ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಭಾರತದ ರಸ್ತೆಗಳಲ್ಲಿ ಸೂಪರ್‍‍ಕಾರುಗಳನ್ನು ಕಾಣುವುದು ಅಪರೂಪದ ದೃಶ್ಯವಾಗಿದೆ. ಆದರೆ ದುಬೈನಂತಹ ಶ್ರೀಮಂತ ರಾಷ್ಟ್ರದ ನಗರಗಳಲ್ಲಿ ಸೂಪರ್ ಕಾರುಗಳು ಸಾಮಾನ್ಯವಾಗಿವೆ. ಇಂತಹ ಶ್ರೀಮಂತ ರಾಷ್ಟ್ರದ ಪೊಲೀಸರ ಬಳಿ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರುಗಳಿವೆ.

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಇತ್ತೀಚೆಗೆ ದುಬೈ ಪೊಲೀಸರ ಪಡೆಗೆ ಐಷರಾಮಿ 2021ರ ಜೆನೆಸಿಸ್ ಜಿವಿ80 ಕಾರು ಸೇರಿಕೊಂಡಿದೆ. ಜೆನೆಸಿಸ್ ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯಾದ ಹ್ಯುಂಡನ ಅಂಗಸಂಸ್ಥೆಯಾಗಿದೆ. ಐಷಾರಾಮಿ 2021ರ ಜೆನೆಸಿಸ್ ಜಿವಿ80 ಕಾರು ದುಬೈ ಪೊಲೀಸ್ ಜನರಲ್ ಕಮಾಂಡ್‌ನ ಒಂದು ಭಾಗವಾಗಿದ್ದು, ಈ ಕಾರು ಬಿಳಿ ಮತ್ತು ಹಸಿರು ಬಣ್ಣಗಳಿಂದ ಕೂಡಿದೆ. ಜೆನೆಸಿಸ್ ಜಿವಿ80 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಜೆನೆಸಿಸ್ ಜಿವಿ80 ಕಾರು ದುಬೈ ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಬಳಿಕ ಈ ಕುರಿತು ಜೆನೆಸಿಸ್ ಯುಎಇ ನಿರ್ದೇಶಕ ಸುಲಿಮಾನ್ ಅಲ್ಜಾಬೆನ್ ಅವರು ಮಾತನಾಡಿ, ಸಂಚಾರ ಸುರಕ್ಷತೆಯ ಬಗ್ಗೆ ಸಮಾಜದ ಎಲ್ಲಾ ವಿಭಾಗಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ದುಬೈ ಪೊಲೀಸರೊಂದಿಗೆ ಸಹಭಾಗಿತ್ವ ವಹಿಸುವುದರಲ್ಲಿ ನಾವು ಹೆಮ್ಮೆ ಪಡುತ್ತೇವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ದುಬೈ ಪೊಲೀಸರ ಕಾರ್ಯಾಚರಣೆಯನ್ನು ಸುಲಭಗೊಳಿಸಲು ಮತ್ತು ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡ ಹೈಟೆಕ್ ಜೆನೆಸಿಸ್ ಜಿವಿ80 ಕಾರು ಕೊಡುಗೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಐಷಾರಾಮಿ ಜೆನೆಸಿಸ್ ಜಿವಿ80 ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 2.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 300 ಬಿಹೆಚ್‌ಪಿ ಪವರ್ ಅನ್ನು ಹೊಂದಿದೆ. ಇದರೊಂದಿಗೆ 3.5-ಲೀಟರ್ ವಿ6 ಎಂಜಿನ್ ಆಯ್ಕೆಯನ್ನು ಕೂಡ ಹೊಂದಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಈ ಎಂಜಿನ್ 375 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಜಿವಿ80 ಅಲ್ಲಿನ ಕೆಲವು ಕಾರುಗಳಂತೆ ಪವರ್ ಫುಲ್ ಆಗಿದರೂ, ಇದು ಗಸ್ತು ತಿರುಗುವಾಗ ಅಧಿಕಾರಿಗಳಿಗೆ ಅನುಕೂಲಕರವಾಗಿರುತ್ತದೆ.

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಐಷಾರಾಮಿ ಜೆನೆಸಿಸ್ ಜಿವಿ8 ಕಾರಿನಲ್ಲಿ ಕಂಟ್ರೋಲ್, ಆಕ್ಟಿವ್ ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಆಟೋಮ್ಯಾಟಿಕ್ ಬ್ರೇಕ್, ರಿಮೋಟ್ ಪಾರ್ಕಿಂಗ್ ಹಾಗೂ ಜೆನೆಸಿಸ್ ಕಾರ್ಬ್ ಸಿಸ್ತಂಗಳನ್ನು ಹೊಂದಿದೆ. ಚಾಲಕರು ಕಾರಿನ ಇನ್ಫೋಟೇನ್‌ಮೆಂಟ್ ಸ್ಕ್ರೀನ್ ಮೂಲಕ ಈ ಕಾರ್ ಅನ್ನು ಕಂಟ್ರೋಲ್ ಮಾಡಬಹುದು.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ಇನ್ನು ಈ ಕಾರಿನಲ್ಲಿ ಡ್ಯುಯಲ್-ಸ್ಪೋಕ್ ಸ್ಟೀಯರಿಂಗ್ ವ್ಹೀಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್‌ನಲ್ಲಿ ದೊಡ್ಡ ಇನ್ ಫೋಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಗೇರ್ ಸೆಲೆಕ್ಟರ್ ಸರ್ಕ್ಯೂಲರ್ ಶೇಪಿನಲ್ಲಿದೆ. ಜೆನೆಸಿಸ್ ಕ್ಯಾಬಿನ್ ಅನ್ನು ವುಡ್ ಹಾಗೂ ಲೆದರ್ ನಿಂದ ವಿನ್ಯಾಸಗೊಳಿಸಿದೆ.

ದುಬೈ ಪೊಲೀಸ್ ಪಡೆ ಸೇರಿದ ಐಷಾರಾಮಿ ಜೆನೆಸಿಸ್ ಜಿವಿ80 ಕಾರು

ದುಬೈ ಪೋಲಿಸ್ ಪಡೆಯು ಬುಗಾಟಿ ವೇರಾನ್, ಲ್ಯಾಂಬೂರ್ಗಿನಿ ಅವೆಂಟಡಾರ್, ಪೋರ್ಷೆ 918 ಸ್ಪೈಡರ್, ಆಯ್ಸ್ಟನ್ ಮಾರ್ಟಿನ್ ಒನ್ -77, ಲೈಕಾನ್ ಹೈಪರ್ ಸ್ಪೋರ್ಟ್, ಆಡಿ ಆರ್8, ಬೆಂಟ್ಲೆ ಕಾಂಟಿನೆಂಟಲ್ ಜಿಟಿ, ಫೆರಾರಿ ಎಫ್ಎಫ್, ಬಿಎಂಡಬ್ಲ್ಯು ಐ8, ಫೋರ್ಡ್ ಮಸ್ತಾಂಗ್, ಮೆಕ್ಲಾರೆನ್ ಎಂಪಿ 4-12 ಸಿ, ಮರ್ಸಿಡಿಸ್ ಬೆಂಝ್ ಎಸ್ಎಲ್ಎಸ್ ಎಎಂಜಿ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Dubai Police Adds Genesis GV80 Petrol Luxury Suv To Its Fleet. Read In Kananda.
Story first published: Tuesday, May 25, 2021, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X