಹುದು ಅಥವಾ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಚಾಲಕನು ಬ್ರೀತ್‌ಲೈಜರ್ ಯಂತ್ರವನ್ನು ಬಳಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ಪೊಲೀಸರು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯನ್ನು ಮಾಡಬಹುದು. ಇಂಥಹದೇ ಮತ್ತೊಂದು ಘಟನೆ ಕಳೆದ ತಿಂಗಳು ನಡೆದಿತ್ತು. ಮಹೀಂದ್ರಾ ಥಾರ್ ಚಾಲಕನೊಬ್ಬ ಎಸ್‌ಯುವಿಯನ್ನು ಬಹು ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸಾರ್ವಜನಿಕರಿಂದ ಥಳಿಸಿಕೊಂಡಿದ್ದನು.

ಈ ಕುರಿತ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಅಪಘಾತದ ಸ್ಥಳದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಕುಡಿದ ಮಹೀಂದ್ರಾ ಥಾರ್ ಚಾಲಕ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದ. ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಪಟಿಯಾಲಾ ಪೊಲೀಸರು ಅಂತಿಮವಾಗಿ ಚಾಲಕನನ್ನು ವಶಕ್ಕೆ ತೆಗೆದುಕೊಂಡರು. ಕಾರಿನಲ್ಲಿದ್ದ ಮೂವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಸೆಕ್ಷನ್ 279 (ಸಾರ್ವಜನಿಕ ರೀತಿಯಲ್ಲಿ ದುಡುಕಿನ ಚಾಲನೆ) ಅಡಿಯಲ್ಲಿ ಜೈಲಿಗೆ ಅಟ್ಟಲಾಗಿದೆ.

Most Read Articles

Kannada
English summary
Drunken incident collision with three attack on the questioner video viral
Story first published: Wednesday, December 7, 2022, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X